ಮಂಗಳೂರು: ನಗರದಲ್ಲಿ ಕೊರಗಜ್ಜನ ಆದಿಸ್ಥಳ ಕತ್ತಾರುಗೆ ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಪತ್ನಿ ಗೀತಾ, ಮಗಳೊಂದಿಗೆ ಕುತ್ತಾರು ಕ್ಷೇತ್ರಕ್ಕೆ ಶಿವಣ್ಣ ಭೇಟಿ ನೀಡಿ ಕೊರಗಜ್ಜ ದೈವದ ಆದಿ ಸ್ಥಳದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಕೊರಗಜ್ಜನಿಗೆ ಭಕ್ತರು ಹರಕೆ ತೀರಿಸಿಕೊಳ್ಳಲಾಗಿದೆ. ಕೊರಗಜ್ಜನಿಗೆ ವೀಳ್ಯದೆಲೆ, ಚಕ್ಕುಲಿ ಇಟ್ಟು ಪ್ರಾರ್ಥನೆ ಮಾಡುತ್ತಾರೆ. ಈ ಸಾನಿಧ್ಯಕ್ಕೆ ಭೇಟಿ ನೀಡಿದ ಶಿವಣ್ಣ ಕೊರಗಜ್ಜನಿಗೆ ವೀಳ್ಯದೆಲೆ, ಚಕ್ಕುಲಿ ಇಟ್ಟ ಪ್ರಾರ್ಥನೆ ಮಾಡಿದ್ದಾರೆ. ವೇದ ಚಿತ್ರದ ಪ್ರಮೋಷನ್ಗಾಗಿ ಮಂಗಳೂರಿಗೆ ಭೇಟಿ ನೀಡಿದ್ದ ಶಿವಣ್ಣ ಈ ಕ್ಷೇತ್ರಕ್ಕೂ ಭೇಟಿ ನೀಡಿದ್ದಾರೆ. ಮಂಗಳೂರಿನ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಶಿವರಾಜ್ ಕುಮಾರ್ ಜೊತೆಗೆ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಮತ್ತು ಶಿವಣ್ಣ ಮಗಳು ಕೂಡ ತಂದೆ ಜೊತೆಗೆ ಭೇಟಿ ನೀಡಿದ್ದಾರೆ. ವೇದ ಚಿತ್ರ ತಂಡವು ಕೂಡ ಶಿವಣ್ಣನಿಗೆ ಸಾಥ್ ನೀಡಿದೆ.