ಬೆಂಗಳೂರು: ರಾಷ್ಟ್ರಕವಿ ಕುವೆಂಪು ( Kuvempu ) ಅವರ ನಾಡಗೀತೆಯನ್ನೇ ತಿರುಚಿ ಬರೆದಿರುವವರ ವಿರುದ್ಧ ಸರ್ಕಾರ ( Karnataka Government ) ಕಾನೂನು ಪ್ರಕಾರ ಕ್ರಮ ಜರುಗಿಸಲಿದೆ ಎಂದು ನಂಬಿದ್ದೇನೆ ಎಂಬುದಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಹೇಳಿದ್ದರು.
ಅವರ ಮಾತನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಇಂದು ಶಿಕ್ಷಣ ಇಲಾಖೆಯ ಸಭೆಯನ್ನು ಕರೆದು ಚರ್ಚಿಸೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದ್ದಾರೆ.
ಇಂದು ನಗರದಲ್ಲಿ ಈ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಮಲಾನಂದ ಶ್ರೀಗಳು ಎತ್ತಿರುವಂತ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಈ ಬಗ್ಗೆ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister B C Nagesh ) ಹಾಗೂ ಶಿಕ್ಷಣ ಇಲಾಖೆಯ ( Education Department ) ವಿವಿಧ ಅಧಿಕಾರಿಗಳೊಂದಿಗೆ ಸಭೆಯನ್ನು ಕರೆಯಲಾಗುತ್ತದೆ. ಆ ಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚಿಸೋದಾಗಿ ಹೇಳಿದರು.
ರಾಜ್ಯಸಭೆಯ ಎರಡು ಸ್ಥಾನಗಳಿಗೆ ಬಿಜೆಪಿಯಿಂದ ಆಯ್ಕೆಯಾಗೋದು ಖಚಿತವಾಗಿದೆ. ಮೂರನೇ ಅಭ್ಯರ್ಥಿಯ ಆಯ್ಕೆ ಬಗ್ಗೆ ಹೆಚ್ಚುವರಿ ಮತಗಳು ಬೇಕಿದೆ. ಆ ಬಗ್ಗೆ ಚರ್ಚಿಸಲಾಗುತ್ತದೆ. ಮೂರನೇ ಅಭ್ಯರ್ಥಿ ನಿಲ್ಲಿಸಿದ್ರೇ.. ಅದಕ್ಕೆ ಬೇರೊಂದು ಪಕ್ಷದ ಬೆಂಬಲ ಬೇಕಿದೆ. ಅದಕ್ಕೆ ಯಾರೊಬ್ಬರಿಗೂ ಸ್ಪಷ್ಟ ಬೆಂಬಲವಿಲ್ಲ. ನೋಡೋಣ ಏನ್ ಆಗುತ್ತದೆ ಎಂದರು.
