ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರು, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟು ಹಬ್ಬದ ಪ್ರಯುಕ್ತ “ಪುವೆಂಪು – ನೆಂಪು” 2022 ಹಾಗೂ ತುಳು ಲಿಪಿ ದಿನಾಚರಣೆಯನ್ನು ಬೇರೆ ಬೇರ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ 10ರಂದು ಅನಂತಪುರದಲ್ಲಿ ನಡೆಸುವುದಾಗಿ ಅಯೋಜಿಸಲಾಗಿದೆ.

ತುಳು ವರ್ಲ್ಡ್ ಮಂಗಳೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಸಹಕಾರದೊಂದಿಗೆ ಪುವೆಂಪು ಅಭಿಮಾನಿಗಳು ಆಯೋಜಿಸಿದ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚನೆ ಮಾಡಲಾಗಿದೆ. ಪುಣಿಂಚಿತ್ತಾಯರ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಂಶೋಧಾನ್ಮಕ ವಿಷಯವನ್ನು ಜೋಡನೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಈ ಹಿನ್ನಲೆ ವಿಚಾರ ಗೋಷ್ಠಿ, ಸಾಹಿತ್ಯ ಗೋಷ್ಠಿ, ಪುವೆಂಪು ಸಮಕಾಲೀನ ಸಾಹಿತಿಗಳ ಸಮ್ಮಿಲನ,ಪುವೆಂಪು ರಚನೆ ಮಾಡಿದ ನಾಟಕದ ಪ್ರದರ್ಶನ ಹಾಗೂ ಅಭಿಮಾನಿಗಳ ವಿಚಾರ ಮಂಡನೆ,ಪುವೆಂಪು ಸಮ್ಮಾನ್ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಪ್ರಕಟನೆಯಲ್ಲಿ ಸಂಘಟನಾ ಸಮಿತಿ ತಿಳಿಸಿದೆ.
