ವಿಟ್ಲ: ಯುದ್ಧ ಭೂಮಿಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳುತ್ತಿರುವ ವಿಟ್ಲದ ನೆತ್ರಕೆರೆ ನಿವಾಸಿ ಸಿಆರ್‌ಪಿಎಫ್ ಯೋಧ ದಯಾನಂದ ನೆತ್ರಕೆರೆ ಅವರಿಗೆ ವಿಟ್ಲ ಸಿಟಿ ಲಯನ್ಸ್ ಕ್ಲಬ್ ಮತ್ತು ಸೈಂಟ್ ರೀಟಾ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಸ್ವಾಗತ ಕಾರ್ಯಕ್ರಮವು ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಸೋಮವಾರ ನಡೆಯಿತು.
2001ರಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಮೇಜರ್ ದಯಾನಂದ ಅವರು ಒಟ್ಟು 20 ವರ್ಷಗಳ ಕಾಲ ದೇಶ ಸೇವೆಗೈದಿದ್ದಾರೆ. ಇದರ ನಡುವೆ 10 ವರ್ಷ ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದು, ಬಳಿಕ ಅಸ್ಸಾಂ ಮತ್ತು ನಾಗಲ್ಯಾಂಡ್ ಗಡಿಗಳಲ್ಲಿ ದೇಶ ಸೇವೆ ಸಲ್ಲಿಸಿದ್ದಾರೆ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಭಾರತೀಯ ಅರೆಸೇನಾ ಪಡೆಯಲ್ಲಿ ಕರ್ತವ್ಯ ಸಲ್ಲಿಸಿದ್ದರು. ಇದೀಗ ನಿವೃತ್ತ ಹೊಂದಿದ್ದ ಇವರು ತಾಯ್ನಾಡಿಗೆ ಮರಳಿದ್ದಾರೆ.

ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವಿಟ್ಲ ಸೈಂಟ್ ರೀಟಾ ಶಾಲೆಗೆ ಕರೆತರಲಾಯಿತು. ಶಾಲೆಯನ್ನು ದಯಾನಂದ ಅವರು ಧ್ವಜಾರೋಹಣ ಗೈದರು. ಬಳಿಕ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಜಿಲ್ಲಾ ಪ್ರಾಂತೀಯ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಾಂತೀಯ ಸಲಹೆಗಾರ ಸುದರ್ಶನ್ ಪಡಿಯಾರ್ , ವಿಟ್ಲ ಶೋಕಾಮಾತ ಇಗರ್ಜಿಯ ಧರ್ಮಗುರು ಐವನ್ ಮೈಕಲ್ ರೊಡ್ರಿಗಸ್, ಸುನೀಲ್ ಪಿಂಟೋ, ಸಿಸ್ಟರ್ ಮರೀನ, ಜೊನೆಟ , ಲಯನ್ಸ್ ಕ್ಲಬ್ ನ ಸತೀಸ್ ಕುಮಾರ್ ಆಳ್ವ ಇರಾಬಾಳಿಕೆ, ಸುರೇಶ್ ಬನಾರಿ, ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ, ಕೋಶಾಧಿಕಾರಿ ಶ್ವೇತಾ ಅರ್.ಕೆ, ಜತೆ ಕಾರ್ಯದರ್ಶಿ ಸಾಯಿ ಗೀತಾ ಪಡಿಯಾರ್, ಉಪಾಧ್ಯಕ್ಷ ವಸಂತ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಸಿದ್ದೀಕ್ ಸರಾವು, ಹಳೆ ವಿದ್ಯಾರ್ಥಿ ಸಂಘದ ಇಕ್ಬಾಲ್, ಅಧ್ಯಾಪಕರು, ವಿಟ್ಲ ಸಿಟಿ ಲಯನ್ಸ್ ಕ್ಲಬ್ ನ ಸದಸ್ಯರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
