ಉಡುಪಿ: ರೈಲಿನಿಂದ ಇಳಿಯುತಿದ್ದ ಸಂದರ್ಭ ಆಯತಪ್ಪಿ ಬಿದ್ದು ರೈಲಿನೊಂದಿಗೆ ಎಳೆದೊಯ್ದ ವ್ಯಕ್ತಿಯನ್ನು ರೈಲ್ವೇ ನಿಲ್ದಾಣದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಉಡುಪಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಪೆರ್ಡೂರು ಮೂಲದ ಕುತಿ ಕುಂದನ್ ಎಂದು ಗುರುತಿಸಲಾಗಿದೆ.
ಕುತಿ ಕುಂದನ್ ತಮ್ಮ ಮಗಳನ್ನು ಟ್ರೈನ್ ಹತ್ತಿಸುವ ಸಲುವಾಗಿ ಉಡುಪಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದರು. ಮಗಳನ್ನು ರೈಲಿನಲ್ಲಿ ಕುಳ್ಳಿರಿಸಿ ಚಲಿಸುವ ರೈಲಿನಿಂದ ಇಳಿಯುವ ವೇಳೆ ಆಯತಪ್ಪಿ ಬಿದ್ದಿದ್ದು ರೈಲಿನ ಬಾಗಿಲಿನ ಹ್ಯಾಂಡಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ರೈಲಿನೊಂದಿಗೆ ಎಳೆದೊಯ್ಯಲ್ಪಡುತಿದ್ದರು. ಇದನ್ನು ಗಮನಿಸಿದ ರೈಲ್ವೆ ಪೋಲಿಸ್ ಸಿಬ್ಬಂದಿ ಸಜೀರ್ ತಕ್ಷಣವೇ ಬಂದು ಅವರನ್ನು ಅಲ್ಲಿಂದ ಪಾರು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಕುಟುಂಬಸ್ಥರೊಂದಿಗೆ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

