Thursday, October 10, 2024
spot_img
More

    Latest Posts

    ಮಂಗಳೂರು: ಬಾಡಿಗೆ ಪಾವತಿಗೆ ನಿರಾಕರಣೆ, ಮಳಿಗೆಗಳ ಜಪ್ತಿ

    ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಒಡೆತನಕ್ಕೊಳಪಟ್ಟ ನವೀಕೃತ ಅಳಕೆ ಮಾರುಕಟ್ಟೆಯಲ್ಲಿ ಪರವಾನಿಗೆ ಪಡೆದಿರುವ ಬಾಡಿಗೆದಾರರು ಅಂಗಡಿ ಬಾಡಿಗೆಯನ್ನು ಇದುವರೆಗೆ ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಸೆ.1ರಂದು ಪಾಲಿಕೆ ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿ ಸದ್ರಿ ಮಾರುಕಟ್ಟೆಗೆ ತೆರಳಿ ಮಳಿಗೆಗಳನ್ನು ಜಪ್ತಿ ಮಾಡಿ, ಪಾಲಿಕೆ ಸುಪರ್ದಿಗೆ ಪಡೆದುಕೊಂಡಿದ್ದಾರೆ.

    ಕಳೆದ ಹಲವಾರು ತಿಂಗಳಿಂದ ಪದೇ ಪದೇ ನೋಟಿಸ್‌ ನೀಡಲಾಗಿದ್ದರೂ, 10 ಅಂಗಡಿ ಮಳಿಗೆದಾರರು ಬಾಡಿಗೆಯನ್ನು ಪಾವತಿಸದೇ, ಸುಮಾರು 28 ಲಕ್ಷ ಮೊತ್ತವನ್ನು ಬಾಕಿ ಇಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಮಳಿಗೆಗಳನ್ನು ಸುಪರ್ದಿಗೆ ಪಡೆಯುವುದು ಅನಿವಾರ್ಯವಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ರೀತಿಯ ಕಟ್ಟುನಿಟ್ಟಾದ ಕ್ರಮ ಕೈಗೊಂಡ ಪರಿಣಾಮವಾಗಿ ಬಾಡಿಗೆ ಪಾವತಿಸಲು ಅಂಗಡಿ ಮಾಲೀಕರು ಮುಂದೆ ಬಂದಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss