ಮಂಗಳೂರು: ನಗರ ಉತ್ತರ ಕ್ಷೇತ್ರದಲ್ಲಿರುವ ನೀರುಮಾರ್ಗದಲ್ಲಿ ಸುಮಾರು 16 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ನೂತನ ಸಭಾಭವನಕ್ಕೆ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಬುಧವಾರ ಗುದ್ದಲಿಪೂಜೆ ನೆರವೇರಿಸಿದರು
ಈ ಸಂದರ್ಭ ಅವರು ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸರಕಾರದ ಸದಾ ಬೆಂಬಲವಿದ್ದು ಅಭಿವೃದ್ಧಿ ನಿರಂತರ ನಡೆಯಲಿದೆ
ನೀರುಮಾರ್ಗ ಸುಬ್ರಹ್ಮಣ್ಯ ಭಜನಾ ಮಂದಿರದ ಅಧ್ಯಕ್ಷರಾದ ಪ್ರಕಾಶ್ ಚಂದ್ರ, ಹಿರಿಯರಾದ ಪ್ರೇಮ್ ಚಂದ್ರ ಭಟ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಕಸ್ತೂರಿ ಆನಂದ್, ಶ್ರೀಮತಿ ಲಕ್ಷ್ಮಿ ನಾಯಕ್, ಶ್ರೀಮತಿ ಲಕ್ಷ್ಮಿ ಭಟ್ರಕೊಡಿ ,ಸಚಿನ್ ಹೆಗ್ಡೆ, ಮಹಾಶಕ್ತಿಕೇಂದ್ರ ಪ್ರಮುಖರಾದ ಚೇತನ್, ಶಕ್ತಿ ಕೇಂದ್ರ ಪ್ರಮುಖರು ಬೂತ್ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.