Saturday, October 12, 2024
spot_img
More

    Latest Posts

    ಶಾಲೆಗೆ ತಡವಾಗಿ ಬಂದಿದ್ದಕ್ಕೆ ಮಹಿಳಾ ಶಿಕ್ಷಕಿಯನ್ನು ಶೂಗಳಿಂದ ಥಳಿಸಿದ ಪ್ರಾಂಶುಪಾಲರು

    ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಮಹಿಳಾ ಶಿಕ್ಷಕಿಯೊಬ್ಬರು ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಾಲೆಯ ಪ್ರಾಂಶುಪಾಲರು ಶೂಗಳಿಂದ ಶಿಕ್ಷಕಿಯನ್ನು ಥಳಿಸಿರುವ ಅಮಾನವೀಯ ಘಟನೆ ವರದಿಯಾಗಿದೆ. ಪ್ರಾಂಶುಪಾಲರು ಮಹಿಳಾ ಶಿಕ್ಷಕರಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಪ್ರಾಂಶುಪಾಲ ಅಜಿತ್ ವರ್ಮಾ ಎಂಬುವವರು ಮಹಿಳಾ ಶಿಕ್ಷಕಿಯನ್ನು ಥಳಿಸಿದ್ದಾರೆ. ಘಟನೆ ಸಂಬಂಧ ಶಿಕ್ಷಕಿ ಖೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಿನ್ಸಿಪಾಲ್ ಅಜಿತ್ ವರ್ಮಾ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ.

    ಎಎನ್‌ಐ ವರದಿಯ ಪ್ರಕಾರ, ವೈರಲ್ ವಿಡಿಯೊವನ್ನು ಆಧರಿಸಿ ಪುರುಷ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಲಕ್ಷ್ಮೀಕಾಂತ್ ಪಾಂಡೆ ಹೇಳಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss