Saturday, November 9, 2024
spot_img
More

    Latest Posts

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಬೆಲೆ ಬರೋಬ್ಬರಿ 1 ಕೋಟಿ ರೂ

    ತಿರುಪತಿ: ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರನ ಬೆಟ್ಟದ ದರ್ಶನಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಸ್ಲಾಟ್‌ಗಳನ್ನು ತೆರೆದಿದೆ. ಜನವರಿ ತಿಂಗಳಿಗೆ 460,000 ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ ಎಂದು ವರದಿಗಳು ತಿಳಿಸಿವೆ.

    ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆ ಮುಚ್ಚಲಾಗಿದ್ದ ದೇವಾಲಯವನ್ನು ಎರಡು ವರ್ಷಗಳ ನಂತರ ತೆರೆಯಲಾಗಿದೆ. ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಮೂಲಕ ದೇಗುಲಕ್ಕೆ ಭಕ್ತರು ಭೇಟಿ ನೀಡಲು ಅವಕಾಶ ಮಾಡಿಕೊಡಲಾಗಿದೆ. ಟಿಟಿಡಿ ಸೋಮವಾರ ಬೆಳಗ್ಗೆ 9 ಗಂಟೆಯಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕೃತ ವೆಬ್‌ಸೈಟ್‌ನಲ್ಲಿ ಜನವರಿ ತಿಂಗಳ ಸ್ಲಾಟ್ ಮಾಡಿದ ಸರ್ವದರ್ಶನ (ಎಸ್​ಎಸ್​ಸಿ) ಟೋಕನ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿತು.

    ಭಕ್ತರು ಆನ್‌ಲೈನ್ ಮತ್ತು ಆಫ್‌ಲೈನ್​​ನಲ್ಲಿ ಮೋಡ್​ಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. ಉದಯಸ್ತಮಾನ ಸೇವಾ ಟಿಕೆಟ್ ಬೆಲೆ 1 ಕೋಟಿ ರೂ. ಮತ್ತು ಶುಕ್ರವಾರ ಭಕ್ತರು ಇದೇ ಟಿಕೆಟ್​ಗೆ 1.50 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.

    ಮಂಡಳಿಯು ಸೂಪರ್ ಸ್ಪೆಷಾಲಿಟಿ ಮಕ್ಕಳ ಆಸ್ಪತ್ರೆ ನಿರ್ಮಾಣ ಸೇರಿದಂತೆ ಮೂರು ಪ್ರಮುಖ ಯೋಜನೆಗಳಿಗೆ ಹಣವನ್ನು ಬಳಸಲು ಯೋಜಿಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

    ಡಿಸೆಂಬರ್ 25 ರಂದು, ಟಿಕೆಟ್ ಬಿಡುಗಡೆ ಘೋಷಣೆಯ ನಂತರ ಮಂಡಳಿಯ ವೆಬ್‌ಸೈಟ್ 14 ಲಕ್ಷ ಸಂದರ್ಶಕರನ್ನು ಸ್ವೀಕರಿಸಿತು ಮತ್ತು ಸಂಪೂರ್ಣ ಸ್ಲಾಟ್ ಅನ್ನು 55 ನಿಮಿಷಗಳಲ್ಲಿ ಬುಕ್ ಮಾಡಲಾಗಿದೆ.

    ಮಂಡಳಿಯು ಜನವರಿ 1 ಮತ್ತು ಜನವರಿ 13 ರಿಂದ 22 ರವರೆಗೆ ದಿನಕ್ಕೆ 20,000 ಮತ್ತು ಜನವರಿ 2 ರಿಂದ 12 ಮತ್ತು ಜನವರಿ 23 ರಿಂದ 31 ರವರೆಗೆ ದಿನಕ್ಕೆ 12,000 ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ, ಜನವರಿ 1, 2, 13 ಕ್ಕೆ 5,500 ವರ್ಚುವಲ್ ಸೇವಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ. 22, ಮತ್ತು 26 ಇವೆಲ್ಲವನ್ನೂ ನಿಮಿಷಗಳಲ್ಲಿ ಬುಕ್ ಮಾಡಲಾಗಿದೆ.

    ದೇವಾಲಯದ ಮಂಡಳಿಯು ಭಕ್ತರಿಗೆ ಕೋವಿಡ್-19 ಎರಡೂ ಡೋಸ್‌ಗಳ ಲಸಿಕೆ ಪ್ರಮಾಣಪತ್ರ ಅಥವಾ ದರ್ಶನಕ್ಕಾಗಿ ನೆಗೆಟಿವ್​​ ಕೋವಿಡ್-19 ವರದಿಯನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ.

    ಕೋವಿಡ್ -19 ಪ್ರಕರಣಗಳ ಉಲ್ಬಣದ ಮಧ್ಯೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ಭಕ್ತರ ಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಭಕ್ತರು ಆಧಾರ್ ಕಾರ್ಡ್ ವಿವರಗಳೊಂದಿಗೆ ಟಿಕೆಟ್ ಕಾಯ್ದಿರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss