ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇದರ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆವರಣದಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ರೂ.25 ಲಕ್ಷ ಹಾಗೂ ಇತರ ವೆಚ್ಚಗಳಿಗೆ ರೂ.6 ಲಕ್ಷ ಅನುದಾನದಲ್ಲಿ ಇದೀಗ ಕಾಮಗಾರಿಯು ಪೂರ್ಣಗೊಂಡು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆವರಣದಲ್ಲಿ ಇಂದು ( ಅ.14) ಬೆಳಿಗ್ಗೆ 10. ಗಂಟೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಬಯಲು ರಂಗ ಮಂದಿರ ಲೋಕಾರ್ಪಣೆ ಗೊಂಡಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಯನ್ನು ನುಡಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಜಯಾನಂದ ಅಂಚನ್ ರವರು ಅಕಾಡೆಮಿ ಪ್ರಕಟಿತ ಪುಸ್ತಕ “ಸೀಕ್ ಸಂಕಡ ಇಲ್ಲ ಪಾತೆರ ಬೈದೆರೆನ ಕೆಬಿ ಪಾತೆರ” ಮತ್ತು ಮದೆಪ್ಪೆರಾವಂದಿ ತುಳುವೆರ್ ಮಾಲಿಕೆಯ ಪುಸ್ತಕ “ಆಟದಾರ್ ಪುಳಿಂಚೆದಾರ್ ರಾಮಯ್ಯ ಶೆಟ್” ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಸಾಹಿತಿ ಹಾಗೂ ಸಂಶೋಧಕರಾದ ಡಾ. ಸದಾನಂದ ಪೆರ್ಲ, ದಯಾನಂದ ಜಿ.ಕತ್ತಲ್‌ಸಾರ್ ಮತ್ತು ಅಣ್ಣಯ್ಯ ಕುಲಾಲ್ ರವರಿಗೆ ಸನ್ಮಾನಿಸಲಾಯಿತು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಎಂ.ಸಿ.ಎಫ್ ಪ್ರಾಯೋಜಕತ್ವದ ದಾಖಲೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಿದ ನಮ್ಮ ಕುಡ್ಲ ಚಾನೆಲ್ ಮುಖ್ಯಸ್ಥರಾದ ಲೀಲಾಕ್ಷ ಕರ್ಕೇರ, ನಮ್ಮ ಟಿ.ವಿ ಚಾನೆಲ್ ಪರವಾಗಿ ನವೀನ್ ಶೆಟ್ಟಿ , V4 ಚಾನಲ್ ಮುಖ್ಯಸ್ಥರಾದ ಲಕ್ಷ್ಮಣ್ ಕುಂದರ್, ಚಾನೆಲ್ 9 ಮತ್ತು ದೈಜಿ ವರ್ಲ್ಡ್ ಚಾನೆಲ್‌ರವರನ್ನು ಸನ್ಮಾನಿಸಲಾಯಿತು.




ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಪೂರ್ಣಿಮಾ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ಗಣೇಶ್ ಕುಲಾಲ್ , ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು, ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷರಾದ ವಿಜಯ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಾದ ಕಿರಣ್ ಕುಮಾರ್, ಶಕಿಲಾ ಕಾವೂರು, ಭಾಸ್ಕರ ರೈ ಕುಕ್ಕುವಳ್ಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಪ್ರದೀಪ್ ಡಿಸೋಜ, ರಿಜಿಸ್ಟ್ರಾರ್ ಕವಿತ ಮತ್ತಿತರರು ಭಾಗವಹಿಸಿದ್ದರು.
ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

