ದೆಹಲಿ: ವ್ಯಕ್ತಿಯೊಬ್ಬ ಮಧ್ಯದ ಅಮಲಿನಲ್ಲಿ ಕಂಠಪೂರ್ತಿ ಕುಡಿದು ರೈಲ್ವೇ ಹಳಿಮೇಲೆ ಟ್ರಕ್ ನಿಲ್ಲಿಸಿದ್ದು ದೊಡ್ಡ ಅಪಘಾತವೊಂದು ಲೋಕೋ ಪೈಲಟ್ ನ ಸಮಯ ಪ್ರಜ್ಞೆಯಿಂದ ತಪ್ಪಿದೆ. ಅಧಿಕಾರಿಗಳು ತಿಳಿಸಿದ ಮಾಹಿತಿ ಮೇರೆಗೆ ಟ್ರಕ್ ಕಂಡು ರೈಲನ್ನು ನಿಧಾನಗೊಳಿಸಿದ್ದರು, ಮತ್ತು ಟ್ರಕ್ನಿಂದ ಕೆಲವು ಮೀಟರ್ ದೂರದಲ್ಲೇ ರೈಲನ್ನು ನಿಲ್ಲಿಸಿ, ಅಪಘಾತವನ್ನು ತಪ್ಪಿಸಿದ್ದಾರೆ.
ದೆಹಲಿಯ ಲುಧಿಯಾನ ರೈಲ್ವೇ ಹಳಿಯಲ್ಲಿ ಟ್ರಕ್ ಚಲಾಯಿಸಿದ್ದಾನೆ, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಟ್ರ್ಯಾಕ್‌ನಲ್ಲಿ ಟ್ರಕ್ ಅನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸಿಂಗ್ ಹೇಳಿದರು.
ರೈಲು ನಿಂತ ಬಳಿಕ ಟ್ರಕ್ ಅನ್ನು ಟ್ರ್ಯಾಕ್‌ನಿಂದ ಹೊರತೆಗೆದು ಚಾಲಕನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು ಒಂದು ಗಂಟೆಯ ನಂತರ ರೈಲು ಸಂಚಾರವನ್ನು ಪುನರಾರಂಭಿಸಿದರು. ಚಾಲಕನ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಮದ್ಯದ ಅಮಲಿನಲ್ಲಿದ್ದ ಎಂಬುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.