ರೈತನೊಬ್ಬ ತಾನು ಬೆಳೆದ ಬೆಳೆಗಳ ರಕ್ಷಣೆಗೆ ಹೊಸ ಪ್ಲಾನ್ ಒಂದನ್ನು ಮಾಡಿದ್ದು, ಈತನ ಪ್ಲಾನ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.ಉತ್ತರ ಪ್ರದೇಶದ ರೈತನೊಬ್ಬ ತಾನು ಬೆಳೆದ ಬೆಳೆಗಳ ರಕ್ಷಣೆಗೆ ಹೊಸ ಪ್ಲಾನ್ ಒಂದನ್ನು ಮಾಡಿದ್ದು, ಈತನ ಪ್ಲಾನ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
ಲಖೀಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತ ಗಜೇಂದ್ರ ಸಿಂಗ್ ಹೊಲದಲ್ಲಿ ಕರಡಿ ವೇಷ ತೊಟ್ಟು ಕುಳಿತ ರೈತ. ಗ್ರಾಮದಲ್ಲಿ ಪ್ರತೀ ದಿನ ಸುಮಾರು 40-45 ಮಂಗಗಳು ಬೆಳೆಯನ್ನು ಹಾನಿಗೊಳಿಸುತ್ತಿವೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ ಗಮನಹರಿಸಿಲ್ಲ ಎಂದು ರೈತ ಆರೋಪಿಸಿರುವ ಬಗ್ಗೆ ವರದಿಯಾಗಿದೆ.
ಮಂಗಗಳು ಬೆಳೆಗಳಿಗೆ ಹಾನಿ ಮಾಡುವುದನ್ನು ತಡೆಯಲು 4,000 ರೂ.ಗಳಿಗೆ ಈ ವೇಷಭೂಷಣವನ್ನು ಖರೀದಿಸಿದ್ದೇನೆ ಎಂದು ಗಜೇಂದ್ರ ಹೇಳಿಕೊಂಡಿದ್ದಾರೆ. ರೈತ ಹೊಲದಲ್ಲಿ ಕರಡಿ ವೇಷ ತೊಟ್ಟು ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.