Monday, November 29, 2021

ಮಂಗಳೂರು: ನಾಗಬನ ಧ್ವಂಸ ಪ್ರಕರಣ; 8 ಆರೋಪಿಗಳ ಬಂಧನ

ಮಂಗಳೂರು: ನಗರದ ಕೂಳೂರು ಹಾಗೂ ಕೋಡಿಕಲ್ ನಲ್ಲಿ ನಾಗಬನಕ್ಕೆ ನುಗ್ಗಿ ನಾಗದೇವರ ಬಿಂಬದ ಕಲ್ಲಿಗೆ ಹಾನಿ ಮಾಡಿದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ಸಫ್ವಾನ್, ಪ್ರವೀಣ್...
More

  Latest Posts

  ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್

  ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ....

  ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಸವರಾಜ ಬೊಮ್ಮಾಯಿ

  ತುಮಕೂರು : ರಾಜ್ಯದಲ್ಲಿ ಹೊಸ ಒಮಿಕ್ರಾನ್ ವೈರಸ್ (Omicron Variant ) ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ (Corona Test mandatory) ಮಾಡಲಾಗಿದೆ...

  ಉಡುಪಿ ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ಯಕ್ಷಗಾನ ವೇಷಧಾರಿಗಳು -ಯಕ್ಷಗಾನ ಪ್ರಿಯರಿಂದ ಆಕ್ರೋಶ

  ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ...

  ಸುರತ್ಕಲ್: ದುಷ್ಕರ್ಮಿಯಿಂದ ATMಗೆ ಹಾನಿ

  ಸುರತ್ಕಲ್: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿಯ ಎಸ್ ಬಿ ಐ ಬ್ಯಾಂಕಿನ ATM ನ್ನು ವ್ಯಕ್ತಿ ಯೋರ್ವ ಹಾನಿ ಮಾಡಿದ ಘಟನೆ ನಡೆದಿದೆ.ಕಳೆದ ಸೆ.9...

  ಮಂಗಳೂರು: 12 ಲಕ್ಷ ಸಾಲ ನೀಡುವುದಾಗಿ ಹೇಳಿ 1.25 ಲಕ್ಷ ರೂ. ವಂಚನೆ

  ಮಂಗಳೂರು: ವ್ಯಕ್ತಿಯೋರ್ವರಿಗೆ 12 ಲಕ್ಷ ರೂ. ಸಾಲ ನೀಡುವುದಾಗಿ ಹೇಳಿ 1,25,400 ರೂ. ವಂಚನೆಗೈದಿರುವ ಬಗ್ಗೆ ಮಂಗಳೂರಿನ ವ್ಯಕ್ತಿಯೊಬ್ಬರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಮೋಸ ಹೋಗಿರುವ ವ್ಯಕ್ತಿಗೆ 2021 ಅಕ್ಟೋಬರ್ 19ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಮೊಬೈಲ್ ಕರೆ ಬಂದಿದ್ದು, ಅತ್ತ ಕಡೆಯಿಂದ ಆದಿತ್ಯ ಬಿರ್ಲಾ ಫೈನಾನ್ಸ್ ಕಂಪೆನಿ ಸಿಬ್ಬಂದಿ ಎಂಬುದಾಗಿ ವ್ಯಕ್ತಿ ತಿಳಿಸಿದ್ದಾನೆ. ಆತ ಮತ್ತೊಬ್ಬ ಅಪರಿಚಿತ ವ್ಯಕ್ತಿಗೆ ಕಾನ್ಫರೆನ್ಸ್ ಕಾಲ್ ಕನೆಕ್ಟ್ ಮಾಡಿದ್ದಾನೆ. ಆತ ಸಂತ್ರಸ್ತ ವ್ಯಕ್ತಿಯಲ್ಲಿ ಮಾತನಾಡಿ, 12 ಲಕ್ಷ ರೂ. ಸಾಲವನ್ನು ಕಂಪೆನಿಯಿಂದ ಕೊಡುವುದಾಗಿ ತಿಳಿಸಿದ್ದಾನೆ.

  ಅದಕ್ಕೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ವಾಟ್ಸ್ಆ್ಯಪ್ ಮಾಡಬೇಕೆಂದು ತಿಳಿಸಿದ್ದಾನೆ. ಬಳಿಕ ಮತ್ತೊಬ್ಬ ಅಪರಿಚಿತ ಕರೆ ಮಾಡಿ ಭಾರತೀಯ ಅಕ್ಸ ಇನ್ಶೂರೆನ್ಸ್ ಪಾಲಿಸಿ ಬಾಂಡ್ ಅನ್ನು ಆದಿತ್ಯ ಬಿರ್ಲಾ ಫೈನಾನ್ಸ್ ಕಂಪೆನಿ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕೆಂದು ತಿಳಿಸಿದ್ದಾನೆ.

  ಬಳಿಕ ಅ.23ರಂದು ಭಾರತೀಯ ಅಕ್ಸ ಇನ್ಶೂರೆನ್ಸ್ ಸಿಬ್ಬಂದಿ ಕರೆ ಮಾಡಿರುವಾತ ಅರ್ಧ ವರ್ಷದ ಪ್ರೀಮಿಯಂ 60,000 ರೂ. ಹಾಗೂ ಜಿಎಸ್ಟಿ 2,700 ರೂ. ಪಾವತಿಸುವಂತೆ ತಿಳಿಸಿ ಲಿಂಕ್ ಒಂದನ್ನು ಕಳುಹಿಸಿದ್ದಾನೆ. ಆ ಲಿಂಕ್ ಅನ್ನು ಒಪನ್ ಮಾಡಿ ತನ್ನ ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಂದ 22,700 ರೂ. ಹಾಗೂ ಐಡಿಎಫ್ ಸಿ ಕ್ರೆಡಿಟ್ ಕಾರ್ಡ್ ನಿಂದ 40,000 ರೂ. ಪಾವತಿ ಮಾಡಿದ್ದರು. ಅ.28ರಂದು ವ್ಯಕ್ತಿಯೋರ್ವ ಕರೆ ಮಾಡಿ ಒಂದು ವರ್ಷದ ಪ್ರೀಮಿಯಂ ಪಾವತಿಸಿದರೆ ಸಾಲ ನೀಡುವುದಾಗಿ ತಿಳಿಸಿದ್ದಾನೆ. ಅದಕ್ಕೆ ಮತ್ತೆ ಲಿಂಕ್ ಕಳಿಸಿದ್ದು, ಮತ್ತೆ 62,700 ರೂ. ಪಾವತಿ ಮಾಡಿದ್ದರು. ಹೀಗೆ ಹಂತ ಹಂತವಾಗಿ ಒಟ್ಟು 1,25,400 ರೂ. ಹಣ ಪಾವತಿ ಮಾಡಿದ್ದರೂ, ಸಾಲ ಕೊಡದೆ ಮೋಸ ಮಾಡಿರುವುದಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ಮೋಸ ಹೋಗಿರುವ ವ್ಯಕ್ತಿ ದೂರು ನೀಡಿದ್ದಾರೆ.

  Latest Posts

  ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಕೊಡುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್

  ತುಮಕೂರು: ರಾಜ್ಯದ ಎರಡು ಮೂರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಧಾರವಾಡದ ಎಸ್ ಡಿ ಎಂ ಕಾಲೇಜು,ಬೆಂಗಳೂರಿನ ಒಂದು ಶಾಲೆ,ಮೈಸೂರಿನಲ್ಲಿ ಪಿಯು ಕಾಲೇಜಿನ 5 ಮಕ್ಕಳಿಗೆ ಪಾಸಿಟಿವ್ ಬಂದಿದೆ....

  ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಸವರಾಜ ಬೊಮ್ಮಾಯಿ

  ತುಮಕೂರು : ರಾಜ್ಯದಲ್ಲಿ ಹೊಸ ಒಮಿಕ್ರಾನ್ ವೈರಸ್ (Omicron Variant ) ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ (Corona Test mandatory) ಮಾಡಲಾಗಿದೆ...

  ಉಡುಪಿ ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ಯಕ್ಷಗಾನ ವೇಷಧಾರಿಗಳು -ಯಕ್ಷಗಾನ ಪ್ರಿಯರಿಂದ ಆಕ್ರೋಶ

  ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ...

  ಸುರತ್ಕಲ್: ದುಷ್ಕರ್ಮಿಯಿಂದ ATMಗೆ ಹಾನಿ

  ಸುರತ್ಕಲ್: ಸುರತ್ಕಲ್ ಸಮೀಪದ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿಯ ಎಸ್ ಬಿ ಐ ಬ್ಯಾಂಕಿನ ATM ನ್ನು ವ್ಯಕ್ತಿ ಯೋರ್ವ ಹಾನಿ ಮಾಡಿದ ಘಟನೆ ನಡೆದಿದೆ.ಕಳೆದ ಸೆ.9...

  Don't Miss

  ಬಂಟ್ವಾಳ: ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವು

  ಬಂಟ್ವಾಳ: ಯುವತಿಯೋರ್ವಳು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಾರಾಜೆ ಎಂಬಲ್ಲಿ ನಡೆದಿದೆ. ಸಜೀಪ ಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಾಜೆ ನಿವಾಸಿ...

  ಪಾಣೆಮಂಗಳೂರು ನೇತ್ರಾವತಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ!

  ಬಂಟ್ವಾಳ: ಟೈಲರ್ ವೃತ್ತಿಗೆಂದು ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಮೃತದೇಹ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಪೊಡಿಕ್ಕಳ ಬೆಂಜನಪದವು ನಿವಾಸಿ ನಾರಾಯಣ ಮೂಲ್ಯ (62) ಮೃತಪಟ್ಟ ವ್ಯಕ್ತಿ....

  ಕಾಪು: ರೈಲು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವು

  ಕಾಪು: ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನ.26ರ ಶುಕ್ರವಾರ ಮುಂಜಾನೆ ನಡೆದಿದೆ. ಮೃತರನ್ನು ಮಲ್ಲಾರು ಪಕೀರಣಕಟ್ಟೆ ಎಂ.ಜೆ.ಎಂ ಮಸೀದಿ ಬಳಿಯ ನಿವಾಸಿ ಅಬ್ದುಲ್ ರಜಾಕ್ (48)...

  ಮಂಗಳೂರು: ದೋಣಿಯಿಂದ ಬಿದ್ದು ಮೀನುಗಾರ ಸಾವು

  ಮಂಗಳೂರು: ಇಲ್ಲಿನ ಹಳೆ ಬಂದರು ದಕ್ಕೆಯಿಂದ ಮೀನುಗಾರಿಕೆಗೆಂದು ಬೋಟ್‌ನಲ್ಲಿ ಹೊರಟಿದ್ದ ಮೀನುಗಾರರ ಪೈಕಿ ಮನೋಜ್ ಎಂಬವರು ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇವರ ವಿಳಾಸ ಹಾಗೂ ಇತರೆ ವಿವರಗಳು ಲಭ್ಯವಾಗಿಲ್ಲ....

  ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿ ನಾಪತ್ತೆ- ದೂರು ದಾಖಲು !

  ಬೆಳ್ತಂಗಡಿ: ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿದ್ದ ವಿದ್ಯಾರ್ಥಿ ನಿಯೋರ್ವರು ನ.24 ರಂದು ನಾಪತ್ತೆಯಾಗಿದ್ದಾರೆ. ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ...