Tuesday, July 16, 2024
spot_img
More

  Latest Posts

  ಮಂಗಳೂರು: ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ವಿರುದ್ಧ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗೆ ದೂರು

  ಮಂಗಳೂರು: ಭಾರೀ ಬಡ್ಡಿಯ ಭರವಸೆಯೊಡ್ಡಿ ಠೇವಣೆದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳನ್ನು ಲಪಟಾಯಿಸಿ ತಲೆಮರೆಸಿಕೊಂಡ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್‌ನ ವಿರುದ್ಧ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸಂತ್ರಸ್ತರೊಂದಿಗೆ ಇಂದು (07-12-2023) ಜಿಲ್ಲಾಧಿಕಾರಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

  ರೋಯಲ್ ಟ್ರಾವಂಕೂರ್ ಸಂಸ್ಥೆಯು ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಪಿ.ವಿ.ಎಸ್. ಕಟ್ಟಡದ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದು ಗ್ರಾಹಕರಿಂದ ಆರ್‌ಡಿ ಹಣವನ್ನು ಪಡೆದುಕೊಳ್ಳುತ್ತಿದ್ದು ಕಳೆದ ಒಂದು ವಾರದಿಂದ ನಮ್ಮ ಹಣವನ್ನು ಹಿಂಪಡೆಯಲು ತೆರಳಿದಾಗ ಅಲ್ಲಿಯ ಸಿಬ್ಬಂದಿಗಳು ಹಣ ನೀಡಲು ಸಾಧ್ಯವಿಲ್ಲ ಏಕೆಂದರೆ ಸಂಸ್ಥೆಯ ಮುಖ್ಯ ಕಛೇರಿಯಿಂದ ನಮಗೆ ಹಣ ಕಳಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ ಮತ್ತು ಕೊಡಿಯಾಲ್‌ಬೈಲ್ ಸಂಸ್ಥೆಯ ಮ್ಯಾನೇಜರ್‌ಗೆ ನಮ್ಮ ಹಣ ಹಿಂತಿರುಗಿಸುವಂತೆ ಪುನಃ ಪುನಃ ಬೇಡಿಕೊಂಡರೂ ಅವರುಗಳು ನಮ್ಮ ಕರೆಯನ್ನು ಮೇಲಾಧಿಕಾರಿಗಳು ಸ್ವೀಕರಿಸುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.


  ಸುಮಾರು ಲಕ್ಷಾಂತರ ಜನರು ಹಣ ಕಳೆದುಕೊಂಡಿರುವ ಸಾಧ್ಯತೆ ಇದೆ. ಸುಮಾರು 85 ಶಾಖೆಗಳನ್ನು ಹೊಂದಿದ್ದು ಕೇವಲ ಮಂಗಳೂರಿನ ಕೊಡಿಯಾಲ್‌ಬೈಲ್ ಶಾಖೆಯೊಂದರಲ್ಲೇ ಸುಮಾರು 65 ಲಕ್ಷಕ್ಕಿಂತ ಹೆಚ್ಚಿನ ಹಣ ಜನರಿಗೆ ಕೊಡಬೇಕಾಗಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಅದಲ್ಲದೆ ರೋಯಲ್ ಟ್ರಾವಂಕೂರ್ ಸಂಸ್ಥೆಯ ಮಾಲಕರು ಈ ಸಂಸ್ಥೆ ಮಾತ್ರವಲ್ಲದೆ ಬೇರೆ ಹಲವಾರು ಕಂಪೆನಿಗಳಲ್ಲಿ ನಿರ್ದೇಶಕ ಸ್ಥಾನ ಹೊಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಇದ್ದು ರಾಯಲ್ ಟ್ರಾವನ್‌ರ್ ಸಂಸ್ಥೆಯ ಹಣವನ್ನು ಬೇರೆ ಕಂಪೆನಿಗಳಿಗೆ ವರ್ಗಾಯಿಸಿದ್ದಾರೆಯೇ..? ಎಂಬ ಬಗ್ಗೆ ಸಂಶಯ ವ್ಯಕ್ತವಾಗಿರುವುದರಿಂದ ಈ ಬಗ್ಗೆ ಜಿಲ್ಲಾಧಿಕಾರಿಯವರು ಸೂಕ್ತ ತನಿಖೆ ನಡೆಬೇಕಾಗಿ ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಸಂತ್ರಸ್ತರೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು

  ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಸಂಸ್ಥೆಯ ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲುತ್ತೆವೆ ಎಂದು ಭರವಸೆ ನೀಡಿದರು.
  ಈ ಸಂದರ್ಭದಲ್ಲಿ ಪ್ರಶಾಂತ್ ಭಟ್ ಕಡಬ, ಶಾರಾದ ಶೆಟ್ಟಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss