Friday, March 29, 2024
spot_img
More

    Latest Posts

    ಮಂಗಳೂರು: ಆನ್‌ಲೈನ್​ನಲ್ಲಿ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದು, ಬಂದಿದ್ದು ಕಲ್ಲು..!

    ಮಂಗಳೂರು: ಆನ್‌ಲೈನ್​ನಲ್ಲಿ ಒಂದು ಆರ್ಡರ್​ ಮಾಡಿದಾಗ ಇನ್ನೊಂದು ಬರುವುದು ಆಗಾಗ್ಗೆ ನಡೆದೇ ಇದೆ. ಮಂಗಳೂರಿನಲ್ಲಿ ನಡೆದ ಇಂಥದ್ದೇ ಒಂದು ಘಟನೆ ನಡೆದಿದೆ.

    ಮಂಗಳೂರಿನ ಚಿನ್ಮಯ ರಮಣ ಎಂಬವರು ಗೇಮಿಂಗ್ ಲ್ಯಾಪ್‌ಟಾಪ್ ಆರ್ಡರ್​ ಮಾಡಿದ್ದರೆ, ಅವರ ಮನೆಗೆ ಬಂದದ್ದು ಬೃಹತ್​ ಕಲ್ಲುಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದಿವಾಲಿ ಸೇಲ್​ನಲ್ಲಿ ಚಿನ್ಮಯ ಅವರು​ ಗೇಮಿಂಗ್ ಲ್ಯಾಪ್‌ಟಾಪ್ ಆರ್ಡರ್​ ಮಾಡಿದ್ದರು. ಅದು ಬರುವುದನ್ನೇ ಕಾಯುತ್ತಿದ್ದರು.

    ಆದರೆ ಪಾರ್ಸೆಲ್​ ತೆಗೆದು ನೋಡಿದಾಗಲೇ ತಿಳಿದದ್ದು, ಅದು ಲ್ಯಾಪ್​ಟಾಪ್​ ಅಲ್ಲ, ಬದಲಿಗೆ ದೊಡ್ಡ ಕಲ್ಲು ಎಂದು.ಈ ವಿಚಾರವನ್ನು ಅವರೇ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಸ್ನೇಹಿತನಿಗೆಂದು ಅಕ್ಟೋಬರ್ 15 ರಂದು Asus TUF Gaming F15 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಆರ್ಡರ್ ಮಾಡಿದ್ದೆ. ನಂತರ ಮನೆಗೆ ಬಂದ ಪಾರ್ಸೆಲ್​ ನೋಡಿದಾಗ ಅದರಲ್ಲಿ ಕಲ್ಲು ಇತ್ತು. ನಂತರ ಫ್ಲಿಪ್​ಕಾರ್ಟ್​ನ ಕಸ್ಟಮರ್​ ಕೇರ್​ಗೆ ದೂರು ನೀಡಿದ್ದು, ಸಂಪೂರ್ಣ ಹಣವನ್ನು ಹಿಂದಿರುಗಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss