ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಸಮೀಪ ಕೆಟ್ಟು ನಿಂತಿದ್ದ ಟಿಪ್ಪರ್ ವಾಹನಕ್ಕೆ ಸ್ಕೂಟರ್ ಢಿಕ್ಕಿಯಾಗಿ, ಸ್ಕೂಟರ್ ಸವಾರ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ.
ಕಂಬದಕೋಣೆ ಗ್ರಾಮದ ಹಳಗೇರಿ ತೆಂಕಬೆಟ್ಟಿನ ನಿವಾಸಿ ಸತೀಶ್ ಜೋಗಿ (42) ಮೃತಪಟ್ಟವರು. ಆಕಾಶ್ ಜೋಗಿ (17) ಗಂಭೀರ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
