Friday, March 29, 2024
spot_img
More

    Latest Posts

    ಮಲ್ಪೆ: ಬೀಚ್‌ನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

    ಮಲ್ಪೆ: ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಮಲ್ಪೆ ಬೀಚ್‌ನ ಜೀವ ರಕ್ಷಕ ಸಿಬ್ಬಂದಿಗಳು ರಕ್ಷಿಸಿದ ಘಟನೆ ಸಂಭವಿಸಿದೆ.

    ರಕ್ಷಿಸಲ್ಪಟ್ಟ ಪ್ರವಾಸಿಗರನ್ನು ಉತ್ತರ ಬೆಂಗಳೂರಿನ ನಾಗಸಂದ್ರದ ಪ್ರದೀಪ್ (30), ನಾಗೇಶ ವೆಂಕಟೇಶ(30) ಹಾಗೂ ರಮೇಶ್(43) ಎಂದು ಗುರುತಿಸಲಾಗಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಿ ಜನ ಸಂದಣಿ ಹೆಚ್ಚಿದ್ದು, ಬೆಳಗ್ಗೆ ಸಮುದ್ರಕ್ಕೆ ಇಳಿದ ಪ್ರದೀಪ್, ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗುವವರಿದ್ದರು.ಇನ್ನೊಂದು ಪ್ರಕರಣದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆ ಕಡಲ ತೀರದಲ್ಲಿ ಈಜುತ್ತಿದ್ದ ನಾಗೇಶ ವೆಂಕಟೇಶ ಮತ್ತು ರಮೇಶ್ ಕೂಡ ನೀರಿನಲ್ಲಿ ಮುಳುಗುತ್ತಿದ್ದರೆನ್ನಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಜೀವ ರಕ್ಷಕರು ಇವರನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss