Saturday, April 20, 2024
spot_img
More

    Latest Posts

    ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೆ ‘ರಾಷ್ಟ್ರಪತಿ ಪದಕ’

    ಬೆಂಗಳೂರು: ಪ್ರತಿ ವರ್ಷದಂತೆ ಈ ಭಾರಿಯ ಸ್ವಾತಂತ್ರ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಕೊಡಮಾಡುವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅಮೋಘ ಸೇವೆ ಸಲ್ಲಿಸಿದ 18 ಅಧಿಕಾರಿಗಳು ಪಾತ್ರರಾಗಿದ್ದಾರೆ.

    ಸರ್ಕಾರ ಈ ವರ್ಷ ರಾಷ್ಟ್ರಪತಿ ಪದಕಕ್ಕೆ ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ 18 ಅಧಿಕಾರಿಗಳ ಪಟ್ಟಿ ಪ್ರಕಟಿಸಿದೆ.

    ನಂಜಪ್ಪ ಶ್ರೀನಿವಾಸ್ ಎಸ್​ಪಿ ಮತ್ತು ಪ್ರಿನ್ಸಿಪಲ್ ಪೊಲೀಸ್‌ ತರಬೇತಿ ಶಾಲೆ ​ಕಡೂರು, ಪ್ರತಾಪ್ ಸಿಂಗ್ ತುಕಾರಾಮ್ ಡಿವೈಎಸ್​​ಪಿ, ಐಎಸ್​​ಡಿ, ನಂಬೂರ ಶ್ರೀನಿವಾಸ್ ರೆಡ್ಡಿ ಡಿವೈಎಸ್​ಪಿ, ಸಿಐಡಿ ಫಾರೆಸ್ಟ್ ಸೆಲ್, ನರಸಿಂಹಮೂರ್ತಿ ಪಿಳ್ಳಮುನಿಯಪ್ಪ ಡಿವೈಎಸ್​​ಪಿ, ಸಿಐಡಿ, ಪ್ರಕಾಶ್.ಆರ್‌. ಡಿವೈಎಸ್​ಪಿ, ಭ್ರಷ್ಟಾಚಾರ ನಿಗ್ರಹ ದಳ.

    ಶಿವಕುಮಾರ್.ಟಿ.ಎಂ. ಎಸಿಪಿ, ಸುಬ್ರಹ್ಮಣ್ಯಪುರ ಉಪವಿಭಾಗ ಬೆಂಗಳೂರು, ಝಾಕೀರ್ ಹುಸೇನ್ ಎಸಿಪಿ, ಉಪವಿಭಾಗ ಕಲಬುರಗಿ, ರಾಘವೇಂದ್ರ ರಾವ್ ಎಸಿಪಿ, ಬೆರಳಚ್ಚು ವಿಭಾಗ ಬೆಂಗಳೂರು, ರಾಜು ಚಿಕ್ಕಹನುಮೇಗೌಡ ಪಿಐ ವಿದ್ಯಾರಣ್ಯಪುರ ಠಾಣೆ, ಮೈಸೂರು ಅವರಿಗೆ ರಾಷ್ಟ್ರಪತಿ ಪದಕದ ಗೌರವ ಲಭಿಸಿದೆ.

    ಅದೇ ರೀತಿ ಡಿ.ಬಿ.ಪಾಟೀಲ್ ಸರ್ಕಲ್ ಇನ್ಸಪೆಕ್ಟರ್ ವಿಜಯಪುರ ರೈಲ್ವೆ, ಮೊಹಮ್ಮದ್ ಅಲಿ ಇನ್​ಸ್ಪೆಕ್ಟರ್, ಭ್ರಷ್ಟಾಚಾರ ನಿಗ್ರಹ ದಳ, ರವಿ ಬೆಳವಾಡಿ ಇನ್​ಸ್ಪೆಕ್ಟರ್ ಶೃಂಗೇರಿ ಪೊಲೀಸ್ ಠಾಣೆ, ಮುಪೀದ್ ಖಾನ್ ವಿಶೇಷ ಆರ್​​ಪಿಐ, ಕೆಎಸ್‌ಆರ್​​ಪಿ, ಮುರಳಿ ರಾಮಕೃಷ್ಣಪ್ಪ, ವಿಶೇಷ ಎಆರ್​ಎಸ್​ಐ, ಕೆಎಸ್‌ಆರ್​ಪಿ, ಮಹದೇವಯ್ಯ ಎಆರ್​​ಎಸ್‌ಐ, ಕೆಎಸ್‌ಆರ್​​ಪಿ, ಡಿ.ಬಿ.ಶಿಂಧೆ ಎಎಸ್‌ಐ, ಬೆಳಗಾವಿ ಸ್ಪೆಷಲ್ ಬ್ರಾಂಚ್, ರಂಜಿತ್ ಶೆಟ್ಟಿ ಎಎಸ್‌ಐ, ಕೆಂಪೇಗೌಡನಗರ ಪೊಲೀಸ್ ಠಾಣೆ, ಬಸವರಾಜು.ಬಿ. ಸ್ಪೆಷಲ್ ಎಆರ್​​ಎಸ್​ಐ, ರಾಜ್ಯ ಗುಪ್ತದಳ ಅವರು ರಾಷ್ಟಪತಿ ಪದಕ ಗೌರವಕ್ಕೆ ಭಾಜನರಾಗಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss