Thursday, April 18, 2024
spot_img
More

    Latest Posts

    ಭಾರತದಲ್ಲಿ ಪತ್ತೆಯಾದ ಅಪರೂಪದ ಗುಲಾಬಿ ಚಿರತೆ!

    ಜೈಪುರ: ಸಾಮಾನ್ಯವಾಗಿ ಭಾರತದಲ್ಲಿ ಕಾಣಿಸಿಕೊಳ್ಳುವ ಚಿರತೆಗಳು ತಿಳಿ ಹಳದಿ, ಹಳದಿ ಮಿಶ್ರಿತ ಕಂದು ಅಥವಾ ಚಿನ್ನದ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ.

    ಆದರೆ ಗುಲಾಬಿ ಚಿರತೆ ಬಗ್ಗೆ ಕೇಳಿದ್ದಿರಾ? ಹೌದು ಅತಿ ಅಪರೂಪದಲ್ಲೇ ಅಪರೂಪ ಎಣಿಸುವ ಗುಲಾಬಿ ಚಿರತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ೨೦೧೨ ಮತ್ತು ೨೦೧೯ ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಚಿರತೆ ರಾಜಸ್ಥಾನದ ದಕ್ಷಿಣ ಭಾಗದಲ್ಲಿರುವ ಪಾಲಿ ಜಿಲ್ಲೆಯ ಅರಾವಳ್ಳಿ ಬೆಟ್ಟ ಪ್ರದೇಶದ ರಾಣಕ್ಪುರ ಭಾಗದಲ್ಲಿ ಕಂಡುಬಂದಿದೆ.

    ಸ್ಟ್ರಾಬೆರಿ ಬಣ್ಣದ ಚುಕ್ಕೆಗಳಿರುವ ಈ ಅಪರೂಪದ ಚಿರತೆಯನ್ನು ಆಗಾಗ್ಗೆ ಕಂಡಿರುವುದಾಗಿ ರಾಣಕ್ಪುರ ಮತ್ತು ಕುಂಭಾಲಗಡ ಸ್ಥಳೀಯರು ತಿಳಿಸಿದ್ದರೂ ಛಾಯಾಗ್ರಾಹಕರ ಕ್ಯಾಮೆರಾಕ್ಕೆ ಸಿಕ್ಕಿರುವುದು ಇದೇ ಮೊದಲ ಬಾರಿ. ಉದಯ್ ಪುರ ಮೂಲದ ಹಿತೇಶ್ ಮೋಟ್ವಾನಿ ಎಂಬವರು ಇದರ ಪೋಟೋ ಕ್ಲಿಕ್ಕಿಸಿದ್ದಾರೆ.

    ಗುಲಾಬಿ ಚಿರತೆಯ ದೇಹವು ಗುಲಾಬಿ ಮಿಶ್ರಿತ ಹಳದಿ ಬಣ್ಣದಲ್ಲಿದೆ. ಇದರ ಮೈ ಮೇಲಿನ ಕಪ್ಪು ಗುರುತು ಕೂಡ ಬೇರೆ ಚಿರತೆಗಳಿಗಿಂತ ವಿಭಿನ್ನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು 5-6 ವರ್ಷದ ಹೆಣ್ಣು ಚಿರತೆ ಎನ್ನಲಾಗಿದೆ. ಈ ಗುಲಾಬಿ ಚಿರತೆಯ ರಕ್ಷಣೆಗಾಗಿ 600 ಚದರ ಕಿ.ಮೀ ರುವ ಕುಂಬಲ್‌ಗ‌ರ್‌ ಕಾಡಿನ ಪ್ರದೇಶಕ್ಕೆ ಸಾರ್ವಜನಿಕರ ಭೇಟಿ ನಿರ್ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಇಲ್ಲಿನ ಅಗಾಧ ವಿಸ್ತಾರದ ಅರಣ್ಯ ಪ್ರದೇಶದಿಂದಾಗಿ ಈ ಗುಲಾಬಿ ಚಿರತೆ ಎಲ್ಲಾ ಕಡೆ ಓಡಾಡುತ್ತಿದೆ ಎಂದು ರಾಜಸಮಂದ್ ಡಿಸಿಎಫ್ ಫತೇಹ್ ಸಿಂಗ್ ರಾಥೋರ್ ಹೇಳಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss