Wednesday, April 17, 2024
spot_img
More

    Latest Posts

    ಬಂಟ್ವಾಳ: “ರುದ್ರಗಿರಿಯ ರಣ ಕಹಳೆ” ಬೃಹತ್ ಜನಜಾಗೃತಿ ಸಭೆ- ಮದ್ಯ ಮಳಿಗೆಗಳು ಬಂದ್

    ಬಂಟ್ವಾಳ: ದೇವಳದ ರಥಬೀದಿಯಲ್ಲಿ ರುದ್ರಗಿರಿಯ ರಣ ಕಹಳೆ ಎಂಬ ಹೆಸರಿನಲ್ಲಿ ಬೃಹತ್ ಜನಜಾಗೃತಿ ಸಭೆಯ ನಡೆಯಲಿದೆ.  ಜಿಲ್ಲೆ ಮತೀಯವಾಗಿ ಮತ್ತು ರಾಜಕೀಯವಾಗಿ ಅತೀ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ಕಾಪಾಡುವ ಹಿತದೃಷ್ಟಿಯಿಂದ ಇಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ. ಸಿ ರೋಡ್, ಪಾಣೆಮಂಗಳೂರು, ಬಂಟ್ವಾಳ ಕಸಬ ಮತ್ತು ಅಮ್ಟಾಡಿ ಗ್ರಾಮ, ನರಿಕೊಂಬು, ಸಜಿಪ ಮೂಡ ಮತ್ತು ಸಜಿಪ ಮುನ್ನೂರು ಗ್ರಾಮ, ಗೊಳ್ತಮಜಲು ಮತ್ತು ಅಮ್ಟೂರು ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಕಾವಳಪಡೂರು ಮತ್ತು ಪುಂಜಾಲಕಟ್ಟೆ ಪೊಲೀಸ್ ಠಾಣಾ ಸರಹದ್ದುಗಳ ಮಾಲಾಡಿ, ಪಾರೆಂಕಿ, ಉಳಿ, ಪಿಲಾತಬೆಟ್ಟು, ಬಡಗಕಜೆಕಾರು, ಚೆನ್ನೈತ್ತೋಡಿ ಹಾಗೂ ಎಲಿಯನಡುಗೋಡು ವ್ಯಾಪ್ತಿಯ ಎಲ್ಲಾ ಬಾರ್, ವೈನ್ ಶಾಪ್, ಮದ್ಯಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. , ಅವರು ಕರ್ನಾಟಕ ಅಬಕಾರಿ ಕಾಯಿದೆ1965ರ ಸೆಕ್ಷನ್ 21(1)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆದೇಶ ಹೊರಡಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss