Monday, November 28, 2022

ಉಡುಪಿ: ಕೆಲಸದ ಮನೆಯ ಚಿನ್ನ ಕದ್ದ ಹೋಮ್ ನರ್ಸ್ ಅಂದರ್

ಹಿರಿಯಡ್ಕ: ವೃದ್ಧ ಮಹಿಳೆಯ ಆರೈಕೆಗೆಂದು ಬಂದ ಹೋಮ್ ನರ್ಸ್ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿದ್ದಳು.ಇದೀಗ ಪೊಲೀಸರು...
More

    Latest Posts

    ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನೂತನ ಗೋಪುರಕ್ಕೆ ಶಿಲಾನ್ಯಾಸ

    ಮೂಡುಬಿದಿರೆ: ಶ್ರೀ ಆದಿಬ್ರಹ್ಮ ದೇವಸ್ಥಾನ ಶ್ರೀ ಕ್ಷೇತ್ರ ಬನ್ನಡ್ಕ ಪಡುಮಾರ್ನಾಡು ಇಲ್ಲಿ  ನೂತನ ಗೋಪುರದ ಶಿಲಾನ್ಯಾಸ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

    ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

    ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

    ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

    ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

    ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

    ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

    BIGG NEWS : ಮುಂದಿನ ಆದೇಶದವರೆಗೂ ‘PSI’ ಮರುಪರೀಕ್ಷೆಯ ದಿನಾಂಕ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ

    ಬೆಂಗಳೂರು : 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ (PSI Recruitment Scam) ನಡೆದಿದ್ದು, ಈ ಹಿನ್ನೆಲೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

    ಮುಂದಿನ ಆದೇಶದವರೆಗೆ 545 ಪಿಎಸ್‌ಐ ಮರುಪರೀಕ್ಷೆ ದಿನಾಂಕ ಪ್ರಕಟಿಸಬಾರದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

    ಮರುಪರೀಕ್ಷೆ ರದ್ದು ಕೋರಿ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಕೋರ್ಟ್ ಆದೇಶ ಹೊರಡಿಸಿದೆ.

    ಕರ್ನಾಟಕ ಪೊಲೀಸ್ ಇಲಾಖೆಯು 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆ, ಆರೋಪಿಗಳ ಮೇಲೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ದಿನೇ ದಿನೇ ಅಕ್ರಮದಲ್ಲಿ ಪಾಲ್ಗೊಂಡವರ ಸಂಖ್ಯೆ ಹೆಚ್ಚಾಗೆ ಸಿಐಡಿ ತನಿಖೆಯಿಂದ ಹೊರಬೀಳುತ್ತಿದೆ.

    ಈ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಮರುಪರೀಕ್ಷೆಗೆ ದಿನಾಂಕವನ್ನು ಶೀಘ್ರದಲ್ಲೇ ನಿಗದಿಮಾಡಿ, ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಮರು ಪರೀಕ್ಷೆಯಲ್ಲಿ ಈ ಹಿಂದೆ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಿದ್ದು, ಆಪಾಧಿತರಿಗೆ ಈ ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಬೆಂಗಳೂರಿನ ಕೆಲವು ಸೆಂಟರ್‌ಗಳಲ್ಲೂ ಈ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವರು ಸುದ್ದಿಗೋಷ್ಠಿಯಲ್ಲಿಹೇಳಿದ್ದರು.

    ಕರ್ನಾಟಕದಲ್ಲಿ ಪಿಎಸ್​ಐ ಹುದ್ದೆಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. ಈ ಹಿಂದೆ ನಡೆದಿದ್ದ ಪಿಎಸ್‌ಐ ಪರೀಕ್ಷೆ ಫಲಿತಾಂಶವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಬೆಂಗಳೂರಿನ ಕೇಂದ್ರದಲ್ಲೂ ಅಕ್ರಮದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ನಿರ್ಧರಿಸಲಾಗಿದೆ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಲಾಗುವುದು.. ಶೀಘ್ರವೇ ಮರು ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ ಎಂದು ಹೇಳಿದ್ದರು.ಆದರೀಗ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ (PSI Recruitment Scam) ನಡೆದ ಹಿನ್ನೆಲೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

    Latest Posts

    ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನೂತನ ಗೋಪುರಕ್ಕೆ ಶಿಲಾನ್ಯಾಸ

    ಮೂಡುಬಿದಿರೆ: ಶ್ರೀ ಆದಿಬ್ರಹ್ಮ ದೇವಸ್ಥಾನ ಶ್ರೀ ಕ್ಷೇತ್ರ ಬನ್ನಡ್ಕ ಪಡುಮಾರ್ನಾಡು ಇಲ್ಲಿ  ನೂತನ ಗೋಪುರದ ಶಿಲಾನ್ಯಾಸ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

    ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

    ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

    ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

    ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

    ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

    ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

    Don't Miss

    ವಿದ್ಯಾಭರಣ್ ಜೊತೆ ನಿಶ್ಚಿತಾರ್ಥ: ಮೊದಲಿಗೇ ಗೊತ್ತಾಗಿದ್ದು ಒಳ್ಳೆಯದಾಯ್ತು..ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗ್ತಿತ್ತು: ನಟಿ ವೈಷ್ಣವಿ ಗೌಡ

    ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ, ಕನ್ನಡ ಕಿರುತೆರೆಯ ನಟಿ ವೈಷ್ಣವಿ ಗೌಡ ನಿಶ್ಟಿತಾರ್ಥ ಇದೀಗ ವಿವಾದಕ್ಕೆ ಕಾರಣವಾಗಿದ್ದು, ನಿಶ್ಟಿತಾರ್ಥದ ಪೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ವೈಷ್ಣವಿ ನಿಶ್ಟಿತಾರ್ಥ...

    ಚಾರ್ಮಾಡಿ : ಆಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿ

    ಚಿಕ್ಕಮಗಳೂರು: ಅಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ...

    ಡಿ.2 ರಂದು ತುಳುವಿನಲ್ಲಿ ಕಾಂತಾರ ಬಿಡುಗಡೆ

    ಬೆಂಗಳೂರು: ಕೊನೆಗೂ ತುಳು ಭಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಡಿಸೆಂಬರ್ 2 ರಂದು ತುಳು ಬಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾಗಲಿದೆ. ಕಾಂತಾರ ಇದೀಗ ಬಿಡುಗಡೆಯಾದ...

    ಮದುವೆಗೆ ಒಪ್ಪದ ಮಗಳನ್ನೇ ಕತ್ತು ಸೀಳಿ ಕೊಂದ ತಾಯಿ!

    ಕುಟುಂಬದವರು ನೋಡಿದ ಹುಡುಗನನ್ನು ಮದುವೆ ಆಗಲು ಒಪ್ಪಲಿಲ್ಲ ಅಂತ 20 ವರ್ಷದ ಮಗಳನ್ನೇ ತಾಯಿ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಉಡುಪಿ: ರೋಸ್ ಸಮಾರಂಭದಲ್ಲಿ ಯುವತಿ ಕುಸಿದು ಬಿದ್ದು ಸಾವು

    ಉಡುಪಿ: ಕ್ರಿಶ್ಚಿಯನ್ನರ ಮನೆಯಲ್ಲಿ ನಡೆಯುವ ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿಯೊಬ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಹಾವಂಜೆ...