ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು 26 ರೀತಿಯ ಔಷಧಿಗಳನ್ನು ನಿಷೇಧಿಸಿದೆ. ಇನ್ನು ರಾಂಟ್ಯಾಕ್(Rantac) ಮತ್ತು ಜಿಂಟ್ಯಾಕ್(Zintac) ಮಾತ್ರೆಗಳನ್ನ ತುರ್ತು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇನ್ನು ಈ ಮಾತ್ರೆಗಳಿಂದ ಕ್ಯಾನ್ಸರ್ ಉಂಟಾಗುತ್ತಿದೆ ಎಂಬ ಅನುಮಾನಗಳಿವೆ ಎಂದು ಕೇಂದ್ರ ಹೇಳಿದೆ.
ಇದಲ್ಲದೇ, 26 ರೀತಿಯ ಔಷಧಿಗಳನ್ನ ಭಾರತೀಯ ಮಾರುಕಟ್ಟೆಯಿಂದ ತೆಗೆದುಹಾಕಲು ಆದೇಶಿಸಲಾಗಿದೆ. ಆಮ್ಲೀಯತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ Rantac ಮತ್ತು Zintac ಔಷಧಿಗಳನ್ನ ವೈದ್ಯರು ಶಿಫಾರಸು ಮಾಡುತ್ತಾರೆ. ಆರೋಗ್ಯ ಸಚಿವಾಲಯವು 384 ಔಷಧಗಳನ್ನ ಒಳಗೊಂಡ ಅಗತ್ಯ ಔಷಧಿಗಳ ಹೊಸ ರಾಷ್ಟ್ರೀಯ ಪಟ್ಟಿಯನ್ನ ಬಿಡುಗಡೆ ಮಾಡಿದೆ ಮತ್ತು 26 ಔಷಧಿಗಳನ್ನ ಪಟ್ಟಿಯಿಂದ ತೆಗೆದುಹಾಕಿದೆ.
ಆಲ್ಟೆಪ್ಲೇಸ್, ಅಟೆನೊಲೋಲ್, ಬ್ಲೀಚಿಂಗ್ ಪೌಡರ್, ಕಪ್ರೋಮೈಸಿನ್, ಸೆಟ್ರಿಮೈಡ್, ಕ್ಲೋರ್ಫೆನಿರಮೈನ್, ಡಿಲೋಕ್ಸಾನೈಡ್ ಫ್ಯೂರೋಯೇಟ್, ಡೈಮರ್ಕಾಪ್ರೋಲ್, ಎರಿಥ್ರೋಮೈಸಿನ್, ಈಥೈಲ್ ಸ್ಟ್ರಾಡಿಯೊಲ್, ಈಥೈಲ್ ಸ್ಟಾಡಿಯೊಲ್ (ಎ) ನೊರೆಥಿಸ್ಟೆರಾನ್ (ಬಿ), ಗ್ಯಾನ್ಸಿಕ್ಲೋವಿರ್, ಕ್ಯಾನಮೈಸಿನ್, ಲ್ಯಾಮಿವುಡಿನ್ (ಎ)+ನೆವಿರಾಪೈನ್ (ಬಿ)+ ಸ್ಟಾವುಡಿನ್ (ಸಿ), ಲೆಫ್ಲುನೋಮೈಡ್ ಈ 26 ಔಷಧಿಗಳು ನಿಷೇಧಿತ ಔಷಧಗಳಾಗಿವೆ.
