Tuesday, April 23, 2024
spot_img
More

    Latest Posts

    ಸುಳ್ಯ:ದಂತ ವೈದ್ಯಕೀಯ ವಿಧ್ಯಾರ್ಥಿನಿ ಮೇಲೆ ರ‍್ಯಾಂಗಿಗ್ -6 ವಿದ್ಯಾರ್ಥಿಗಳ ವಿರುದ್ಧ ದೂರು

    ಸುಳ್ಯ: ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಸರಕಾರಿ ಸೀಟ್ ವಿಚಾರವಾಗಿ ರಾಗಿಂಗ್ ನಡೆಸಿರುವ ಘಟನೆ ನಡೆದಿದ್ದು, ಈ ಸಂಬಂಧ ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಡಾ.ಪಲ್ಲವಿ ರ‍್ಯಾಗಿಂಗ್‌ಗೆ ಒಳಗಾದ ಡೆಂಟಲ್ ವಿದ್ಯಾರ್ಥಿನಿಯಾಗಿದ್ದಾಳೆ. ಮೂರನೇ ವರ್ಷದ ಡೆಂಡಲ್ ವಿದ್ಯಾರ್ಥಿನಿಯಾಗಿರುವ ಡಾ.ಪಲ್ಲವಿ ರ‍್ಯಾಂಕ್ ಹೋಲ್ಡರ್ ಆಗಿದ್ದಾರೆ.

    ಡಾ.ಪಲ್ಲವಿಗೆ ರ‍್ಯಾಂಗಿಗ್ ಮಾಡಿದ ಆರೋಪದ ಮೇಲೆ ಕೇರಳ ಮೂಲದ ಆರು ವಿದ್ಯಾರ್ಥಿಗಳಿಂದ ದೂರು ದಾಖಲಾಗಿದೆ. ರ‍್ಯಾಂಗಿಗ್ ಮತ್ತು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಾಗಿದೆ. ಡಾ.ಪಲ್ಲವಿ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ ವಿದ್ಯಾರ್ಥಿಗಳು. ಮೂರನೇ ವರ್ಷದ ಡೆಂಟಲ್ ವಿದ್ಯಾರ್ಥಿ ವಿಶಾಖ್, ಡಾ.ವಿಶಾಕ್, ಐಶ್ವರ್ಯ, ಐಲ್ಪಾ ಮೇರಿ ಮ್ಯಾಥ್ಯೂ, ಡೆನಲ್ ಸೆಬಾಸ್ಟಿಯನ್, ರಿಷಿಕೇಸ್, ದಯಾ ವರ್ಗೀಸ್ ವಿರುದ್ಧ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೇರಳ ಮೂಲದ 6 ವಿದ್ಯಾರ್ಥಿಗಳಿಂದ ನಿರಂತರ ಕಿರುಕುಳ, ರಾಗಿಂಗ್ ಮಾತ್ರವಲ್ಲದೆ‌ ಹಲ್ಲೆಯನ್ನು‌ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮೆರಿಟ್​ನಲ್ಲಿ ಕಾಲೇಜಿನಲ್ಲಿ ಸೀಟು ಪಡೆದಿದ್ದ ಪಲ್ಲವಿಯನ್ನು ಇದೇ ವಿಚಾರವಾಗಿ ಕಿರುಕುಳ ನೀಡುತ್ತಿದ್ದರೆಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಿನ್ಸಿಪಲ್​ಗೆ ಮತ್ತು HODಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಿಲ್ಲ. ಡಿಸೆಂಬರ್ 21ನೇ ತಾರೀಖು ಅಣ್ಣ ಮತ್ತು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಮತ್ತು ನಮ್ಮಣ್ಣ ಊಟ ಮುಗಿಸಿ ವಾಪಸ್ ಬರುತ್ತಿದ್ದಾಗ ಕೆಟ್ಟ ಪದಗಳಿಂದ ನಿಂದನೆ ಮಾಡಿದರು.

    ಆ ಸಮಯದಲ್ಲಿ ನಮ್ಮ ಅಣ್ಣ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಾವು ಕೂಡಲೇ ಕಾಲೇಜು ಪ್ರಿನ್ಸಿಪಾಲ್ ಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ವಿ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದೆ. ಈ ಘಟನೆಯ ಬಗ್ಗೆ ಡಿಪಾರ್ಟ್‌ಮೆಂಟ್ HODಗೆ ತಿಳಿಸಿದ್ದೇವೆ. ಆದರೂ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss