ಮಂಗಳೂರು: ಮಂಗಳೂರಿನ ಬಸ್‌ಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದನ್ನು ಆಕ್ಷೇಪಿಸಿ ತುಳು ಭಾಷಾ ಸಂರಕ್ಷಣಾ ಸಮಿತಿ ಕುಡ್ಲ ವತಿಯಿಂದ ಇಂದು ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ತೌಳವ ನಾಡಿನಲ್ಲಿ ತುಳು ಭಾಷೆಯ ಮೇಲೆ ಕನ್ನಡದ ಸವಾರಿ, ಕನ್ನಡ ಕಡ್ಡಾಯದಿಂದ ತುಳುವಿಗೆ ಅನ್ಯಾಯ, ತುಳು ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂಬಿತ್ಯಾದಿ ಘೋಷಣೆ ಕೂಗಿದರು.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಆದರೆ ತುಳು ನಮಗೆ ಅಗತ್ಯ. ತುಳು ಭಾಷೆ ನಮ್ಮ ಮಾತೃ ಭಾಷೆ ಅದಕ್ಕೆ ಪ್ರಾಮುಖ್ಯತೆ ನೀಡ ಬೇಕು ಇತ್ಯಾದಿ ಭಿತ್ತಿ ಪತ್ರ ಹಿಡಿದು ಪ್ರತಿಭಟಿಸಿದರು. ಇದು ಒಂದು ಪ್ರದೇಶದ ಭಾಷೆ. ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಸಿಗುವ ಯೋಗ್ಯತೆ ಇರುವ ಭಾಷೆ. 8 ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳ್ಳುವ ಮೊದಲು ಇದನ್ನು ರಾಜ್ಯಭಾಷೆ ಎಂಬುದಾಗಿ ಘೋಷಿಸಬೇಕೆಂದು ಒತ್ತಾಯಿಸಿದರು. ಬಳಿಕ ಸಮಿತಿಯ ಕಾರ್ಯಕರ್ತರು ತುಳು ಲಿಪಿಗೆ ಸಂಬಂಧಿಸಿದ ಕರ ಪತ್ರಗಳನ್ನು ಸಿಟಿ ಬಸ್‌ಗಳಿಗೆ ಅಂಟಿಸಿದರು. ಈ ಸಂದರ್ಭಗಳಲ್ಲಿ ರೋಶನ್ ರೊನಾಲ್ಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
