ಕುಂಬ್ಳೆ ರಾಜರಾಜೇಶ್ವರಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಶಬ್ರಿ ಇಂಡಸ್ಟ್ರಿಯಲ್ ಕೇಟರಿಂಗ್ ಅಹಮದ್ ನಗರ, ಮುಂಬೈ ಇದರ ಅಧ್ಯಕ್ಷರಾದ ಶ್ರೀ ಕೆ ಕೆ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣಕ್ಕೆ ಭೇಟಿ ನೀಡಿ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿಯವರ ಸಹಕಾರದಿಂದ ನಡೆದಿರುವ ಒಕ್ಕೂಟದ ಕಾರ್ಯಕ್ರಮಗಳಿಗೆ ಸಂತೋಷ ವ್ಯಕ್ತ ಪಡಿಸಿದರು.ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ನಿರಂತರ ಶ್ರಮ ಸಮಾಜಕ್ಕೆ ಮಾಡಿದ ತ್ಯಾಗ ಪರಿಶ್ರಮ ತನ್ನ ಸ್ವಂತ ಉದ್ಯೋಗವನ್ನು ಬದಿಗಿರಿಸಿ ಸಮಾಜಕ್ಕಾಗಿ ಸಮರ್ಪಿಸಿದ್ದು ಒಂದು ಮಾದರಿ, ಏನೂ ಇಲ್ಲದ ಒಕ್ಕೂಟವನ್ನು ಒಂದು ಸಂಪತ್ ಭರಿತ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ ಅವಿರತ ದುಡಿದ ಐಕಳ ಹರೀಶ್ ಶೆಟ್ಟಿಯವರು ತನ್ನ ಜೊತೆಯಲ್ಲಿ ಇರುವ ಎಲ್ಲರನ್ನೂ ಗೌರವಿಸಿ ಮುನ್ನಡೆಯುತ್ತಿರುವ ಸಂಗತಿ ಶ್ಲಾಘನೀಯ, ಕನ್ಯಾನ ಸದಾಶಿವ ಶೆಟ್ಟಿಯವರಂತ ದಾನಿಗಳು ನಿಜವಾದ ಜಾಗಕ್ಕೆ ದಾನ ನೀಡಿದ್ದಾರೆ, ನಾನು ನಿಮ್ಮ ಜೊತೆ ಸದಾ ಇರುತ್ತೇನೆ. ನಿಮಗೆ ನನ್ನ ಸಹಕಾರ ಯಾವಾಗಲು ಇದೆ ಎಂದು ಭರವಸೆ ನೀಡಿದರು.
ಐಕಳ ಹರೀಶ್ ಶೆಟ್ಟಿಯವರು ಮಾಡುವ ಒಳ್ಳೆ ಕೆಲಸದಿಂದ ನನಗೆ ಅವರ ಮೇಲೆ ಅಪಾರ ಪ್ರೀತಿ ಬಡ ಜನರು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡುವ ಕೆಲಸ ಅದ್ಭುತ, ತನ್ನೆಲ್ಲಾ ಕೆಲಸ ಬದಿಗಿರಿಸಿ ಸಮಾಜಕ್ಕಾಗಿ ಕೆಲಸ ಮಾಡುವುದು ನಿಜವಾಗಿಯೂ ಎಲ್ಲರಿಂದ ಸಾಧ್ಯ ಇಲ್ಲ ಅದು ಐಕಳ ಹರೀಶ್ ಶೆಟ್ಟಿ ಒಬ್ಬರಿಗೆ ಸಾಧ್ಯ. ಅವರಲ್ಲಿ ಒಂದು ಅಘಾದ ಶಕ್ತಿ ಇದೆ ಒಂದು ಒಳ್ಳೆ ಕೆಲಸ ಆಗಬೇಕು ಅಂದರೆ ಬಿಡದೆ ಸಾಧಿಸಿ ತೋಸುತ್ತಾರೆ, ಅಷ್ಟು ಶಕ್ತಿ ಅವರಿಗೆ ಮಹಾಮಾತೆ ದುರ್ಗಾ ಪರಮೇಶ್ವರಿ ನೀಡಿದ್ದಾರೆ. ಸಮುದಾಯವನ್ನು ಕಷ್ಟದಿಂದ ಪಾರುಮಾಡಲು ಸದಾ ದುಡಿಯುವ ಐಕಳ ಅವರ ಜೊತೆ ನಾನು ಯಾವಾಗಲೂ ಇದ್ದೇನೆ, ಎಲ್ಲಾ ಸಮಾಜಕ್ಕೆ ಸಹಾಯ ಮಾಡುವ ಜೊತೆ ಬಂಟ ಸಮುದಾಯ ಬಡವರ ಏಳಿಗೆಗಾಗಿ ಶ್ರಮಿಸುವ ಕಾಯಕ ಅತ್ಯಂತ ಶ್ರೇಷ್ಠ ವಾಗಿದೆ.ಈಗ ಬಂಟ ಸಮುದಾಯದ ಕೆಲಸ ಮಾಡುವ ಸಂಸ್ಥೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದು ಎಲ್ಲಾ ಬಂಟರ ಸಂಘಗಳಿಗೆ ನಾಯಕ ಸ್ಥಾನ ನೀಡಿದೆ, ಈ ಒಕ್ಕೂಟಕ್ಕೆ ಏನೂ ಇಲ್ಲದ ಸಂದರ್ಭದಲ್ಲಿ ಅಧ್ಯಕ್ಷರಾಗಿ ಬಂದ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟವನ್ನು ಇಂದು ಬಹು ಕೋಟಿ ಮೌಲ್ಯದ ಸಂಸ್ಥೆಯನ್ನಾಗಿ ಬೆಳೆಸಿದ್ದು ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೆ ಆಶಾ ಕಿರಣ ವಾಗಿದ್ದರೆ ಎಂದು ಒಕ್ಕೂಟದ ಮಹಾ ದಾನಿ ಕನ್ಯಾನ ಸದಾಶಿವ ಶೆಟ್ಟಿಯವರು ಹೇಳಿದರು. ಶ್ರೀ ಕೆ. ಕೆ. ಶೆಟ್ಟಿಯವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ,ಕಾಸರಗೋಡು ಬಂಟರ ಸಂಘದ ಅಧ್ಯಕ್ಷ ಶ್ರೀ ಸುಬ್ಬಯ್ಯ ಶೆಟ್ಟಿ,ನಿವೃತ್ತ ವಿಜಯಾ ಬ್ಯಾಂಕ್ ಮಾಜಿ ಅಧಿಕಾರಿ ಶ್ರೀ ಅಜಿತ್ ಶೆಟ್ಟಿ, ಆರ್ಕಿಟೆಕ್ಟ್ ಶ್ರೀ ಜೀವನ್ ಶೆಟ್ಟಿ ಮುಲ್ಕಿ,ನಿತಿನ್ ಎಂಟರ್ಪ್ರೈಸಸ್ ನ ಶ್ರೀ ನಿತಿನ್ ಶೆಟ್ಟಿ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಶ್ರೀ ಜಯರಾಮ ಶೆಟ್ಟಿ, ಒಕ್ಕೂಟದ ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ದೆ ಕೊಳ್ಕೆಬೈಲ್,ಶ್ರೀ ರವಿರಾಜ್ ಶೆಟ್ಟಿ ಜತ್ತಬೆಟ್ಟು, ಶ್ರೀ ಹಮೀದ್ ಅತ್ತೂರು, ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
