ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಕಳೆದ 13 ವರ್ಷಗಳಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನೊಳಗೊಂಡು ಸಾಂಸ್ಕೃತಿಕ ಕಾರ್ಯಕ್ರಮ,ರಕ್ತದಾನ ಶಿಬಿರ,ನಿರಾಶ್ರಿತರಿಗೆ ಅನ್ನದಾನ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಹಲವಾರು ಜನಪರ ಹೋರಾಟಗಳನ್ನು ಮಾಡುತ್ತಾ ಬಂದಿದೆ.


ಅದೇ ರೀತಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪ್ರತಿ ವರ್ಷ ಮುದ್ದು ಕೃಷ್ಣ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು,ಈ ವರ್ಷದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಅನ್ಲೈನ್ ಫೋಟೋ ಸ್ಪರ್ಧೆ ಹಾಗೂ ಗಣೇಶೋತ್ಸವದ ಅಂಗವಾಗಿ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ನಾಲ್ವರು ಪುಟಾಣಿಗಳು ಹಾಗೂ ಆ.28 ರಂದು ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಮೂವರು ಮಕ್ಕಳು ವಿಜೇತರಾಗಿ ಆಯ್ಕೆಯಾಗಿದ್ದಾರೆ.
ಕ್ರಮವಾಗಿ ಮುದ್ದು ಕೃಷ್ಣದಲ್ಲಿ ಆರ್ವಿ ಎಂ.ಆಚಾರ್ಯ- ಪ್ರಥಮ,ಸಾಯನ್ ಪಿ.ಸುವರ್ಣ- ದ್ವಿತೀಯ,ಚಾಯಾಂಕ್ ದೀರಜ್ ತೃತೀಯ,ಆಸ್ತ ಮಂಗಳೂರು- ಚತುರ್ಥ ಎಂಬಂತೆ ನಾಲ್ಕು ಬಹುಮಾನಗಳನ್ನು ನೀಡಲಾಯಿತು.
ಅದೇ ರೀತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ 73 ಮಕ್ಕಳಿಗೂ ಪ್ರಸಂಶನಾ ಪತ್ರ ನೀಡಿಲಾಯಿತು.
ಇನ್ನು ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 33 ಸ್ಪರ್ಧಿಗಳು ಭಾಗವಹಿಸಿದ್ದು,ಇದರಲ್ಲಿ ರುತ್ವಾ ಹೆಚ್.ಪಿ,ಸ್ತುತಿ ಕಾರ್ಕಳ,ಪೂರ್ವಿಕ್ ಸಾಲ್ಯಾನ್ 3 ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಗಿದ್ದು, ಉಳಿದ 30 ಮಕ್ಕಳಿಗೆ ಪ್ರಸಂಶನಾ ಪತ್ರ ನೀಡಲಾಯಿತು.



ಈ ಕಾರ್ಯಕ್ರಮವು ತುಳು ಸಾಹಿತ್ಯ ಅಕಾಡೆಮಿ ಭವನ “ಸಿರಿ ಚಾವಡಿ”ಯಲ್ಲಿ ನಡೆದಿದ್ದು, ವಿಕಲ ಚೇತನರಾದ ವಿಜೇತ್ ರಾವ್ ಜೆಪ್ಪುರವರ ದಿವ್ಯ ಹಸ್ತದಿಂದ ಸ್ಪರ್ಧಾಳುಗಳಿಗೆ ಡ್ರಾಯಿಂಗ್ ಶೀಟುಗಳನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು. ಬಳಿಕ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಭಾ ಉದ್ಘಾಟನೆಯನ್ನು ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡೀಸ್ ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ಅದೇ ರೀತಿ ವೇದಿಕೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಮಂಗಳೂರು ನಗರ ಮಹಿಳಾ ಠಾಣೆ ಉಪ ನಿರೀಕ್ಷಕಾದ ಶ್ರೀಕಲಾ, ರಾಧಿಕಾ ಸಿ.ಹೆಚ್, ಜ್ಯೋತಿಕಾ ಜೈನ್, ವಿವೇಕಾನಂದ ರಾವ್, ಆಶಾ ಶೆಟ್ಟಿ ಅತ್ತಾವರ, ಗೀತಾ ಶೆಟ್ಟಿ ಪಡೀಲ್,ಚಿತ್ರ ನಿರ್ಮಾಪಕ ಮಹೇಂದ್ರ ಕುಮಾರ್, ಪ್ರಸಾದ್ ಕೊಂಚಾಡಿ, ಹರೀಶ್ ಶೆಟ್ಟಿ ಶಕ್ತಿನಗರ, ಪೇರಿ ಡಿ’ಸೋಜ, ಹರ್ಷಿತಾ, ಆಶೀಶ್ ಅಂಚನ್,ರೋಶನ್ ಡಿಸೋಜ,ಗೈಟನ್ ರೋಡ್ರಿಗಸ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಸಭಾ ಭವನ ನೀಡಿ ಸಹಕಾರಿಸಿರುತ್ತದೆ.




ಕಾರ್ಯಕ್ರಮ ಪ್ರಾಸ್ತಾವಿಕ ಭಾಷಣವನ್ನು ಪ್ರಶಾಂತ್ ಭಟ್ ಕಡಬ ನೆರವೇರಿಸಿರು.
ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ನಡೆದ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಸ್ಪರ್ಧೆಯಲ್ಲಿ ಸುಮಾರು 1ಲಕ್ಷದ 36 ಸಾವಿರ ಜನರು ಲೈಕ್ಸ್, ಶೇರ್,ಕಮೆಂಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ.









