ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ದಶ ಸಂಭ್ರಮದ ಉದ್ಘಾಟನ ಕಾರ್ಯಕ್ರಮ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಬಳಿಕ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಇವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಶೋಕ್ ರೈ ಕೋಡಿಂಬಾಡಿ, ಅಧ್ಯಕ್ಷರು ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಶುಭ ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜಯಂತ ನಡುಬೈಲು, ರೆ. ಫಾಧರ್ ಲಾರೆನ್ಸ್ ಮಾಸ್ಕರೇನಾನ್ಸ್, ಧರ್ಮಗುರು ಮಾಯಿದೆ ದೇವುಸ್ ಚರ್ಚ್ ಪುತ್ತೂರು, ಹುಸೈನ್ ರೆಂಜಾಲಾಡಿ, ಧಾರ್ಮಿಕ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ನಡೆದು ಬಂದ 22 ವರ್ಷದ ಉದ್ಯಮ ಕ್ಷೇತ್ರ ಹಾಗೂ 10 ವರ್ಷದ ದಶ ಸಂಭ್ರಮದ ಸಾಧನೆಯ ಹಾದಿಯ ಕುರಿತಾದ ಧರ್ಮಾತ್ಮ.. ಬಡವರ ಬೆಳಕು ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಧಾರ್ಮಿಕ ಕ್ಷೇತ್ರ , ಸಾಂಸ್ಕೃತಿಕ ಕ್ಷೇತ್ರ , ಸಮಾಜ ಮುಖಿ ಕ್ಷೇತ್ರ, ಕೃಷಿ ಕ್ಷೇತ್ರ, ಕಾರ್ಮಿಕ ವರ್ಗ ಹೀಗೆ ಹಲವು ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹೇಮಾವತಿ ರೈ, ಚಂದ್ರ ಗೌಡ ಬೀತಲಾಪು, ಅಣ್ಣು ಬೀತಲಾಪು, ಚಂದ್ರಾವತಿ, ಕಮಲ, ಶೇಖರ ನಾಯಕ್, ಕುಂಜಣ್ಣ ನಾಯ್ಕ, ವಿಶ್ವನಾಥ ರೈ ಪುಣಚ, ಬೋರ ಕೋಡಿಂಬಾಡಿ, ವಿಶ್ವನಾಥ ಪೂಜಾರಿ, ವಿಠ್ಠಲ ನಾಯಕ ಪುರುಷರಕಟ್ಟೆ, ಸಂಜೀವ ಇಡ್ಕಿದು, ಬಿ. ಫಾತಿಮಾ, ಮೇರಿ ಪಾಯಸ್, ದೇವಪ್ಪ ಗೌಡ, ಮಾಕ್ಸಿನ್, ಚೋಮು, ಬಾಬು ನೆಕ್ಕರೆ ರವಿ ವಾಲ್ಟರ್ ಇಡ್ಕಿದು, ರಾಜೇಶ್ ಬನ್ನೂರು, ತೇಜಸ್ ಉಬರಡ್ಕ, ಗಿರಿಜ ಬಡಗನ್ನೂರು, ಸುಂದರ ಕೊರಗ ಸೇಡಿಯಪು, ಅಬ್ದುಲ್ ರೈಮಾನ್, ಲೀಲಾವತಿ ಪೂಜಾರಿ ಗೆಜ್ಜೆಗಿರಿ, ಬಟ್ಯ, ಸಾಂತಪ್ಪ ನಾಯ್ಕ, ಅಜಿತ್ ಪಡ್ನೂರು, ಮನೋಜ್ ನಾಯ್ಕ್, ರಾಜೇಶ್ ನಾಯ್ಕ್, ಸೀತಾರಾಮ ಬೆಳ್ಳಿಪಾಡಿ, ತಿಮ್ಮಪ್ಪ, ಮೋನಪ್ಪ ಕುಲಾಲ್, ಸಂಧ್ಯಾ ಬಡಗನ್ನೂರು, ಪದ್ಮನಾಭ ಪೂಜಾರಿ ಸೇರಿದಂತೆ ಸುಮಾರು 39 ಗ್ರಾಮೀಣ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಅಶೋಕ್ ಕುಮಾರ್ ರೈಯವರು ನಡೆದು ಬಂದ ಸಾಧನೆಯ ಹಾದಿಯನ್ನೊಳಗೊಂಡ ಧರ್ಮಾತ್ಮ ಕೃತಿಗೆ ಸಂಪಾದಕತ್ವ ವಹಿಸಿದ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಹಾಗೂ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಯತಿಂದ್ರ ಶೆಟ್ಟಿ ಹಾಗೂ ಜಯಪ್ರಕಾಶ್ ಬದಿನಾರ್ ಇವರನ್ನು ಈ ಸಂಧರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಇದರ ನೇತಾರ ಬಡವರ ಕಣ್ಮಣಿ ಅಶೋಕ್ ಕುಮಾರ್ ರೈ, ಸುಮ ಅಶೋಕ್ ರೈ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ “ಶಕ್ಕುಅಕ್ಕಾ ನನ್ನನು ಆಶೀರ್ವದಿಸಿ ರಾಜಕೀಯ ಕ್ಷೇತ್ರಕ್ಕೆ ಕಳುಹಿಸಿದರೆ ಮಾತ್ರ ನಾನು ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಡ್ತೇನೆ” ಎಂದರು.
ಕವಿತಾ ಮತ್ತು ತಂಡ ಪ್ರಾರ್ಥಿಸಿ, ಬಾಲಕೃಷ್ಣ ನಿರೂಪಿಸಿ, ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.
