ಮಂಗಳೂರು: ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಾಹಿತ್ಯೋತ್ಸವ ಅ.16ರಂದು ನಡೆದಿದ್ದು ಶ್ರೀಮತಿ ರಶ್ಮಿ ಉಳ್ಳಾಲ್ ಇವರ ಸಮಾಜ ಸೇವೆಯಲ್ಲಿ ನಾಡಿಗೆ ನೀಡಿದ ಗಣನೀಯ ಸೇವೆಯನ್ನು ಗುರುತಿಸಿ ಕಥಾಬಿಂದು ಪ್ರಕಾಶನ ಸಂಸ್ಥೆಯ 15ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ‘ಸೌರಭ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ರಶ್ಮಿ ಉಳ್ಳಾಲ್ ಅವರು ಶ್ರೀ ಯು. ಎ ಪ್ರೇಮನಾಥ್ ಮತ್ತು ಶ್ರೀಮತಿ ಪ್ರಮೀಳಾ ಅವರ ದ್ವಿತೀಯ ಪುತ್ರಿ.

ಸಾಮಾಜಿಕ ಕಾಳಜಿ ಗುರುತಿಸಿ 2019 ರೇಡಿಯೋ ಸಾಧನೆಗಾಗಿ ಆಮಂತ್ರಣ ಪ್ರಶಸ್ತಿ ,2021 ರಂದು ಪರಿಸರ ಕ್ಷೇತ್ರದ ಸಾಧನೆ ಗುರುತಿಸಿ ರಾಜ್ಯ ಹೃದಯವಂತ ಪ್ರಶಸ್ತಿ ಹಾಗು ಕ್ರೈಂ ಕಂಟ್ರೋಲ್ ಫೋರ್ಸ್ & ಅಭಿಯಾನ ಫೌಂಡೇಶನ್ ವತಿಯಿಂದ ಮಹಿಳಾ ಸಾಧಕಿ 2021 ರಾಷ್ಟ್ರ ಪ್ರಶಸ್ತಿ ಲಭಿಸಿದ್ದು ಇದೀಗ ‘ಸೌರಭ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

