ಪುತ್ತೂರು ಅತ್ಯಂತ ಶ್ರಮವಹಿಸಿ ದುಡಿದು ಯಶಸ್ವಿ ಉದ್ಯಮಿಯಾಗಿ ನೂರಾರು ಜನರಿಗೆ ಉದ್ಯೋಗದಾತರಾಗಿರುವ ಹಾಗೂ ತಮ್ಮ ಸಮಾಜ ಸೇವೆಯ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಬೆಳಕಾಗಿರುವ ಕೊಡುಗೈ ದಾನಿ ಡಾ. ರವಿ ಶೆಟ್ಟಿ ಮೂಡಂಬೈಲು ಕತಾರ್ ಅವರ ಸಾಧನೆಯ ಬಗ್ಗೆ ಮುಂಬೈ ವಿಶ್ವ ವಿದ್ಯಾಲಯ ಕನ್ನಡ ವಿಭಾಗವು “ರವಿ ತೇಜ” ಹೆಸರಲ್ಲಿ ಕೃತಿ ಸಿದ್ಧಪಡಿಸಿದೆ.
ಡಾ. ರವಿ ಶೆಟ್ಟಿಯವರು ಕತಾರ್ ಎಟಿಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು. ಇವರ ಸಮಾಜ ಸೇವೆಯ ಸಾಧನೆಯನ್ನು ಗುರುತಿಸಿ ಭಾರತ ಹಾಗು ವಿದೇಶದ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದು ಇದೀಗ ಕನ್ನಡ ವಿಶ್ವವಿದ್ಯಾಲಯ ಮುಂಬೈ ಕನ್ನಡ ವಿಭಾಗ, ಮೂಡಂಬೈಲ್ ನೇಸರ ಫೌಂಡೇಷನ್ ಮತ್ತು ಐಲೇಸಾ ದ ವಾಟ್ಸ್ ಅಫ್ ಓಸನ್ ಇವರ ಸಂಯೋಜನೆಯಲ್ಲಿ ಮೂರು ಕೃತಿಗಳ ಲೋಕಾರ್ಪಣ ಸಮಾರಂಭವು ಮೆ.21 ರಂದು ಪುತ್ತೂರಿನ ಪ್ರಶಾಂತ ಮಹಲ್ ನಲ್ಲಿ ಅಪರಾಹ್ನ 3.45 ಕ್ಕೆ ಜರಗಲಿದೆ.
ಡಾ. ರವಿ ಶೆಟ್ಟಿಯವರ ಜೀವನ ಚಿತ್ರಣದ ಡಾ.ಪೂರ್ಣಿಮಾ ಸುಧಾಕರ ಕನ್ನಡದಲ್ಲಿ ಬರೆದು ಶ್ರೀಮತಿ ಮಿಥಾಲಿ ಪ್ರಸನ್ನ ರೈ ಅವರು ಇಂಗ್ಲಿಷ್ ನಲ್ಲಿ ಅನುವಾದಿಸಿದ “ರವಿತೇಜ” ಹಾಗೂ ಸಂಸ್ಕೃತ ಸುಭಾಷಿತಗಳನ್ನು ಇಂಗ್ಲಿಷ್ ನಲ್ಲಿ ಡಾ.ರವಿ ಶೆಟ್ಟಿ ಅನುವಾದಿಸಿ ಕನ್ನಡದಲ್ಲಿ ಮಹಾಬಲ ಸೀತಾಭಾವಿ ಅನುವಾದಿತ “101 ಸುಭಾಷಿತ” ಪುಸ್ತಕ ಬಿಡುಗಡೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಪ್ರೊ.ಬಿ.ಎ.ವಿವೇಕ್ ರೈ,ಖ್ಯಾತ ಉದ್ಯಮಿ ಅಬುಧಾಬಿಯ ಸಂಘಟಕರಾದ ಸರ್ವೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದರೆ.ಕೃತಿಗಳ ಪರಿಚಯವನ್ನು ಲೇಖಕರಾದ ಡಾ.ನರೇಂದ್ರ ರೈ ದೇರ್ಲ ಮಾಡಲಿದ್ದರೆ.ಸಭೆಯ ಅಧ್ಯಕ್ಷತೆಯನ್ನು ಮೊಂಡೆಕಾವು ಹೈಸ್ಕೂಲ್ ನ ನಿವೃತ್ತ ಮಹಾಬಲೇಶ್ವರ ಹೆಬ್ಬಾರ್,ಮುಖ್ಯ ಅತಿಥಿಗಳಾಗಿ ಶಾಸಕರಾದ ಸಂಜೀವ ಮಠಂದೂರು,ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ, ಡಾ.ತಾಳ್ತಜೆ ವಸಂತ ಕುಮಾರ್, ಡಾ. ತುಕರಾಮ ಪೂಜಾರಿ, ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ
ಭಾಷಣವನ್ನು ಕವಿ ಶಾಂತಾರಾಮ ಶೆಟ್ಟಿ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಮಿಥಲಿ ಪ್ರಸನ್ನ ರೈಯವರು
ಉಪಸ್ಥಿತಿರುವರು.ಪ್ರಾಸ್ತಾವಿಕ ಮಾಡಲಿದ್ದರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಐಲೇಸಾ ಸಾರಥಿ ಡಾ.ರಮೇಶ್ಚಂದ್ರ ತಂಡದವರಿಂದ ಗಾನ ಸೌರಭ ಜರಗಲಿದೆ.
ತುಳುನಾಡ ರಕ್ಷಣಾ ವೇದಿಕೆ ದಶಮಾನೋತ್ಸವ ಸಂಭ್ರಮ ತೌಳವ ಉಚ್ಚಯ ವಿಶ್ವ ತುಳುವೆರೆ ಸಮ್ಮೇಳನದಲ್ಲಿ ತೌಳವ ಶ್ರೀ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.
