Friday, April 19, 2024
spot_img
More

    Latest Posts

    ಮಕ್ಕಳು ವಿದ್ಯೆಯೊಂದಿಗೆ ವಿನಯ, ಔದಾರ್ಯ, ಬೆಳೆಸಿಕೊಳ್ಳಬೇಕು- ತು.ರ.ವೇ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು

    ಮಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ತಿಳುವಳಿಕೆಗಾಗಿ ಹಳೆಯ ಸಾಮಾಗ್ರಿಗಳ ಪ್ರಾತ್ಯಕ್ಷಿಕೆ ಹಾಗೂ ಪುಸ್ತಕ ವಿತರಣಾ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಕರ್ನಕಟ್ಟೆಯಲ್ಲಿ ನಡೆಯಿತು.


    ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತು.ರ.ವೇ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ಮಾತನಾಡಿ, ಮಕ್ಕಳು ವಿದ್ಯೆಯೊಂದಿಗೆ ವಿನಯ, ಔದಾರ್ಯ, ಬೆಳೆಸಿಕೊಳ್ಳಬೇಕು.ನಮ್ಮ ಗುರುಗಳು,ಹೆತ್ತವರು ನಾವು ಸಮಾಜದಲ್ಲಿಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಹಲವಾರು ತ್ಯಾಗಗಳನ್ನು ಪರಿಶ್ರಮವನ್ನು ಮಾಡುತ್ತಾರೆ. ಆದರೆ ಈಗಿನ ಕಾಲಘಟ್ಟದಲ್ಲಿ ನಾವು ನಮ್ಮ ಗುರುಗಳು ಮತ್ತು ಹೆತ್ತವರ ತ್ಯಾಗವನ್ನು ಮರೆತು ಸ್ವಾರ್ಥ ಬದುಕಿಗೆ ನಮ್ಮನ್ನು ನಾವು ಒಡ್ಡಿ,ಉಪಕಾರ ಸ್ಮರಣೆಯನ್ನು ಮರೆಯುತ್ತೇವೆ. ಆದುದರಿಂದ ನಾವು ನಮಗಾಗಿ ಪ್ರೀತಿ ಹಾಗೂ ತ್ಯಾಗ ಮಾಡಿದವರನ್ನು ನಮ್ಮ ಜೀವನದ ಕೊನೆಯ ಕ್ಷಣದವರೆಗೂ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯ…
    ಕೆಲವು ವರ್ಷಗಳ ಹಿಂದೆ ಈ ಶಾಲೆಯಲ್ಲಿ 59 ಮಕ್ಕಳು ಇದ್ದು ಇದೀಗ 240 ಮಕ್ಕಳನ್ನು ಹೊಂದಿದ್ದು, ಈ ಉತ್ತಮ ಬೆಳವಣಿಗಗೆ ಕಾರಣಕರ್ತರಾದ ಮುಖ್ಯೋಪಾದ್ಯಾಯರು ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಕೊಡುಗೆ ಶ್ಲಾಘನೀಯ ಎಂದರು.

    ವೇದಿಕೆಯಲ್ಲಿ ಯಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಜಯಲತಾ ಅಮೀನ್ ,ರಮೇಶ್ ಕಂಡೆಟ್ಟು ಮನಪಾ ನಾಮ ನಿರ್ದೇಶಿತ ಸದಸ್ಯರು, ಹಳೆ ಸಾಮಾಗ್ರಿಗಳ ಸಂಗ್ರಹ ಕಾರ ಶೇಕ್ ರಾಯಲ್ , ಸಂಜಯ್ ಮಹಾಲೆ ಕುಡ್ಲ ಸಲೂನ್ ಮಾಲಕರು ಬಿಕರ್ನಕಟ್ಟೆ, ಮೋಹನ್ ಬಂಗೇರ ಉಪಾಧ್ಯಾಕ್ಷರು.ಶಾಲಾಭಿವೃದ್ಧಿ ಸಮಿತಿ.ಸ.ಹಿ.ಪ್ರಾ.ಶಾಲೆ ಬಿಕರ್ನಕಟ್ಟೆ ,ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅರುಂಧತಿ ಶೈಲಜಾ ಸುರೇಶ್,ಹಳೆ ವಿದ್ಯಾರ್ಥಿ ಹಾಗೂ ತುಳುನಾಡ ರಕ್ಷಣಾ ವೇದಿಕೆ ಬಿಕರ್ಣಕಟ್ಟೆ ಘಟಕ ಅಧ್ಯಕ್ಷ ನಾಗರಾಜ್ .ಕೆ , ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

    ಜಿಲ್ಲಾ ಉತ್ತಮ ಶಿಕ್ಷಕಿ ಪುರಸ್ಕೃತರು ,ಶಾಲಾ ಮುಖ್ಯೋಪಾಧ್ಯಾಯಿನಿ ರಾಜೀವಿ ಇವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
    ಮೀನಾಕ್ಷಿ ಕೆ. ನಿರೂಪಣೆಗೈದರು.ವೀಣಾ ಪ್ರಭು ಧನ್ಯವಾದ ಸಲ್ಲಿಸಿದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss