ಬಿಹಾರ: ಪ್ರೀತಿ ಕುರುಡು ಎಂಬ ಮಾತಿದೆ. ಅದರಂತೆ ಬಿಹಾರದ ಸಮಸ್ತಿಪುರದಲ್ಲಿ ತರಗತಿಯಲ್ಲಿ ತನ್ನಿಂದ ಪಾಠ ಕೇಳಲು ಬಂದ ವಿದ್ಯಾರ್ಥಿನಿಯನ್ನೇ ಶಿಕ್ಷಕ ಪ್ರೀತಿಸಿ ಮದುವೆಯಾಗಿದ್ದಾರೆ. ಅಂದಹಾಗೆ ಇಬ್ಬರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 20 ವರ್ಷ. ಕಾಲೇಜು ಶಿಕ್ಷಕ 50 ವರ್ಷದ ಮಾತುಕನಾಥ್ ಮತ್ತು ವಿದ್ಯಾರ್ಥಿನಿ 20 ವರ್ಷದ ಜೂಲಿ ಮದುವೆಯಾದವರು. ಇಂಗ್ಲಿಷ್ ಕೋಚಿಂಗ್ ನೀಡುತ್ತಿದ್ದ ಮಾತುಕನಾಥ್ ಅವರಿಂದ ಜೂಲಿ ಕೋಚಿಂಗ್ ಪಡೆದುಕೊಳ್ಳುತ್ತಿದ್ದಳು. ತರಗತಿಯಲ್ಲೇ ಶಿಕ್ಷಕ ಮತ್ತು ವಿದ್ಯಾರ್ಥಿನಿ ನಡುವೆ ಪ್ರೇಮಾಂಕುರವಾಗಿದೆ. ಶಿಕ್ಷಕನ ಪತ್ನಿ ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದು, ಇದನ್ನು ಜೂಲಿ ಬಳಿಯೂ ಹೇಳಿದ್ದರು. ಬಳಿಕ ಆಕೆಗೆ ಮದುವೆ ಪ್ರಸ್ತಾಪ ಮಾಡಿದ್ದರು. ಶಿಕ್ಷಕನ ಮದುವೆ ಪ್ರಸ್ತಾಪಕ್ಕೆ ಜೂಲಿಯೂ ಒಪ್ಪಿಗೆ ನೀಡಿದ್ದಳು.ಈ ಹಿನ್ನೆಲೆಯಲ್ಲಿ ಡಿಸೆಂಬರ್ 8ರ ಗುರುವಾರ ದೇವಸ್ಥಾನವೊಂದರಲ್ಲಿ ಇಬ್ಬರು ಸಪ್ತಪದಿ ತುಳಿದಿದ್ದಾರೆ. ಇನ್ನು ವಿವಾಹಕ್ಕೂ ಮುನ್ನ ಶಿಕ್ಷಕ ಮತ್ತು ವಿದ್ಯಾರ್ಥಿನಿ ಪ್ರಣಯ ಪಕ್ಷಿಗಳಂತೆ ವಿವಿಧೆಡೆ ಸುತ್ತಾಡಿದ್ದು, ಮಾತುಕನಾಥನ್ ಅವರನ್ನು ಕೆಲವರು ಲವ್’ಗುರು’ ಎಂದೇ ಸಂಬೋಧಿಸುತ್ತಿದ್ದರು ಎನ್ನಲಾಗಿದೆ.
©2021 Tulunada Surya | Developed by CuriousLabs