ನವದೆಹಲಿ: ಉಕ್ರೇನ್ ನಿಂದ 219 ಭಾರತೀಯರನ್ನು ಏರ್ ಲಿಫ್ಟ್ ಮಾಡಿದಂತ ಮೊದಲ ವಿಮಾನ ಮುಂಬೈಗೆ ರೊಮೇನಿಯಾದಿಂದ ಹೊರಟಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಂ ಡಾ.ಎಸ್. ಜೈಶಂಕರ್ ಹೇಳಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ಉಕ್ರೇನ್ ನಲ್ಲಿ ಸಿಲುಕಿದ್ದಂತ 219 ಭಾರತೀಯರನ್ನು ಇಂದು ರೊಮೇನಿಯಾದಿಂದ ಏರ್ ಇಂಡಿಯಾ ವಿಮಾನದ ಮೂಲಕ ಲಿಫ್ಟ್ ಮಾಡಲಾಗಿದೆ.
ನಾವು ಉಕ್ರೇನ್ ನಲ್ಲಿರುವಂತ ಭಾರತೀಯರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮ ತಂಡಗಳು ದಿನದ 24 ಗಂಟೆಯೂ ಭಾರತೀಯರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ನಾನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಮಾನ ಇಂದು ಸಂಜೆ ಮುಂಬೈ ತಲುಪಲಿದೆ.