ಮಂಗಳೂರು ಮೂಲದ ಪ್ರಭಾತ್ ಕುಮಾರ್ ಕರಿಯಪ್ಪ ಅವರು ಜಮ್ಮು ಕಾಶ್ಮೀರದಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದು ಜಮ್ಮುವಿನ ವೈಷ್ಣೋದೇವಿಯಿಂದ ಪಾದಯಾತ್ರೆ ಆರಂಭಿಸಿದ್ದರು. ಇದೀಗ ಪಾದಯಾತ್ರೆ ಮೂಲಕ ಮಂಗಳೂರಿಗೆ ಆಗಮಿಸಿದ್ರು.
ಮಂಗಳೂರಿನಲ್ಲಿ ಹೌಸ್ ನರ್ಸಿಂಗ್ ಕೆಲಸ ಮಾಡುತ್ತಿದ್ದ ಪ್ರಭಾತ್ ಕುಮಾರ್ ವಿಮಾನದ ಮೂಲಕ ಜಮ್ಮುವಿನ ವೈಷ್ಣೋದೇವಿಗೆ ತೆರಳಿದ್ದರು. ಆಗಸ್ಟ್ 31 ರಿಂದ ಪಾದಯಾತ್ರೆ ಆರಂಭಿಸಿದ ಅವರು 108 ದಿನಗಳನ್ನು ಕ್ರಮಿಸಿ ಇಂದು ಮಂಗಳೂರು ತಲುಪಿದರು. ಈ ಸಂದರ್ಭದಲ್ಲಿ ಮಂಗಳೂರಿನ ಅಯ್ಯಪ್ಪ ಮಾಲಾಧಾರಿಗಳು ಅವರಿಗೆ ಆತ್ಮೀಯ ಸ್ವಾಗತ ಕೋರಿದರು.
70 ಲಕ್ಷ ಜೀವ ರಾಶಿಗಳಿಗೆ ಸುಖ ಶಾಂತಿ ನೆಮ್ಮದಿ, ಮುಕ್ತಿ ನೀಡುವ ಬೇಡಿಕೆಯೊಂದಿಗೆ ತಾವು ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿರುವುದಾಗಿ ಮಾಲಾಧಾರಿಯೂ ಆಗಿರುವ ಪ್ರಭಾತ್ ಕುಮಾರ್ ಹೇಳಿದರು.
