Sunday, September 8, 2024
spot_img
More

    Latest Posts

    ಮಂಗಳೂರು: ನಾಲ್ವರನ್ನು ಕೊಂದ ಆರೋಪಿಯ ಬಿಡುಗಡೆಗೆ – ತುಳುನಾಡ ರಕ್ಷಣಾ ವೇದಿಕೆ ಅಸಮಾದಾನ

    ಮಂಗಳೂರು : ದಕ್ಷ್ಣಿಣ ಕನ್ನಡ ಜಿಲ್ಲೆಯಲ್ಲಿ ವಾಮಂಜೂರಿನಲ್ಲಿ ನಡೆದಿದ್ದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ ಸೆರೆವಾಸ ಅನುಭವಿಸುತ್ತಿರುವ ಪ್ರವೀಣ್ ಕುಮಾರ್(62) ನನ್ನು ಸದ್ಯ ಬಿಡುಗಡೆ ನಿರ್ಧಾರ ಕೈಗೊಳ್ಳಲಾಗಿದ್ದು, ಕುಟುಂಬಸ್ಥರು ಆತನ ಬಿಡುಗಡೆಗೆ ತಗಾದೆ ಎತ್ತಿದ್ದಾರೆ. ಭಾರತದ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ನಾಲ್ವರನ್ನು ಕೊಂದಿದ್ದ ಆರೋಪಿಯನ್ನು ಕ್ಷಮಧಾನದ ಆಧಾರದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

    1994ರ ಫೆಬ್ರವರಿ 23 ರಂದು ರಾತ್ರಿ ವಾಮಂಜೂರಿನ ನಿವಾಸಿಗಳು ಹಾಗೂ ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ(75) ಆಕೆಯ ಪುತ್ರಿ ಶಕುಂತಲಾ (36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30) ಅವರನ್ನು ಅವರದ್ದೇ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಪ್ರವೀಣ್‌ ಬರ್ಬರವಾಗಿ ಕೊಲೆ ಮಾಡಿ ನಗದು, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಬಳಿಕ ಪೋಲಿಸ್ ಇಲಾಖೆ ಬಂಧಿಸಿದ್ದು ಸೆರೆವಾಸ ಅನುಭವಿಸುತ್ತಿದಾನೆ.

    ಇದೀಗ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಸರಕಾರವು ಕೆಲವು ಜನ ಕೈದಿಗಳಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯವನ್ನು ಕಲ್ಪಿಸಿದ್ದು, ಹೀಗೆ ಬಿಡುಗಡೆಯಾಗುವವರ ಪಟ್ಟಿಯಲ್ಲಿ ವಾಮಂಜೂರು ಪ್ರವೀಣನೂ ಒಬ್ಭನಾಗಿದ್ದಾನೆ.
    ಅಂತಹ ಘೋರ ಹೀನ ಕುಕೃತ್ಯ ಎಸಗಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡಿದಲ್ಲಿ ಭಾರತದ ಸ್ವಾತಂತ್ಯ್ರೋತ್ಸವದ ಅಮೃತೋತ್ಸವ ಆಚರಿಸುವ ತುಳುನಾಡ ಜನರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು
    ತುಳುನಾಡ ರಕ್ಷಣಾ ವೇದಿಕೆಯ ಮುಖಂಡರಾದ ಪ್ರಶಾಂತ್ ಭಟ್ ಕಡಬ ಮತ್ತು ಬಿಕರ್ನಕಟ್ಟೆ ಅಧ್ಯಕ್ಷರಾದ ನಾಗರಾಜ್ ಬಿಕರ್ನಕಟ್ಟೆಯವರು ಅಸಮಾದಾನ ಮತ್ತು ಖೇದ ವ್ಯಕ್ತಪಡಿಸಿದ್ದಾರೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss