ಮಂಗಳೂರು: ನಗರದ ಪ್ರಸಿದ್ಧ ಕ್ಷೇತ್ರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ಅದ್ದೂರಿಯಾಗಿ ರಥೋತ್ಸವ ನಡೆಯಿತು. ವಿಜಯದಶಮಿ ಪರ್ವ ದಿನವಾದ ದೇವಿಗೆ ವಿಶೇಷ ಪೂಜೆಗಳು ನಡೆದವು.
ರಥದಲ್ಲಿ ರಥಾರೂಢಳಾದ ಮಹಾತಾಯಿಗೆ ಆರತಿ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಅದ್ಧೂರಿಯಾಗಿ ರಥೋತ್ಸವ ಜರಗಿತು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ರಥೋತ್ಸವನ್ನು ಕಣ್ತುಂಬಿಕೊಂಡರು.
