Monday, November 29, 2021

ಹೊಸ ಕೊರೋನಾ ರೂಪಾಂತರಿಗೆ ಒಮಿಕಾರ್ನ್ ಎಂದು ನಾಮಕರಣ: ಅಪಾಯಕಾರಿ ಎಂದ ಆರೋಗ್ಯ ಸಂಸ್ಥೆ

ದೆಹಲಿ: ಹೊಸ ಕೊರೋನಾ ರೂಪಾಂತರಿಗೆ ಒಮಿಕಾರ್ನ್ ಎಂದು ಹೆಸರು ಇಡಲಾಗಿದೆ. ಇದನ್ನು ಅಪಾಯಕಾರಿ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರ್ಗಿಕರಿಸಿದೆ. B.1.1.529 ರೂಪಾಂತರಿಗೆ ಒಮಿಕಾರ್ನ್ ಎಂದು ನಾಮಕರಣ...
More

    Latest Posts

    ಪಂಜ:ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ರಾಜಗೋಪುರಕ್ಕೆ ಭಗವಧ್ವಜ ಆಳವಡಿಕೆ

    ಸುಳ್ಯ: ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ ಇಲ್ಲಿನ ರಾಜಗೋಪುರಕ್ಕೆ ಸನಾತನ ಹಿಂದೂ ಧರ್ಮದ ಪ್ರತೀಕವಾದಂತಹ ಭಗವಾಧ್ವಜವನ್ನು ಹಾಗೂ ದೇವಳದ ಒಳಗೆ ಪ್ರವೇಶ ಮಾಡುವ ಭಕ್ತರ ತಿಳುವಳಿಕೆಗಾಗಿ,...

    ದಕ್ಷಿಣ ಕನ್ನಡ ಗಡಿಗಳಲ್ಲಿ ತಪಾಸಣೆ ತೀವ್ರ: ಇಂದಿನಿಂದ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

    ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಎಲ್ಲಾ ಗಡಿಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ಮೂರು ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಂದಿನಿಂದ ಆರ್...

    ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

    ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

    ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

    ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

    ಬೆಂಗಳೂರು: ಇಂದು ಅರಮನೆ ಮೈದಾನದಲ್ಲಿ ‘ಪುನೀತ್‌ ಗೀತ ನಮನ’ ಕಾರ್ಯಕ್ರಮ

    ಬೆಂಗಳೂರು : ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ್‌ ಗೀತ ನಮನ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟದ ಸಚಿವರು, ಕನ್ನಡ ಚಿತ್ರರಂಗದ 142 ಕಲಾವಿದರು, ಹೊರ ರಾಜ್ಯದ ಹಲವು ನಟ, ನಟಿಯರು, ಗಣ್ಯರು ಸೇರಿ ಸುಮಾರು 2000 ಜನ ಭಾಗವಹಿಸುವ ನಿರೀಕ್ಷೆ ಇದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ ಆರೂವರೆವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

    ಮಧ್ಯಾಹ್ನ ಗಣ್ಯರ ಆಗಮನದ ವೇಳೆಗೆ ಸ್ಯಾಕ್ಸೋಫೋನ್‌ ವಾದನ ನಡೆಯಲಿದೆ. ಬಳಿಕ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟಿನಿಂದ ಕೊನೆಯ ಕ್ಷಣದವರೆಗಿನ ದೃಶ್ಯಾವಳಿ ಪ್ರಸಾರವಾಗುತ್ತದೆ. ಬಳಿಕ ನಾಗೇಂದ್ರ ಪ್ರಸಾದ್‌ ಅವರು ಅಪ್ಪುಗಾಗಿ ರಚಿಸಿರುವ ‘ಮುತ್ತುರಾಜ ಹೆತ್ತ ಮುತ್ತು ಎತ್ತ ಹೋದೆಯೋ’ ಎಂಬ ಸಾಲುಗಳ ಗೀತೆಯ ಪ್ರಸಾರ. ಗಾಯಕ ವಿಜಯ ಪ್ರಕಾಶ್‌ ಅವರು ಈ ಹಾಡಿಗೆ ದನಿಯಾಗಿದ್ದಾರೆ. ಈ ವೇಳೆ ಗಣ್ಯರು ಎದ್ದುನಿಂತು ಕ್ಯಾಂಡಲ್‌ ಹಚ್ಚುತ್ತಾರೆ. ಆ ಬಳಿಕ ಗಣ್ಯರಿಂದ ಪುಷ್ಪಾಂಜಲಿ ನಡೆಯುತ್ತದೆ. ಪ್ರತಿ ನಾಲ್ಕು ಜನ ಗಣ್ಯರ ಪುಷ್ಪ ನಮನದ ಬಳಿಕ ಗುರುಕಿರಣ್‌ ಸಾರಥ್ಯದಲ್ಲಿ ಒಂದೊಂದು ಹಾಡಿನ ಗಾಯನ ನಡೆಯುತ್ತದೆ. ಸುಮಾರು 15ಕ್ಕೂ ಹೆಚ್ಚು ಹಾಡುಗಳ ಗಾಯನ ನಡೆಯಲಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸದಸ್ಯರು, ರಾಜ್‌ ಕುಟುಂಬಸ್ಥರು, ಹೊರರಾಜ್ಯದಿಂದ ಕಲಾವಿದರಾದ ಪ್ರಕಾಶ್‌ ರಾಜ್‌, ಶ್ರೀಕಾಂತ್‌, ನಾಗಾರ್ಜುನ, ಆಲಿ, ವಿಶಾಲ್‌, ವಿಶಾಲ್‌, ಶರತ್‌ ಕುಮಾರ್‌, ಪ್ರಭುದೇವ್‌ ಮೊದಲಾದವರು, ಅಲ್ಲಿನ ಫಿಲಂ ಚೇಂಬರ್‌ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಸ್ಯಾಂಡಲ್‌ವುಡ್‌ನಿಂದ ಸುದೀಪ್‌, ಗಣೇಶ್‌, ರಮೇಶ್‌ ಅರವಿಂದ್‌, ರಮ್ಯಾ, ಹಿರಿಯ ಕಲಾವಿದರಾದ ಭಾರತಿ, ಸುಮಲತಾ, ರಾಜವಂಶಸ್ಥ ಯದುವೀರ್‌, ಚಿತ್ರೋದ್ಯಮದ ಅಂಗ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ 2000 ಜನ ಪಾಲ್ಗೊಳ್ಳಲಿದ್ದಾರೆ.

    ಪಾಸ್‌ ಇಲ್ಲದೇ ಪ್ರವೇಶ ಇಲ್ಲ: ನಾಲ್ಕು ಕಡೆ ತಪಾಸಣೆ ನಡೆಯಲಿದ್ದು, ಪಾಸ್‌ ಇಲ್ಲದೇ ಯಾರಿಗೂ ಒಳಗೆ ಪ್ರವೇಶ ಇರುವುದಿಲ್ಲ ಎಂದು ಫಿಲಂ ಚೇಂಬರ್‌ ತಿಳಿಸಿದೆ. ವಿವಿಐಪಿಗಳಿಗೆ ಒಂದು ಗೇಟ್‌ ಹಾಗೂ ವಿಐಪಿಗಳಿಗೆ ಮತ್ತೊಂದು ಗೇಟ್‌ ಮೂಲಕ ಪ್ರವೇಶ ಇರುತ್ತದೆ. ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಪ್ರವೇಶ ಇಲ್ಲ. ವಿವಿಧ ಚಾನಲ್‌ಗಳಲ್ಲಿ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ನಡೆಯಲಿದೆ. ಕಾರ್ಯಕ್ರಮದ ಬಳಿಕ ವಿವಿಐಪಿಗಳಿಗೆ ಪಕ್ಕದ ಎ.ಸಿ. ಹಾಲ್‌ನಲ್ಲಿ ಹಾಗೂ ಇತರರಿಗೆ ಹೊರಭಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಹೊರ ಭಾಗದಲ್ಲಿ ಹತ್ತು ಕೌಂಟರ್‌ಗಳ ವ್ಯವಸ್ಥೆ ಇರಲಿದೆ.

    Latest Posts

    ಪಂಜ:ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ರಾಜಗೋಪುರಕ್ಕೆ ಭಗವಧ್ವಜ ಆಳವಡಿಕೆ

    ಸುಳ್ಯ: ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ ಇಲ್ಲಿನ ರಾಜಗೋಪುರಕ್ಕೆ ಸನಾತನ ಹಿಂದೂ ಧರ್ಮದ ಪ್ರತೀಕವಾದಂತಹ ಭಗವಾಧ್ವಜವನ್ನು ಹಾಗೂ ದೇವಳದ ಒಳಗೆ ಪ್ರವೇಶ ಮಾಡುವ ಭಕ್ತರ ತಿಳುವಳಿಕೆಗಾಗಿ,...

    ದಕ್ಷಿಣ ಕನ್ನಡ ಗಡಿಗಳಲ್ಲಿ ತಪಾಸಣೆ ತೀವ್ರ: ಇಂದಿನಿಂದ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

    ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಎಲ್ಲಾ ಗಡಿಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ಮೂರು ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಂದಿನಿಂದ ಆರ್...

    ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

    ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

    ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

    ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

    Don't Miss

    ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿ ನಾಪತ್ತೆ- ದೂರು ದಾಖಲು !

    ಬೆಳ್ತಂಗಡಿ: ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿದ್ದ ವಿದ್ಯಾರ್ಥಿ ನಿಯೋರ್ವರು ನ.24 ರಂದು ನಾಪತ್ತೆಯಾಗಿದ್ದಾರೆ. ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ...

    ಮಂಗಳೂರು: ವೈದ್ಯನೊಬ್ಬನ ರಾಸಲೀಲೆ ಪ್ರಕರಣ- ವೈದ್ಯಕೀಯ ಅಧೀಕ್ಷಕರ ಸ್ಪಷ್ಟನೆ

    ಮಂಗಳೂರು: ಮಂಗಳೂರು ನಗರದಲ್ಲಿ ವೈದ್ಯನೊಬ್ಬನ ರಾಸಲೀಲೆ ಇಂದು ಬಯಲಾಗಿದೆ. ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯನೊಬ್ಬ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ...

    ರಷ್ಯಾದಲ್ಲಿ ಕಲ್ಲಿದ್ದಲು ಗಣಿ ದುರಂತ: 52 ಮಂದಿ ದಾರುಣ ಸಾವು

    ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈ ಐದು ವರ್ಷಗಳಲ್ಲಿ ನಡೆದ ಅತಿ ದೊಡ್ಡ ಗಣಿ...

    SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

    ಬೆಂಗಳೂರು (ನ. 26): ಎಸ್‌ಎಸ್‌ಎಲ್‌ಸಿ (SSLC Students ) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.  ಕೊರೋನಾದಿಂದ ಪ್ರಸಕ್ತ...

    BIG BREAKING: ದಕ್ಷಿಣ ಕನ್ನಡ ಸರಕಾರಿ ವೈದ್ಯನ ರಾಸಲೀಲೆ; ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳ ಜೊತೆ ರಂಗಿನಾಟ!

    ಮಂಗಳೂರು: ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜೊತೆ ಸರಸ ಸಲ್ಲಾಪವಾಡುತ್ತಿದ್ದ ಮಂಗಳೂರಿನ ಪ್ರತಿಷ್ಠಿತ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಅವರ ಕಾಮಪುರಾಣ ಬಯಲಾಗಿದೆ. ಈ ದೃಶ್ಯಗಳು ಸಾಮಾಜಿಕ...