Friday, June 9, 2023

ಉಳ್ಳಾಲದಲ್ಲಿ ಉಸಿರುಗಟ್ಟಿಸಿ ಜಾನುವಾರುಗಳ ಸಾಗಾಟ.! ಹಸುಗಳ ರಕ್ಷಣೆ

ಉಳ್ಳಾಲ: ಕೇರಳದಿಂದ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಜಾನುವಾರುಗಳನ್ನ ಉಸಿರುಗಟ್ಟಿಸಿ ಸಾಗಿಸುತ್ತಿದ್ದ ವೇಳೆ ರಸ್ತೆ ಏರಲಾರದೆ ವಾಹನ‌ ನಿಂತಿದ್ದು ಬಜರಂಗದಳದ ಕಾರ್ಯಕರ್ತರು ಜಾನುವಾರುಗಳನ್ನ ರಕ್ಷಿಸಿದ ಘಟನೆ ನಿನ್ನೆ ರಾತ್ರಿ ಕುತ್ತಾರು...
More

  Latest Posts

  ಭಾರತಕ್ಕೆ ಗಂಡಾಂತರ ಕಾದಿದೆ – ಕೋಡಿಮಠ ಶ್ರೀ ಭವಿಷ್ಯ

  ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ...

  500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

  ಹೊಸದಿಲ್ಲಿ: 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್...

  ಒಡಿಶಾ ರೈಲು ದುರಂತದಲ್ಲಿ ಕಾಣೆಯಾಗಿ ಟಿವಿ ಲೈವ್‌ನಲ್ಲಿ ಪತ್ತೆಹಚ್ಚಿ ಪೋಷಕರನ್ನು ಸೇರಿದ ಪುತ್ರ!

  ಕಟಕ್: ಜೂನ್ 2ರಂದು ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗ ದೂರದರ್ಶನವೊಂದರಲ್ಲಿ ಪ್ರಸಾರವಾಗುತ್ತಿದ್ದ ನೇರ ಸಂದರ್ಶನ ಪ್ರಸಾರದಿಂದ ಮತ್ತೆ ತಂದೆ - ತಾಯಿ ಜೊತೆ ಸೇರಿದ್ದಾನೆ.

  ಉಳ್ಳಾಲ: ನೂತನ ಮನೆಯ ಗೃಹ ಪ್ರವೇಶದ ಐದೇ ದಿನದಲ್ಲಿ ನೇಣುಬಿಗಿದು ಯುವತಿ ಆತ್ಮಹತ್ಯೆ

  ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. 

  ಸಮಾಜಸೇವೆಯಲ್ಲೇ ಆತ್ಮತೃಪ್ತಿ ಪಡೆಯುವ ಕಲಾಪೋಷಕ ಉದ್ಯಮಿ ರವಿ ಶೆಟ್ಟಿ ಮೂಡಂಬೈಲ್

  ಇನ್ನೊಬ್ಬರಿಗಾಗಿ ಬದುಕದ ಜೀವನವು ಜೀವನಲೇ ಅಲ್ಲ ಎಂಬ ಮದರ್ ತೆರೇಸಾ ಅವರ ಮಾತು ರವಿ ಶೆಟ್ಟಿ ಮೂಡಂಬೈಲ್ ಮೇಲೆ ಭಾರೀ ಪ್ರಭಾವ ಬೀರಿದೆ. ಆ ಮಾತಿನಿಂದ ಪ್ರೇರಿತರಾಗಿ ಅದರಂತೆ ಬದುಕುತ್ತಿರುವ ರವಿ ಶೆಟ್ಟಿ ಅವರು ಪರರ ಕಷ್ಟಕ್ಕೆ ಸ್ಪಂದಿಸುವುದರಲ್ಲೇ ಖುಷಿ ಪಡೆಯುವ ಅತಿ ಅಪರೂಪದ ಓರ್ವ ಸಮಾಜಸೇವೆಯ ತುಡಿತ ಹೊಂದಿರುವ ಉದ್ಯಮಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ.
  ಇವರು ಎಂಜಿನಿಯರಿಂಗ್ ಪದವೀಧರರಾಗಿ ಭಾರತದಲ್ಲಿ ಹಲವಾರು ಪ್ರಮುಖ ಕಂಪೆನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿದ್ದು, ಪ್ರಸ್ತುತ ಕೆಲವು ವರ್ಷಗಳಿಂದ ಕೊಲ್ಲಿ ರಾಷ್ಟವಾಗಿರುವ ಕತಾರ್‌ನಲ್ಲಿ ಎಟಿಎಸ್ ಎಂಬ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಹಲವಾರು ಸಂಘಟನೆಗಳಲ್ಲೂ ಸಕ್ರಿಯರಾಗಿರುವವರು. ಕತಾರ್‌ನ ತುಳುಕೂಟ, ಬಂಟರ ಸಂಘ, ಕರ್ನಾಟಕ ಸಂಘಗಳಲ್ಲಿ ಇವರ ಕೊಡುಗೆ ಹಾಗೂ ಕ್ರಿಯಾಶೀಲತೆ ಅತಿ ಹೆಚ್ಚಿನದ್ದಾಗಿದೆ. ಇದರಲ್ಲಿ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತು ಸಂಘದೊದಿಗೆ ಅದರ ಸದಸ್ಯರನ್ನೂ ಬೆಳೆಸಿದವರು, ಬೆಳೆಸುತ್ತಿರುವವರು. ಊರಿನಿಂದ ಕತಾರ್‌ಗೆ ಹೋದವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನೂ ಮಾಡುವವರು. ಉದ್ಯೋಗ, ಆರ್ಥಿಕ ಸಹಾಯದಲ್ಲೂ ಇವರದು ಎತ್ತಿದ ಕೈ. ಇವರ ಸಂಸ್ಥೆಯಲ್ಲಿ ಪ್ರಸ್ತುತ ಸುಮಾರು 400ರಷ್ಟು ಸಿಬಂದಿಯಿದ್ದರೂ, ಇದುವರೆಗೆ ಸುಮಾರು 2,000ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ ದೊಡ್ಡ ಸಂಸ್ಥೆಯಿದು. ಅದರಲ್ಲಿ ಬಹುತೇಕರು ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ ಹಾಗೂ ಇವರ ಹುಟ್ಟೂರಿನ ಪ್ರೇಮಕ್ಕೆ ಸಾಕ್ಷಿಯಾಗಿದೆ.


  ಸಾಧನೆಯ ತುಡಿತ
  ಹೈದರಾಬಾದ್‌ನಲ್ಲಿ ಟಾಟಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾಗಲೇ ಇವರು ಎರಡು ಹೋಟೆಲ್‌ಗಳನ್ನು ಆರಂಭಿಸಿ ಉದ್ಯಮ ಕ್ಷೇತ್ರಕ್ಕೂ ಕಾಲಿರಿಸಿ ಭವಿಷ್ಯದ ಸಾಧಕರಾಗುವ ಲಕ್ಷಣ ತೋರಿದ್ದರು.
  ಸಾತ್ವಿಕತೆಯೇ ಅಲಂಕಾರ
  ನಾನು ಗಮನಿಸಿದಂತೆ ರವಿ ಶೆಟ್ಟಿಯವರಿಗೆ ಸಾತ್ವಿಕತೆಯೇ ದೊಡ್ಡ ಅಲಂಕಾರ. ಅವರು ಯಾರ ಮನಸ್ಸನ್ನೂ ನೋಯಿಸಿದವರಲ್ಲ, ಮನಸ್ಸಿಗೆ ಒಪ್ಪುವಂಥ ಹಿತವಾದ ಮೃದು ಮಾತುಗಳಿಂದ ಅವರು ಅಸಂಖ್ಯ ಮಂದಿಯ ಗೌರವ, ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ನೆರವು ಯಾಚಿಸಿದವರನ್ನು ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಯೇ ಇಲ್ಲ. ಎಷ್ಟು ಎತ್ತರಕ್ಕೆ ಏರಿದ್ದರೂ ಒಂದಿಷ್ಟೂ ಅಹಂ, ಬಿಗುಮಾನ ಅವರಲ್ಲಿಲ್ಲ. ಇಂಥವರು ಅತ್ಯಂತ ಅಪರೂಪವಾಗಿರುತ್ತಾರೆ. ಎಷ್ಟು ಸಣ್ಣ ಪ್ರಾಯದವರಲ್ಲೂ ಅವರು ಮಾತುನಾಡುವ ರೀತಿಯನ್ನು ಕಂಡರೆ ನಮಗೆ ಆಶ್ಚರ್ಯವಾಗದೆ ಇರದು. ಅವರ ಮಾತಿನಲ್ಲಿ ಪ್ರೀತಿ, ಗೌರವ ಪ್ರತಿಫಲಿಸುತ್ತಿರುತ್ತದೆ. ಆದ್ದರಿಂದಲೇ ಅವರ ವ್ಯಕ್ತಿತ್ವದ ಸೌಂದರ್ಯವೂ ಮಿರಿಮಿರಿ ಹೊಳೆಯುತ್ತಿರುತ್ತದೆ.
  ಕಲಾಪೋಷಕ
  ಇವರು ಎಂಜಿನಿಯರಿಂಗ್ ಓದಿ ಉದ್ಯಮಿಯಾಗಿದ್ದರೂ ಕಲೆಗೆ ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯವೇ. ಮೊದಲ ಬಾರಿಗೆ ಯಕ್ಷಗಾನ ತಂಡವನ್ನು ಕತಾರ್‌ಗೆ ಕರೆಸಿಕೊಂಡು ಕಾರ್ಯಕ್ರಮ ಕೊಡಿಸಿದ ಹೆಮ್ಮೆ ಇವರಿಗೆ ಸಲ್ಲಬೇಕು. ಇವರ ಎಟಿಎಸ್ ಕಂಪೆನಿಯ ಕಾರ್ಯಕ್ರಮವೊಂದರಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಜತೆಗೆ ಊರಿನಿಂದ ಹೋಗುವ ನಾಟಕ ತಂಡಗಳಿಗೂ ಅವರು ನೀಡಿರುವ ಹಾಗೂ ನೀಡುತ್ತಿರುವ ಸಹಕಾರ ಮೆಚ್ಚತಕ್ಕದ್ದು. ಆದ್ದರಿಂದಲೇ ಕಲಾವಿದರಿಗೆ ಹಾಗೂ ಕಲಾತಂಡದ ಪಾಲಿಗೆ ಇವರೋರ್ವ ದೊಡ್ಡ ಆಲದಮರವಿದ್ದಂತೆ. ನಮ್ಮ ಚಾ ಪರ್ಕ ತಂಡವು ಕತಾರ್‌ಗೆ ಹೋಗಿದ್ದಾಗಲೆಲ್ಲ ರವಿ ಶೆಟ್ಟರು ನೀಡಿರುವ ಸಹಾಯ, ಸಹಕಾರಕ್ಕೆ ನಾವು ಸದಾ ಋಣಿಯಾಗಿದ್ದೇವೆ. ನಮಗೆ ಅದು ಪರವೂರು ಎಂಬ ಭಾವನೆ ಬಾರದಂತೆ ನಮ್ಮ ಮನೆಮಂದಿಯತೆಯೇ ಅವರು ನೋಡಿಕೊಳ್ಳುತ್ತಿದ್ದರು. ಇದು ಕೇವಲ ಚಾ ಪರ್ಕ ತಂಡದ ಅನುಭವ ಮಾತ್ರ ಎನ್ನುವಂತಿಲ್ಲ. ಕತಾರ್‌ಗೆ ಹೋಗಿರುವ ಬಹುತೇಕ ಎಲ್ಲ ಕಲಾತಂಡ ಮತ್ತು ಕಲಾವಿದರು ಕೂಡ ರವಿ ಶೆಟ್ಟಿ ಬಗ್ಗೆ ಇಂಥ ಮಾತನ್ನೇ ಹೇಳುವುದು ಖಚಿತ.
  ಕೊಡುಗೈ ದಾನಿ
  ರವಿ ಶೆಟ್ಟರು ನೀಡಿರುವ ದಾನಗಳು ಇಂತಿಷ್ಟೆ ಎಂದು ಲೆಕ್ಕಹಾಕಲಾಗದು. ದೇವಸ್ಥಾನವಿರಬಹುದು, ಶಿಕ್ಷಣ ಸಂಸ್ಥೆಯಿರಬಹುದು, ಸಾಮಾಜಿಕ ಸಂಸ್ಥೆಗಳಿಗಿರಬಹುದು, ಸರಕಾರದ ವಿವಿಧ ಪರಿಹಾರ ನಿಧಿಗಿರಬಹುದು, ವಿದ್ಯಾರ್ಥಿಗಳ ಶಿಕ್ಷಣಣಕ್ಕಿರಬಹುದು, ಆರೋಗ್ಯ ಸಂಬಂಧಿ ವಿಷಯಗಳಿಗಿರಬಹುದು ಹೀಗೆ ಎಷ್ಟೋ ಮಂದಿಗೆ ಅವರು ನೀಡಿರುವ ದಾನವೇ ಕೋಟ್ಯಂತರ ರೂ. ಆಗಬಹುದು. ಇವರಿಂದ ಸಹಾಯ ಕೇಳಬೇಕು ಎಂದೇನಿಲ್ಲ. ತುಂಬಾ ಸಂಕಷ್ಟ, ತೊಂದರೆಯಲ್ಲಿ ಯಾರೂ ಸಿಲುಕಿಕೊಂಡಿದ್ದಾರೆ ಎಂಬುದು ಗೊತ್ತಾದರೆ ಸ್ವಯಂಪ್ರೇರಿತರಾಗಿ ಸಹಾಯಹಸ್ತ ಚಾಚುವುದು ಇವರ ಹೆಚ್ಚುಗಾರಿಕೆ. ತಾನು ಮಾಡಿದ ಸಹಾಯವನ್ನು ನಾಲ್ಕು ಮಂದಿಯೊಂದಿಗೆ ಹಂಚಿಕೊಳ್ಳುವ ಸ್ವಭಾವವೂ ಇವರದ್ದಲ್ಲ. ದಾನ ನೀಡಿದ್ದನ್ನು ಹೇಳಿಕೊಂಡರೆ ಅದರಿಂದ ಸಿಗಬಹುದಾದ ತೃಪ್ತಿಯನ್ನು ಕಳೆದುಕೊಂಡಂತೆ ಎಂಬ ಭಾವನೆ ಇವರದ್ದು. ಆದ್ದರಿಂದ ಅವರು ನೀಡಿರುವ ದೇಣಿಗೆ, ಮಾಡಿರುವ ಸಹಾಯದ ಲೆಕ್ಕ ಪಕ್ಕಾ ಇಲ್ಲ. ಇದು ಅಶಕ್ತರಿಗೆ ನೀಡುವ ಸಹಾಯ, ದಾಖಲೆಗಾಗಿ ಮಾಡುವ ಕೆಲಸವಲ್ಲ ಎಂಬುದು ಅವರ ಅಭಿಪ್ರಾಯ.
  ಸಮಾಜಸೇವೆಯಲ್ಲಿ ಖುಷಿ
  ಸಮಾಜಸೇವೆಯಲ್ಲಿ ಅವರಿಗೆ ಏನೋ ಒಂದು ಖುಷಿ. ನಾಲ್ಕು ಮಂದಿಗೆ ಸಹಾಯ ಮಾಡುವುದರಿಂದ ಸಿಗುವ ಸಂತೃಪ್ತಿ ಬೇರೆ ಯಾವುದರಿಂದಲೂ ಸಿಗದು ಎಂದು ಹೇಳುವ ಅವರು, ತಾನು ಈ ಹಂತಕ್ಕೆ ಬರುವುದಕ್ಕೆ ಕಲಿಸಿದ ಶಿಕ್ಷಕರು, ಹೆತ್ತು ಸಾಕಿದವರು ಹಾಗೂ ಪ್ರೀತಿಯ ಗೆಳೆಯರೇ ಕಾರಣ ಎನ್ನುತ್ತಿರುವುದು ಅವರಲ್ಲಿ ತಾನು ಎಂಬ ಅಹಂ ಇಲ್ಲ ಎಂಬುದನ್ನು ಸಾಬೀತು ಮಾಡುತ್ತದೆ. ಇವರ ಎಲ್ಲ ರೀತಿಯ ಸಮಾಜಸೇವೆಗೆ ಪತ್ನಿ, ಮಕ್ಕಳ ಸಂಪೂರ್ಣ ಸಹಕರಾವೂ ಇದೆ. ಅಂಥದ್ದೊಂದು ಕುಟುಂಬವನ್ನು ಪಡೆದಿರುವ ತಾನು ಧನ್ಯ ಎಂಬ ತೃಪ್ತಿಯೂ ಅವರಲ್ಲಿ ಎದ್ದು ಕಾಣುತ್ತಿದೆ.
  ಏನು ಹೇಳಿದರೂ ಕಡಿಮೆಯೇ
  ಇವರನ್ನು ಪರೋಪಕಾರಿ, ಸಮಾಜಸೇವಕ, ಆಪದ್ಬಾಂಧವ, ಆಶ್ರಯದಾತ, ಕೊಡುಗೈದಾನಿ ಹೀಗೆ ಯಾವ ವಿಶೇಷಣಗಳಿಂದ ಕರೆದರೂ ಕಡಿಮೆಯೇ. ಇವರು ಈ ಎಲ್ಲ ವಿಶೇಷಣಗಳಿಗೂ ಮೀರಿ ನಿಲ್ಲುವವರು ನಮ್ಮ ರವಿಯಣ್ಣ. ಅವರ ಪ್ರೀತಿ, ಆತಿಥ್ಯವನ್ನು ಶಬ್ದದಲ್ಲಿ ಹಿಡಿದಿಡುವುದು ಒಂದು ಸಾಹಸವೇ. ಅದು ನಮ್ಮಂಥವರಿಗೆ ಸಾಧ್ಯವಾದುದಲ್ಲ. ಅದನ್ನು ಅನುಭವಿಸಿಯೇ ತೀರಬೇಕು.
  ತುಳುನಾಡಿನ ಹೆಮ್ಮೆ
  ಇಂಥ ಸಾಧಕ ಹಾಗೂ ಶ್ರೇಷ್ಠ ವ್ಯಕ್ತಿ ನಮ್ಮವರು ಎಂದು ಹೇಳಲು ನಾವು ಹೆಮ್ಮೆಪಡಬೇಕಾಗಿದೆ. ತುಳುನಾಡಿನ ಮಣ್ಣಲ್ಲಿ ಹುಟ್ಟಿ ಅರಬರ ನಾಡಿನಲ್ಲಿ ಈಗ ಔದ್ಯೋಗಿಕ ನೆಲೆ ಕಂಡುಕೊಂಡಿದ್ದರೂ ಅವರ ತುಡಿತ ತುಳುನಾಡು ಹಾಗೂ ತುಳುವರ ಕಡೆಗಿದೆ. ಇಂಥ ಮಾಣಿಕ್ಯವೊಂದು ತುಳುನಾಡಿಗೆ ದೊಡ್ಡ ಶೋಭೆ. ತುಳುನಾಡಿನವರ ಔದಾರ್ಯಕ್ಕೆ ಇವರೊಬ್ಬ ಉತ್ತಮ ಉದಾಹರಣೆಯಾಗಿದ್ದಾರೆ. ದೂರದ ಊರಿನಲ್ಲಿದ್ದರೂ ಕಷ್ಟದ ಸಂದರ್ಭದಲ್ಲಿ ಇವರು ಥಟ್ಟನೆ ನೆನಪಾಗಿ, ನಮ್ಮ ಪಕ್ಕದಲ್ಲೇ ಇದ್ದಂತೆ ಭಾಸವಾಗುತ್ತದೆ. ತುಳುಮಾತೆಯ ಅಪರೂಪದ ಪುತ್ರಮಾಣಿಕ್ಯವಾಗಿರುವ ರವಿ ಶೆಟ್ರು ಎಲ್ಲಿ ಹೋದರೂ ಅಲ್ಲಿ ತನ್ನ ಸೇವೆಯ ಮೂಲಕವೇ ಮಿಂಚುವ ಧ್ರುವನಕ್ಷತ್ರವಾಗಿದ್ದಾರೆ.
  ಜನರ ಪ್ರೀತಿಗಿಂತ ದೊಡ್ಡ ಪ್ರಶಸ್ತಿಯಿಲ್ಲ
  ರವಿ ಶೆಟ್ಟಿಯವರಿಗೆ ಸಮಾಜಸೇವೆ, ಉದ್ಯಮಕ್ಕೆ ಸಂಬಂಧಿಸಿ ಅಸಂಖ್ಯ ಪ್ರಶಸ್ತಿ, ಸಮ್ಮಾನಗಳು ಸಂದಿವೆ. ಅದು ಅವರಲ್ಲಿ ಯಾರ ಬದಲಾವಣೆಯನ್ನೂ ಮಾಡಿಲ್ಲ. ಆದರೆ ಅದರಿಂದ ತನ್ನ ಜವಾಬ್ದಾರಿ ಹೆಚ್ಚಿದೆ.

  (ತುಳುನಾಡ ರಕ್ಷಣಾ ವೇದಿಕೆ ದಶಮಾನೋತ್ಸವ ಅಂಗವಾಗಿ ತೌಳವ ಉಚ್ಚಯ ವಿಶ್ವ ತುಳು ಸಮ್ಮೇಳನದಲ್ಲಿ ತೌಳವ ಸಿರಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಸಂದರ್ಭ)

  Latest Posts

  ಭಾರತಕ್ಕೆ ಗಂಡಾಂತರ ಕಾದಿದೆ – ಕೋಡಿಮಠ ಶ್ರೀ ಭವಿಷ್ಯ

  ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ...

  500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

  ಹೊಸದಿಲ್ಲಿ: 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್...

  ಒಡಿಶಾ ರೈಲು ದುರಂತದಲ್ಲಿ ಕಾಣೆಯಾಗಿ ಟಿವಿ ಲೈವ್‌ನಲ್ಲಿ ಪತ್ತೆಹಚ್ಚಿ ಪೋಷಕರನ್ನು ಸೇರಿದ ಪುತ್ರ!

  ಕಟಕ್: ಜೂನ್ 2ರಂದು ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗ ದೂರದರ್ಶನವೊಂದರಲ್ಲಿ ಪ್ರಸಾರವಾಗುತ್ತಿದ್ದ ನೇರ ಸಂದರ್ಶನ ಪ್ರಸಾರದಿಂದ ಮತ್ತೆ ತಂದೆ - ತಾಯಿ ಜೊತೆ ಸೇರಿದ್ದಾನೆ.

  ಉಳ್ಳಾಲ: ನೂತನ ಮನೆಯ ಗೃಹ ಪ್ರವೇಶದ ಐದೇ ದಿನದಲ್ಲಿ ನೇಣುಬಿಗಿದು ಯುವತಿ ಆತ್ಮಹತ್ಯೆ

  ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. 

  Don't Miss

  ಮಂಗಳೂರು : ದಡಾರ – ರುಬೆಲ್ಲಾ ನಿರ್ಮೂಲನೆಗೆ ಎಲ್ಲಾ ಇಲಾಖೆಗಳ ಪರಿಣಾಮಕಾರಿ ಸಹಕಾರ ಅಗತ್ಯ

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಡಾರ ಹಾಗೂ ರುಬೆಲ್ಲಾ ನಿರ್ಮೂಲನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳ ಪರಿಣಾಮಕಾರಿ ಸಹಕಾರ ಅತ್ಯಗತ್ಯ....

  ಕಂಬಳ‌ ಇತಿಹಾಸಲ್ಲಿ ನೂತನ ಅಧ್ಯಾಯ: ಯುವತಿಯರಿಗೆ ತರಬೇತಿ‌ ನೀಡಲು ಅಕಾಡೆಮಿ ಸಿದ್ಧ

  ಮಂಗಳೂರು: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳ ದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ ಪ್ರತಿವಾದದಲ್ಲಿ ಕಂಬಳ ಗೆದ್ದಿದೆ. ಇದರಿಂದಾಗಿ ಕಂಬಳ ಆಯೋಜಕರು ಮತ್ತಷ್ಟು ಪುಳಕಿತರಾಗಿದ್ದಾರೆ. ಪ್ರಸಕ್ತ ವರ್ಷದ ಕಂಬಳ...

  ಒಡಿಶಾ ಭೀಕರ ರೈಲು ದುರಂತ ಸ್ಥಳಕ್ಕೆ ‘ಪ್ರಧಾನಿ ಮೋದಿ’ ಭೇಟಿ

  ನವದೆಹಲಿ : ಬಾಲಸೋರ್ ನಲ್ಲಿ ಸಂಭವಿಸಿದ ರೈಲು ಅಪಘಾತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನಂತ್ರ ಕಟಕ್ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲಿದ್ದಾರೆ.

  ಕಾರ್ಕಳ: ಮೀನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ

  ಕಾರ್ಕಳ : ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಲ್ಲೂರು ಪರಪ್ಪಾಡಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

  ಮುಂಬೈ-ಗೋವಾ ವಂದೇ ಭಾರತ್‌ ಎಕ್ಸ್‌ಪ್ರೆಸ್ ಉದ್ಘಾಟನೆ ರದ್ದು

  ಮುಂಬಯಿ: ಇಂದು ಉದ್ಘಾಟನೆಯಾಗಬೇಕಿದ್ದ ಮುಂಬೈ-ಗೋವಾ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮಾದರಿಯಲ್ಲಿ ಉದ್ಘಾಟಿಸಬೇಕಿತ್ತು.ಆದರೆ...