ಮಂಗಳೂರು: ನಗರದ ಖಾಸಗಿ ಪ್ರೈವೆಟ್ ಲಿಮಿಟೆಡ್‍ನಲ್ಲಿ ಶಾಖಾ ಮ್ಯಾನೆಜರ್ ಆಗಿದ್ದ ವರ್ಗೀಸ್ ಓ.ಎಂ. (29ವರ್ಷ) ಮೇ.31 ರಿಂದ ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಇಂತಿದೆ: 5.7ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕನ್ನಡ, ತುಳು, ಹಿಂದಿ, ಇಂಗ್ಲೀಷ್, ಮಲಯಾಳಂ ಮಾತನಾಡುತ್ತಾರೆ, ನೀಲಿ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಈ ಚಹರೆಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಉಪ್ಪಿನಂಗಡಿ ಠಾಣೆ: 08251-251055, ಜಿಲ್ಲಾ ವಿಸ್ತಂತು ವಿಭಾಗ: 0824-2220500 ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
