Saturday, October 5, 2024
spot_img
More

    Latest Posts

    ಸೌಜನ್ಯ ಪ್ರಕರಣ ಮರುತನಿಖೆ ಅಸಾಧ್ಯ- ಗೃಹ ಸಚಿವ ಪರಮೇಶ್ವರ್‌

    ಬೆಂಗಳೂರು: ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ಸಂಭವಿಸಿದ ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣವನ್ನು ಮರು ತನಿಖೆಗೊಳಪಡಿಸಲು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಸರಕಾರ ಮರು ತನಿಖೆ ಅಸಾಧ್ಯ ಎಂದು ಹೇಳಿದೆ.

    ಈ ಕುರಿತು ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ, ಈ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದೆ. ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸೌಜನ್ಯಾ ವೇದಿಕೆಗಳಲ್ಲಿ ಹರಡುತ್ತಿರುವ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಶುಕ್ರವಾರ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಪರಮೇಶ್ವರ್ ಪ್ರಕರಣದ ಮರುತನಿಖೆ ಅಸಾಧ್ಯ ಎಂದು ಹೇಳಿದ್ದಾರೆ. ಪ್ರಕರಣವನ್ನು ಪುನಃ ತೆರೆಯುವ ಯಾವುದೇ ಪ್ರಸ್ತಾಪ ಸರ್ಕಾರ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಒಸಿದ್ದಾರೆ. ದೇಶದ ಪರಮೋಚ್ಚ ತನಿಖಾ ಸಂಸ್ಥೆ ಸಿಬಿಐಯೇ ತನಿಖೆ ನಡೆಸಿದ ಬಳಿಕ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಮರುತನಿಖೆ ಅಸಾಧ್ಯ ಎಂದು ಕೆಲವು ನ್ಯಾಯ ಪಂಡಿತರು ಕೂಡ ಹಿಂದೆಯೇ ಅಭಿಪ್ರಾಯಪಟ್ಟಿದ್ದರು. ಪ್ರಕರಣದ ಆರೋಪಿ ಎಂದು ಬಂಧಿಸಲ್ಪಟ್ಟಿದ್ದ ಕಾರ್ಕಳದ ಬೈಲೂರಿನ ಸಂತೋಷ್‌ ರಾವ್ ಸಾಕ್ಷಾಧಾರಗಳ ಕೊರತೆಯಿಂದಾಗಿ ಬಿಡುಗಡೆಯಾದ ಬಳಿಕ ಸೌಜನ್ಯಾ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಸೌಜನ್ಯಾಗ ನ್ಯಾಯ ಕೊಡಿಸಬೇಕೆಂದು ತೀವ್ರ ಹೋರಾಟ ನಡೆಯುತ್ತಿದೆ, ಈ ಮಾಸಾಂತ್ಯಕ್ಕೆ ಬೃಹತ್ ಸಭೆ ಆಯೋಜಿಸಲಾಗಿದೆ. ಇದರ ನಡುವೆಯೇ ಸ್ವತಹ ಗೃಹ ಸಚಿವರೇ ಮರು ತನಿಖೆ ಸಾಧ್ಯ ಇಲ್ಲ ಎಂದಿರುವುದರಿಂದ ಕೊನೆಗೂ ಸೌಜನ್ಯಾಳನ್ನು ಕೊಂದದ್ದು ಯಾರು ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss