Monday, July 15, 2024
spot_img
More

  Latest Posts

  500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

  ಹೊಸದಿಲ್ಲಿ: 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದಾರೆ.

  “ಆರ್‌ ಬಿಐ ರೂ. 500 ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ; ಸಾರ್ವಜನಿಕರು ಊಹಾಪೋಹ ಮಾಡಬಾರದು ಎಂದು ವಿನಂತಿಸುತ್ತಿದ್ದೇವೆ” ಎಂದು ಎಫ್‌ವೈ 24 ರ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಅನಾವರಣಗೊಳಿಸಿದ ನಂತರ ದಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

  2,000 ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಆರ್‌ ಬಿಐ ಗವರ್ನರ್ ಈ ಸ್ಪಷ್ಟನೆ ನೀಡಿದ್ದಾರೆ. ಚಲಾವಣೆಯಲ್ಲಿದ್ದ ರೂ.2000 ನೋಟುಗಳಲ್ಲಿ ಶೇ.50ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ದಾಸ್ ಹೇಳಿದ್ದಾರೆ. ವಾಪಸ್ ಬಂದಿರುವ ನೋಟುಗಳ ಮೌಲ್ಯ 1.82 ಲಕ್ಷ ಕೋಟಿ ರೂ.ಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  “2,000 ರೂ.ಗಳ ಒಟ್ಟು ರೂ. 3.62 ಲಕ್ಷ ಕೋಟಿ ರೂ. ನೋಟುಗಳು ಚಲಾವಣೆಯಲ್ಲಿವೆ. ಘೋಷಣೆಯ ನಂತರ ಸುಮಾರು ರೂ. 1.8 ಲಕ್ಷ ಕೋಟಿ ರೂ. ರೂ. 2,000 ನೋಟುಗಳು ವಾಪಸ್ ಬಂದಿವೆ. ಇದು ಚಲಾವಣೆಯಲ್ಲಿದ್ದ 2,000 ನೋಟುಗಳ ಸರಿಸುಮಾರು ಶೇ. 50ರಷ್ಟು. .,” ಅವರು ವಿವರಿಸಿದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss