Tuesday, April 16, 2024
spot_img
More

    Latest Posts

    ಪುತ್ತೂರು : ಹಾರಾಡಿ ಸಂಪರ್ಕ ರಸ್ತೆಯ ಶೋಚನಿಯ ಸ್ಥಿತಿ; ಜನರ ಪರದಾಟ ..!

    ಪುತ್ತೂರು: ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿಯಲ್ಲಿನ ಹಾರಾಡಿಯಿಂದ ಪುತ್ತೂರು ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ಪ್ರಯಾಣಿಸಿದರೆ ನರಕ ಸದೃಶ ಅನುಭವ ಉಂಟಾಗುವುದು ನಿಸ್ಸಂಶಯ.

    ಜಿಲ್ಲಾ ಕೇಂದ್ರದ ಕನಸಿನಲ್ಲಿರುವ ನಗರದ ಈ ರಸ್ತೆಯ ಶೋಚನಿಯ ಸ್ಥಿತಿಗೆ ಹಲವು ದಶಕಗಳೇ ಸಂದಿವೆ. ರೈಲ್ವೇ ಮತ್ತು ಸ್ಥಳೀಯಾಡಳಿತ ನಡುವಿನ ತಿಕ್ಕಾಟದಲ್ಲಿ ಇಲ್ಲಿ ಸಂಚರಿಸುವ ಪ್ರಯಾಣಿಕರ ಪಾಡಂತು ಹೇಳತೀರದು.

    ಕೆಲವು ವರ್ಷಗಳ ಹಿಂದೆಯೇ ರೈಲ್ವೇ ಈ ಸಂಬಂಧ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಸರಕಾರ ಮತ್ತು ರೈಲ್ವೇ 50:50 ಅನುಪಾತದಲ್ಲಿ ಅನುದಾನದಲ್ಲಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಮುಂದಿಟ್ಟಿತ್ತು. ಅದರೆ ಅದು ನನೆಗುದಿಗೆ ಬಿದ್ದಿದೆ.

    ರೈಲ್ವೇ ಆಸ್ತಿಯಾಗಿರುವ ಹಾರಾಡಿ ರಸ್ತೆಯ ದುರಸ್ತಿಗೆ ನಗರಸಭೆ ಹಣ ನೀಡಲು ಸಾಧ್ಯವಿಲ್ಲ. ರಸ್ತೆಯನ್ನು ನಗರಸಭೆಗೆ ಹಸ್ತಾಂತರಿಸಿದರೆ ಶೇ.100 ಅನುದಾನ ಹಾಕಿ ದುರಸ್ತಿ ಮಾಡಲಿದೆ ಎನ್ನುವುದು ನಗರಸಭೆಯ ವಾದ. ರಸ್ತೆ ಪೂರ್ಣವಾಗಿ ಹಸ್ತಾಂತರ ಅಸಾಧ್ಯ. ದುರಸ್ತಿ ಕಾರ್ಯಕ್ಕಾಗಿ ತಾತ್ಕಾಲಿಕವಾಗಿ ಬಿಟ್ಟು ಕೊಡಬಹುದು. ಅದಕ್ಕೆ ಜಿಲ್ಲಾಧಿಕಾರಿಗಳು ಪತ್ರ ಬರೆಯಬೇಕಾಗುತ್ತದೆ. ನಿಗದಿತ ಮೊತ್ತದ ಬಗ್ಗೆ ಖಾತರಿ ನೀಡಬೇಕಾಗುತ್ತದೆ. ರೈಲ್ವೇ ಆಸ್ತಿಯನ್ನು ಶಾಶ್ವತವಾಗಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎನ್ನುವುದು ರೈಲ್ವೇ ವಾದ. ಈ ಇಬ್ಬರ ಜಗಳದಲ್ಲಿ ಸಂಪರ್ಕ ರಸ್ತೆ ಸಂಚಾರಕ್ಕೆ ಅಸಾಧ್ಯವಾಗಿರುವ ಸ್ಥಿತಿಗೆ ತಲುಪಿದೆ.

    ಈ ಸಂಪರ್ಕ ರಸ್ತೆಯಲ್ಲಿ ವಾಹನ ಮಾತ್ರವಲ್ಲ, ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಮೀಟರ್‌ಗೊಂದರಂತೆ ಹೊಂಡ ಸೃಷ್ಟಿಯಾಗಿದ್ದು ಮಳೆ ಬಂದರೆ ತೋಡಿನ ಸ್ಥಿತಿ ಉಂಟಾಗುತ್ತದೆ. ಇಷ್ಟಾದರೂ ಅನುದಾನ ಹಂಚಿಕೆ ವಿಚಾರದಲ್ಲಿ ರೈಲ್ವೇ ಮತ್ತು ಸ್ಥಳೀಯಾಡಳಿತ ಮಧ್ಯೆ ಜಟಾಪಟಿ ನಡೆಯುತ್ತಿದೆ. ಲಭ್ಯ ಮಾಹಿತಿ ಪ್ರಕಾರ 1990-95ರ ಅವಧಿಯಲ್ಲಿ ಆಗಿನ ಪುರಸಭೆಯೇ ಈ ರಸ್ತೆಯ ದುರಸ್ತಿ ಮಾಡಿತ್ತು. ಆಗಲೂ ರೈಲ್ವೇ ಕೇವಲ ದುರಸ್ತಿಗಾಗಿ ತಾತ್ಕಾಲಿಕ ನೆಲೆಯಲ್ಲಿ ಪುರಸಭೆಗೆ ಅನುಮತಿ ನೀಡಿತ್ತು. ಅನಂತರ ಅಭಿವೃದ್ಧಿ ಕಂಡೇ ಇಲ್ಲ.

    ಈಗಾಗಲೇ ದಾನಿಗಳ ಸಹಕಾರ ಪಡೆದು ಮಣ್ಣು ಹಾಕುವ ಕಾರ್ಯ ಆಗಿದೆ. ಒಂದು ಕಡೆ ಭೂ ಸ್ವಾಧೀನ ಬಾಕಿ ಇದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗವುದು. -ಜೀವಂಧರ್‌ ಜೈನ್‌, ಅಧ್ಯಕ್ಷ, ನಗರಸಭೆ ಪುತ್ತೂರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss