Monday, December 4, 2023

ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತ ಲೋಕಾಯುಕ್ತ ಬಲೆಗೆ

ಕುಂದಾಪುರ : ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿ ಲೋಕಾಯಕ್ತ...
More

  Latest Posts

  ಬ್ರಹ್ಮಾವರ: ಮಹಿಳೆ ನಾಪತ್ತೆ

  ಬ್ರಹ್ಮಾವರ: ಇಲ್ಲಿನ ಉಪ್ಪಿನಕೋಟೆಯಲ್ಲಿ ವಾಸವಿದ್ದ ಲಲಿತಾ ಪೂಜಾರಿ (31) ಅವರು ನ. 30ರಿಂದ ನಾಪತ್ತೆಯಾಗಿದ್ದಾರೆ. ಬಳಿಕ ಮನೆಯ ಒಳಗಡೆ ಪರಿಶೀಲಿಸುವಾಗ ಚಿಕ್ಕ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ...

  ಹಾಸನ: 8 ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ

  ಮೈಸೂರು: ಜಿಲ್ಲೆಯ ಬಳ್ಳೆ ಆನೆ ಶಿಬರದಲ್ಲಿದ್ದಂತ ಸತತ 8 ಬಾರಿ ಮೈಸೂರಿನ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದಂತ ಅರ್ಜುನ (64) ಆನೆ ಒಂಟಿ ಸಲಗದ ದಾಳಿಯಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

  ‘ಭಾರತೀಯ ನೌಕಾಪಡೆ’ಯಲ್ಲಿ ವಿವಿಧ 275 ಹುದ್ದೆಗಳಿಗೆ ಅರ್ಜಿ ಆಹ್ವಾನ

  ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೌಕಾಪಡೆಯಲ್ಲಿ ಹಲವಾರು ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ...

  ಪುತ್ತೂರು : ಗ್ರಾಮ ಪಂಚಾಯತ್‌ ಸದಸ್ಯ ನೇಣಿಗೆ ಶರಣು..!

  ಪುತ್ತೂರು : ಪುತ್ತೂರಿನಲ್ಲಿ ಗ್ರಾಮ ಪಂಚಾಯತ್‌ ಸದಸ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಡನ್ನೂರು ಗ್ರಾಮದ ಕಾವು ಬಂಗ್ಲೆಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತ್‌ನ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆಗೆ...

  ಮುಂಬಯಿ ಬಂಟರ ಸಂಘದ ನೂತನ ನೂತನ ಅಧ್ಯಕ್ಷರಾಗಿ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಯ್ಕೆ

  ಮುಂಬಯಿಯ ಹೆಸರಾಂತ ತೆರಿಗೆ ಸಲಹೆಗಾರ, ಜನಪ್ರಿಯ ಸಂಘಟಕ, ಸಾಮಾಜಿಕ ಚಿಂತಕ, ಸಾಹಿತ್ಯ ಪ್ರೇಮಿ, ಕಲಾಪೋಷಕ, ಮಹಾದಾನಿ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಯಶಸ್ಸಿನ ಹಾದಿಯಲ್ಲಿ ನಡೆದು ಬಂದ ಹಾದಿಯ ಹೆಜ್ಜೆ ಗುರುತುಗಳನ್ನು ಸಮಸ್ತ ಬಂಟ ಸಮಾಜದ ಮುಂದೆ ಇಡಲು ಇಚ್ಛಿಸುತ್ತಿದ್ದೇವೆ.

  ಇತಿಹಾಸ ಪ್ರಸಿದ್ಧ ಎಲ್ಲೂರು ಕ್ಷೇತ್ರ ಶ್ರೀಮಹತೋಭಾರ ವಿಶ್ವೇಶ್ವರ ದೇವರು ನೆಲೆನಿಂತ ಪುಣ್ಯ ಸ್ಥಳ. ಇಲ್ಲಿನ ಮಲ್ಲಬೆಟ್ಟು ಪರಾರಿ ಭೋಜ ಶೆಟ್ಟಿ ಹಾಗೂ ಅಜೆಕಾರು ಮೂಲದ ಪ್ರತಿಷ್ಠಿತ ಮನೆತನದ ಶ್ರೀಮತಿ ನಳಿನಾ ಶೆಟ್ಟಿ ದಂಪತಿಗೆ ಮುದ್ದಿನ ಮಗನಾಗಿ ಜನಿಸಿದ ಪ್ರವೀಣ್ ಶೆಟ್ಟಿ ತನ್ನ ಬಾಲ್ಯದ ದಿನಗಳಿಂದಲೇ ಪ್ರತಿಭಾವಂತರು. ಕನ್ನಡ ಸಾಹಿತ್ಯ, ಯಕ್ಷಗಾನ ಅವರ ಆಸಕ್ತಿಯ ವಿಷಯಗಳು. ಪ್ರವೀಣ್ ಶೆಟ್ಟಿ ಅವರ ತೀರ್ಥರೂಪರು ಇರಂದಾಡಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಓರ್ವ ಆದರ್ಶ ಶಿಕ್ಷಕರಾಗಿ ಪರಿಶ್ರಮಿ ಕೃಷಿಕರಾಗಿದ್ದ ಭೋಜ ಶೆಟ್ಟಿಯವರು ತನ್ನ ಶಿಸ್ತು, ಸಿದ್ಧಾಂತ ಬದ್ಧ ಜೀವನ ಶೈಲಿ, ತನ್ನ ದಿಟ್ಟ ನೇರ ನಡೆ ನುಡಿಗಳಿಂದ ಪರಿಸರದಲ್ಲಿ ಜನಪ್ರಿಯರಾಗಿದ್ದರು.

  ತನ್ನ ಮಾತಾ ಪಿತರ ಆದರ್ಶ ಬದುಕನ್ನೇ ಮಾದರಿಯಾಗಿ ತನ್ನ ಜೀವನದಲ್ಲಿ ಸ್ವೀಕರಿಸಿದ ಪ್ರವೀಣ್ ತನ್ನ ತೀರ್ಥರೂಪರು ಶಿಕ್ಷಕರಾಗಿದ್ದ ಎಲ್ಲೂರು ಇರಂದಾಡಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮುಂದಿನ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಅದಮಾರು ಪದವಿ ಪೂರ್ವ ಕಾಲೇಜಿನಲ್ಲಿ ಪಡೆದರು. ನಂತರ ತನ್ನ ಬಿ.ಕಾಂ. ಪದವಿಯನ್ನು ಮೂಲ್ಕಿಯ ವಿಜಯಾ ಕಾಲೇಜಿನ ಮೂಲಕ ಉತ್ತಮ ಅಂಕಗಳೊಂದಿಗೆ ಪೂರೈಸಿ ಬಳಿಕ ಭವಿಷ್ಯ ಜೀವನಕ್ಕೊಂದು ಭದ್ರ ನೆಲೆಯ ಹುಡುಕಾಟದಲ್ಲಿದ್ದಾಗ ತನ್ನ ಚಿಕ್ಕಪ್ಪನ ಸಲಹೆ ಸಹಕಾರಗಳೊಂದಿಗೆ ವಾಣಿಜ್ಯ ನಗರಿ ಮುಂಬಯಿ ಕಡೆ ಮುಖ ಮಾಡಿದರು. ಮುಂಬಯಿ ನಗರದ ಪ್ರತಿಷ್ಠಿತ ಲೆಕ್ಕ ಪರಿಶೋಧನ ಮತ್ತು ತೆರಿಗೆ ಸಲಹೆಗಾರ ಸಂಸ್ಥೆಯಾಗಿದ್ದ ವೈ.ಆರ್.ಶೆಟ್ಟಿ ಎಂಡ್ ಕಂಪನಿಯಲ್ಲಿ ಆರ್ಟಿಕಲ್ ತರಬೇತಿಯಲ್ಲಿ ಯಶಸ್ಸು ಸಂಪಾದಿಸಿದರು.
  ಎರ್ಮಾಳ್ ರಘು ಶೆಟ್ಟಿಯವರು ವೈ.ಆರ್.ಶೆಟ್ಟರೆಂದೇ ಪ್ರಸಿದ್ಧರಾಗಿದ್ದರು. ಅವರು ಪ್ರವೀಣ್ ಅವರ ಅಧ್ಯಯನ ಏಕಾಗ್ರತೆ ಕುರಿತಂತೆ ಸಂತೋಷ ಪಟ್ಟು ಪ್ರವೀಣ್ ಅವರ ಉಜ್ವಲ ಭವಿಷ್ಯಕ್ಕಾಗಿ ಮನದುಂಬಿ ಹಾರೈಸಿ ಬೀಳ್ಕೊಟ್ಟರು. ಅವರ ಹಾರೈಕೆ ಸುಳ್ಳಾಗಲಿಲ್ಲ. ಇಂದು ಪ್ರವೀಣ್ ಬಿ ಶೆಟ್ಟಿ ಎಂಡ್ ಕಂ ತೆರಿಗೆ ಸಲಹೆಗಾರರು ಎಂಬ ಸಂಸ್ಥೆ ಮುಂಬಯಿಯಲ್ಲೇ ಪ್ರಸಿದ್ಧಿ ಪಡೆದಿದೆ. ಸುದೀರ್ಘ ಕಾಲದ ಅವಿರತ ಪರಿಶ್ರಮ ಕ್ಲಪ್ತ ಸಮಯದಲ್ಲಿ ಕರ್ತವ್ಯ ಮುಗಿಸಿ ಕೊಡುವ ಶಿಸ್ತು ಬದ್ಧತೆಯ ಪರಿಣಾಮ ಇಂದು ಸಾವಿರದ ಇನ್ನೂರು ಮುಂಬಯಿಯ ಪ್ರತಿಷ್ಠಿತ ಉದ್ಯಮಿಗಳು ಸಲಹೆ ಪಡೆಯಲು ಪ್ರವೀಣ್ ಶೆಟ್ಟಿಯವರ ಸಂಪರ್ಕದಲ್ಲಿದ್ದಾರೆ. ಇಂದಿಗೂ ಇಪ್ಪತ್ತರ ಯುವಕನಂತೆ ತನ್ನ ಉದ್ಯೋಗದಲ್ಲಿ ಉತ್ಸಾಹ ಹುಮ್ಮಸ್ಸಿನಿಂದ ತೊಡಗಿಸಿಕೊಳ್ಳುತ್ತಾರೆ.

  ಮನುಷ್ಯನು ತಾನು ಮಾಡುವ ಕರ್ಮ ಪರಿಶುದ್ಧವಾದರೆ ಭಗವಂತನೂ ಕೈಹಿಡಿದು ನಡೆಸುತ್ತಾನೆ ಎನ್ನುವುದಕ್ಕೆ ಪ್ರವೀಣ್ ಶೆಟ್ಟಿ ಅವರು ಉತ್ತಮ ನಿದರ್ಶನ. ತನ್ನ ಯೌವ್ವನದ ಹೊತ್ತಿಗೆ ಸಾಕಷ್ಟು ಸ್ಥಿತಿವಂತನಾದ ಕಾರಣ ಆ ಹೊತ್ತಿನ Most Eligible ಬ್ಯಾಚುಲರ್ ಆಗಿ ಗುರುತಿಸಿಕೊಂಡ ಪ್ರವೀಣ್ ಅವರಿಗೆ ಯೋಗ್ಯ ಕಾಲದಲ್ಲೆ ವಿವಾಹ ಯೋಗವೂ ಘಟಿಸಿತು. ಅದಮಾರು ಪೂರ್ಣ ಪ್ರಜ್ಞ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದ ಹಾಗೂ ಹವ್ಯಾಸಿ ಭಾಗವತರೂ ಆಗಿದ್ದ ಪಣಿಯೂರು ಬಡಗರ ಗುತ್ತು ಬಿ. ಶಿವರಾಮ ಶೆಟ್ಟರ ಏಕಮಾತ್ರ ಮುದ್ದಿನ ಮಗಳು ಪ್ರತಿಭಾವಂತೆ ಸ್ಫುರದ್ರೂಪಿ ನಯನೀತ ಅವರೊಂದಿಗೆ ಗುರು ಹಿರಿಯರ ಬಂಧು ಮಿತ್ರರ ಉಪಸ್ಥಿತಿಯಲ್ಲಿ ಸಪ್ತಪದಿ ತುಳಿದು ಪವಿತ್ರ ವಿವಾಹ ಬಂಧನದ ಮೂಲಕ ಗೃಹಸ್ಥಾಶ್ರಮ ಪ್ರವೇಶಿಸಿದ ಪ್ರವೀಣ್ ಶೆಟ್ಟಿಯವರ ಬಾಳಿನಲ್ಲಿ ನವವಧು ಭಾಗ್ಯಲಕ್ಷ್ಮಿಯಾಗಿ ಬಂದಳೆಂಬಂತೆ ಮುಂದೆ ತಾನು ಮಾಡುವ ಪ್ರತಿ ಉದ್ಯಮದಲ್ಲೂ ಯಶಸ್ಸಿನ ಮೇಲೆ ಯಶಸ್ಸನ್ನು ಸಂಪಾದಿಸಿದರು. ತಮ್ಮ ಅನುರಾಗ ದಾಂಪತ್ಯ ಜೀವನದಲ್ಲಿ ಮತ್ತೆ ಕೀರ್ತಿಲಕ್ಷ್ಮಿಯಾಗಿ ಮನೆತನ ಬೆಳಗುವ ನಂದಾ ದೀಪವೆಂಬಂತೆ ಹೆಣ್ಣು ಮಗಳೊಬ್ಬಳನ್ನು ಪಡೆದು ಆಕೆಗೆ ವಿವಾಹ ಯೋಗ್ಯ ವಯಸ್ಸಿನಲ್ಲೇ ತನ್ನ ಪರಿವಾರ ಪ್ರತಿಷ್ಠೆಗೆ ಸರಿ ಹೊಂದುವ ಯೋಗ್ಯ ವರನನ್ನು ಹುಡುಕಿ ಕನ್ಯಾದಾನವನ್ನು ಮಾಡಿ ಸಂತೃಪ್ತಿಯ ಉಸಿರಾಡಿದ ಪುಣ್ಯವಂತ ಪ್ರವೀಣ್ ಶೆಟ್ಟಿ. ಅತ್ಯಂತ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರನ್ನು ನೋಡಿದರೆ ಪ್ರವೀಣ್ ಶೆಟ್ಟಿ ಅವರ ಸಾಮಾಜಿಕ ಪ್ರತಿಷ್ಠೆ, ಜನರ ಪ್ರೀತಿ ವಿಶ್ವಾಸ ಎದ್ದು ಕಾಣುವಂತಿತ್ತು.

  ಕ್ರಮೇಣ ಪ್ರವೀಣ್ ಶೆಟ್ಟಿಯವರು ತನ್ನ ಉದ್ಯಮ ಕಾರ್ಯಕ್ಷೇತ್ರವನ್ನು ಅನ್ಯ ಉದ್ಯಮಗಳ ಸ್ಥಾಪನೆ ಮಾಡುವುದರ ಮೂಲಕ ತನ್ನ ಆರ್ಥಿಕ ತಳಹದಿಯನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಮುಂಬಯಿಯಲ್ಲಿ ಹಲವು ಕಡೆ ಪಾಲುದಾರಿಕೆಯಲ್ಲಿ ಬಂಡವಾಳ ತೊಡಗಿಸಿ ಉತ್ತಮ ಗುಣಮಟ್ಟದ ಹಾಸ್ಪಿಟ್ಯಾಲಿಟಿ, ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡರು. ತನ್ನ ಬಿಡುವಿಲ್ಲದ ದುಡಿಮೆಯ ನಡುವೆಯೂ ಬಡವರ ಕಣ್ಣೀರೊರೆಸುವ ಕಾರ್ಯದಲ್ಲೂ ಹಿಂದೆ ಬೀಳಲಿಲ್ಲ. ಒಬ್ಬ ಶಾಲಾ ಶಿಕ್ಷಕರ ಸುಪುತ್ರ ಇಂಥಹ ಸಾಧನೆ ಮಾಡಿದ ಉದಾಹರಣೆಗಳು ತೀರಾ ವಿರಳ. ತನ್ನ ಹೆಸರಿಗೆ ತಕ್ಕಂತೆ ಹಿಡಿದ ಕಾರ್ಯದಲ್ಲಿ ಪ್ರಾವೀಣ್ಯ ಸಂಪಾದಿಸಿದ ಶ್ರೀಯುತರು ಮುಂದೆ ಮಂಗಳೂರು ನಗರದಲ್ಲೂ ಪರಿಸರದ ಅವಶ್ಯಕತೆಗೆ ಹೊಂದುವ ಆಧುನಿಕ ರೀತಿಯ ಉದ್ಯಮ ಆರಂಭಿಸಿ ಯಶಸ್ಸು ಪಡೆದರು. ತಾನು ಹುಟ್ಟಿದ ಊರಿನ ಅಭಿವೃದ್ಧಿ ಕುರಿತ ಕನಸು ಕಂಡಿದ್ದ ಪ್ರವೀಣ್ ಎಲ್ಲೂರು ವಿಶ್ವೇಶ್ವರ ದೇವಳದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನೆಲುಬಾಗಿ ಮುಂಬಯಿ ಸಮಿತಿಯ ಕಾರ್ಯದರ್ಶಿಯಾಗಿ ಹಗಲು ರಾತ್ರಿ ಶ್ರಮಿಸಿ ಜನ್ಮಭೂಮಿಯ ಋಣ ಸಂದಾಯದಲ್ಲಿ ತಮ್ಮ ಯೋಗ ದಾನ ನೀಡಿದರು. ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯದಲ್ಲಿ ಸಹಕರಿಸಿದರು. ಪ್ರವೀಣ್ ಶೆಟ್ಟಿ ಅವರು ಗುಪ್ತ ದಾನದಲ್ಲಿ ವಿಶ್ವಾಸ ಇಟ್ಟವರು. ಮುಂಬಯಿಯಲ್ಲಿ ಸರ್ವ ವಿಧದಲ್ಲಿ ಸಮಾಧಾನಕರ ನೆಲೆ ಕಂಡು ಗಟ್ಟಿಯಾದ ಮೇಲೆ ಮುಂಬಯಿ ಬಂಟರ ಸಂಘವನ್ನು ತನ್ನ ಸೇವಾ ಕಾರ್ಯಗಳಿಗೆ ವೇದಿಕೆಯನ್ನಾಗಿ ಬಳಸಿಕೊಂಡು ತನ್ನ ಸಮುದಾಯದ ಜನರ ಏಳಿಗೆ ಕುರಿತು ಯೋಚಿಸುತ್ತಿದ್ದಂತೆ ತನ್ನದೇ ಕಾಲೇಜು ಮಿತ್ರರಾದ ಐಕಳ ಹರೀಶ್ ಶೆಟ್ಟಿ, ಸಿ ಎ ಶಂಕರ್ ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ ಮೊದಲಾದವರ ಸಮರ್ಥ ಮಾರ್ಗದರ್ಶನ ಪ್ರೋತ್ಸಾಹದಿಂದ ಕ್ರಮೇಣ ಸಂಘದ ಹಲವು ಜವಾಬ್ಧಾರಿಯುತ ಸ್ಥಾನಗಳನ್ನು ನಿರ್ವಹಿಸುತ್ತಾ ಇಂದು ಬಂಟ ಬಾಂಧವರ ಅಭಿಮಾನದ ಹಿತಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಇವರದು ಮಾತು ಕಡಿಮೆ. ಮಾತಾಡಿದರೆ ಬಹು ಸ್ವಾರಸ್ಯ, ಹಾಸ್ಯದ ಬುಗ್ಗೆ ಚಿಮ್ಮಿ ಹರಿಯುತ್ತದೆ. ಯಕ್ಷಗಾನ, ನಾಟಕ, ಸಂಗೀತ, ನೃತ್ಯ, ಸಾಹಿತ್ಯ ಇವೆಲ್ಲವೂ ಪ್ರವೀಣ್ ಶೆಟ್ಟಿ ಅವರಿಗೆ ಅಚ್ಚು ಮೆಚ್ಚು. ಇವರಿಗೆ ಬರೆಯುವ ಪ್ರತಿಭೆ ಇದ್ದವರ ಮೇಲೆ ಎಲ್ಲಿಲ್ಲದ ಅಭಿಮಾನ.

  ಯಶಸ್ಸು ಎನ್ನುವುದು ರಾತ್ರಿ ಬೆಳಗಾಗುವುದರೊಳಗೆ ದೊರೆಯಲಾರದು. ಅದಕ್ಕೆ ಸಂಘರ್ಷ ಪಡಬೇಕಾಗುತ್ತದೆ. ಜೀವನದ ನಿರ್ಧಿಷ್ಟ ಲಕ್ಷ್ಯವನ್ನು ಬೆನ್ನಟ್ಟುವ ಪ್ರಬಲ ಇಚ್ಛಾಶಕ್ತಿ, ಸಂಕಲ್ಪ ಶಕ್ತಿ, ಕ್ರಿಯಾ ಶಕ್ತಿಗಳಿರಬೇಕಾಗುತ್ತದೆ. ಪರಿಶ್ರಮಕ್ಕೆ ಪರ್ಯಾಯವಿಲ್ಲವೆಂಬಂತೆ ಮುನ್ನುಗ್ಗುವ ಛಲ ಇರಬೇಕಾಗುತ್ತದೆ. ಅಚಲ ಆತ್ಮವಿಶ್ವಾಸ, ದೇವರಲ್ಲಿ ದೃಢ ಭಕ್ತಿ, ಪ್ರಯತ್ನದಲ್ಲಿ ನಂಬಿಕೆಯೂ ಇರಬೇಕು. ಮುಖ್ಯವಾಗಿ ವ್ಯಕ್ತಿಯ ಜೀವನದ ಐದರಿಂದ ಇಪ್ಪತ್ತರವರೆಗಿನ ವಯಸ್ಸು ತುಂಬಾ ಮಹತ್ವದ್ದಾಗಿರುತ್ತದೆ. ಇದು ಮುಂದಿನ ಜೀವನ ಭದ್ರತೆಗೆ ಗಟ್ಟಿ ಬುನಾದಿಯಾಗಬೇಕು. ಈ ಅವಧಿಯ ಏಕಾಗ್ರತೆಯ ಜ್ಞಾನಾರ್ಜನೆ, ಚಿತ್ತ ಚಾಂಚಲ್ಯ ಬಾರದ ಮಾನಸಿಕತೆ, ಗುರು ಹಿರಿಯರ ನೀತಿ ಮಾತುಗಳ ಪಾಲನೆ, ದುರ್ವ್ಯಸನ ದುಶ್ಚಟಗಳಿಂದ ಹಾಗೂ ಕೆಟ್ಟವರ ಸಹವಾಸದಿಂದ ದೂರ ಇರುವುದು. ಇವುಗಳನ್ನೆಲ್ಲಾ ಕಟ್ಟು ನಿಟ್ಟಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ . ಇದಕ್ಕೆ ಮುಖ್ಯವಾಗಿ ಮನೆಯ ಪರಿಸ್ಥಿತಿ, ಸುತ್ತ ಮುತ್ತಣ ಪರಿಸರ ಎಲ್ಲವೂ ಅನುಕೂಲವಾಗಿರಬೇಕು. ಈ ನಿಟ್ಟಿನಲ್ಲಿ ಪ್ರವೀಣ್ ಶೆಟ್ಟಿ ಅದೃಷ್ಟವಂತರು. ಅವರು ಹುಟ್ಟಿದ ಕುಟುಂಬ ಪರಿಸರ ಎಲ್ಲವೂ ಚೆನ್ನಾಗಿ ಇತ್ತು. ಕೆಲವರು ಎಷ್ಟೇ ಪ್ರತಿಭಾವಂತರಿದ್ದರೂ ಮನೆಯ ಪರಿಸ್ಥಿತಿ, ಕೆಟ್ಟವರ ಸಂಗ, ಯೋಗ್ಯ ಮಾರ್ಗದರ್ಶನದ ಕೊರತೆಗಳಿಂದ ವಿದ್ಯಾರ್ಥಿ ಜೀವನ ಕೆಟ್ಟು ಹೋಗುತ್ತದೆ.
  ಈ ಅವಧಿಯ ಅಪಯಶ ಮುಂದಿನ ಜೀವನ ಪೂರ್ತಿ ಕಾಡುತ್ತದೆ. ಆದರೆ ಪ್ರವೀಣ್ ಶೆಟ್ಟಿ ಅವರು ಇವೆಲ್ಲಾ ಪ್ರತಿಕೂಲ ಪರಿಸ್ಥಿತಿಗೆ ಹೊರತಾಗಿದ್ದರು. ಪರಿಣಾಮ ಅವರು ಅಪೂರ್ವ ಯಶಸ್ಸನ್ನು ಸಂಪಾದಿಸಿದರು.

  ಇಂದು ಪ್ರವೀಣ್ ಶೆಟ್ಟಿಯವರು ಮುಂಬಯಿಯ ಹಾಗೂ ಬಂಟ ಸಮಾಜದ ಗಟ್ಟಿಗ ವ್ಯಕ್ತಿ. ಸ್ಪರ್ಧಾತ್ಮಕ ಯುಗವಿದು. ಇಲ್ಲಿ ಯಶಸ್ಸಿನ ಮಾಪನವೆಂದರೆ ಸ್ಪರ್ಧೆಯಲ್ಲಿ ಗೆಲ್ಲುವುದು. ಆದರೆ ಪ್ರವೀಣ್ ಶೆಟ್ಟಿಯವರು ಯಾರೊಂದಿಗೂ ಸ್ಪರ್ಧಿಸುವ ಮನಮಾಡದೆ ತನ್ನನ್ನು ತನ್ನೊಂದಿಗೆ ಸ್ಪರ್ಧೆಗೆ ಒಡ್ಡಿ ಕೊಂಡವರು. ಆದುದರಿಂದಲೇ ಜೀವನ ಪರೀಕ್ಷೆಯಲ್ಲಿ ಗೆದ್ದರು. ಮುಂದೆಯೂ ಅವರದು ಅದೇ ಸಿದ್ಧಾಂತ. ಬಂಟರ ಸಂಘಗಳ ವಿಷಯಕ್ಕೆ ಬಂದಾಗ ಇಲ್ಲಿ ಇವರ ವಿಶೇಷ ಯೋಗದಾನವನ್ನು ಖಂಡಿತಾ ಸ್ಮರಿಸಿಕೊಳ್ಳಲೇಬೇಕು. ಬಂಟರ ಸಂಘದ ಮೂಲಕ ಸಂಯೋಜಿಸಲ್ಪಡುವ ಯಾವುದೇ ಮಹತ್ತರ ಕಾರ್ಯಕ್ರಮಗಳಲ್ಲಿ ಇವರ ಆರ್ಥಿಕ ಅನುದಾನ ಗಮನೀಯ. ಮೂಲ್ಕಿಯಲ್ಲಿ ಅಸ್ತಿತ್ವಕ್ಕೆ ಬಂದ ವಿಶ್ವ ಬಂಟರ ಒಕ್ಕೂಟಗಳ ಸಂಘಟನೆಯ ಆಡಳಿತ ಕಛೇರಿಯ ನಿವೇಶನದ ಕಾರ್ಯದಲ್ಲೂ ಇವರ ಉಲ್ಲೇಖನೀಯ ಅನುದಾನ ಇದೆ. ಉಡುಪಿಯಲ್ಲಿ ನಡೆದ ಜಾಗತಿಕ ಬಂಟರ ಸಮ್ಮೇಳನದ ಎರಡು ದಿನಗಳ ಅದ್ದೂರಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಜ್ಜುಗೊಳಿಸಿದ ಒಂದು ವೇದಿಕೆಯೇ ಶ್ರೀಯುತರ ಮಾತೃಶ್ರೀ ಶ್ರೀಮತಿ ನಳಿನಾ ಭೋಜ ಶೆಟ್ಟಿ ಅವರ ಹೆಸರಿನಲ್ಲಿ ವಿರಚಿಸಲ್ಪಟ್ಟಿದ್ದರೆ ಅವರ ವಿಶೇಷ ಯೋಗದಾನವನ್ನು ನಾವು ಗಮನಿಸಬಹುದು. ಪ್ರವೀಣ್ ಶೆಟ್ಟಿ ಅವರ ಮಾತಾಪಿತರ ಬಗೆಗಿನ ಭಕ್ತಿ ಗೌರವ ಇತರರಿಗೆ ಮಾದರಿಯಾಗಬಲ್ಲುದು. ಇಂದಿನ ದಿನಗಳಲ್ಲಿ ಪ್ರವೀಣ್ ಭೋಜ ಶೆಟ್ಟರ ಹೆಸರು ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟರ ಜೊತೆ ಜೊತೆಗೆ ಬರುತ್ತಿರುವುದು ಹಾಗೂ ಪ್ರತಿ ಸಭೆ ಸಮಾರಂಭಗಳಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಪ್ರವೀಣ್ ಶೆಟ್ಟಿ ಅವರ ದಾನ ಗುಣವನ್ನು ಮುಕ್ತ ಕಂಠದಿಂದ ಶ್ಲಾಘಿಸುವುದನ್ನು ಗಮನಿಸಿದರೆ ಬಂಟ ಸಮುದಾಯಕ್ಕೆ ಶ್ರೀಯುತರ ಕೊಡುಗೆಯನ್ನು ಉಪೇಕ್ಷಿಸಲಾಗದು.

  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕ, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಹಾಗೂ ಮುಂಬಯಿ ಬಂಟರ ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿಯಾಗಿದ್ದ ಶ್ರೀಯುತ ಪ್ರವೀಣ್ ಭೋಜ ಶೆಟ್ಟರಿಂದ ಬಂಟ ಸಮಾಜಕ್ಕೆ ಬಹಳಷ್ಟು ನಿರೀಕ್ಷೆ ಇದೆ. ನಮ್ಮೆಲ್ಲರ ಆಶಯ ಈಡೇರಲಿ. ಪ್ರವೀಣ್ ಶೆಟ್ಟಿ ಅವರಂಥಹ ಅರ್ಹ ವಿನಮ್ರ ವ್ಯಕ್ತಿಗೆ ಮುಂಬಯಿ ಬಂಟರ ಸಂಘದಲ್ಲಿ ಅಧ್ಯಕ್ಷಗಿರಿ ಅರ್ಹವಾಗಿ ದೊರಕಿದೆ. ಪ್ರತಿ ಕಾರ್ಯದಲ್ಲೂ ಯಶ ದೊರೆಯಲಿ ಎಂದು ಹಾರೈಸೋಣ.

  Latest Posts

  ಬ್ರಹ್ಮಾವರ: ಮಹಿಳೆ ನಾಪತ್ತೆ

  ಬ್ರಹ್ಮಾವರ: ಇಲ್ಲಿನ ಉಪ್ಪಿನಕೋಟೆಯಲ್ಲಿ ವಾಸವಿದ್ದ ಲಲಿತಾ ಪೂಜಾರಿ (31) ಅವರು ನ. 30ರಿಂದ ನಾಪತ್ತೆಯಾಗಿದ್ದಾರೆ. ಬಳಿಕ ಮನೆಯ ಒಳಗಡೆ ಪರಿಶೀಲಿಸುವಾಗ ಚಿಕ್ಕ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ...

  ಹಾಸನ: 8 ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ

  ಮೈಸೂರು: ಜಿಲ್ಲೆಯ ಬಳ್ಳೆ ಆನೆ ಶಿಬರದಲ್ಲಿದ್ದಂತ ಸತತ 8 ಬಾರಿ ಮೈಸೂರಿನ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದಂತ ಅರ್ಜುನ (64) ಆನೆ ಒಂಟಿ ಸಲಗದ ದಾಳಿಯಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

  ‘ಭಾರತೀಯ ನೌಕಾಪಡೆ’ಯಲ್ಲಿ ವಿವಿಧ 275 ಹುದ್ದೆಗಳಿಗೆ ಅರ್ಜಿ ಆಹ್ವಾನ

  ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೌಕಾಪಡೆಯಲ್ಲಿ ಹಲವಾರು ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ...

  ಪುತ್ತೂರು : ಗ್ರಾಮ ಪಂಚಾಯತ್‌ ಸದಸ್ಯ ನೇಣಿಗೆ ಶರಣು..!

  ಪುತ್ತೂರು : ಪುತ್ತೂರಿನಲ್ಲಿ ಗ್ರಾಮ ಪಂಚಾಯತ್‌ ಸದಸ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಡನ್ನೂರು ಗ್ರಾಮದ ಕಾವು ಬಂಗ್ಲೆಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತ್‌ನ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆಗೆ...

  Don't Miss

  ಪ್ರಯಾಣಿಕರು, ಫುಟ್ಬೋರ್ಡ್‌ನಲ್ಲಿ ನೇತಾಡಿದರೆ ವಾಹನಗಳ ಪರವಾನಿಗೆ ರದ್ದು’ -ಎಸ್ಪಿ ಋಷ್ಯಂತ್

  ಮಂಗಳೂರು: ಸರಕಾರಿ ಬಸ ಸೇರಿದಂತೆ, ಖಾಸಗಿ ಬಸ್ಸುಗಳ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು, ಶಾಲಾ ವಾಹನಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು,...

  ಮಂಗಳೂರು: ಮನೆಗೆ ನುಗ್ಗಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

  ಮಂಗಳೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬಿಜೈ ನ್ಯೂರೋಡ್‌ನ‌ ಸಂಕೈಗುಡ್ಡದಲ್ಲಿ ನಡೆದಿದೆ. ನ.24ರ...

  ಬೆಳ್ತಂಗಡಿ: ಕಾರಿನ ಮೇಲೆ ಆನೆ ದಾಳಿ – ಓರ್ವನಿಗೆ ಗಾಯ

  ಬೆಳ್ತಂಗಡಿ: ನೆರಿಯ ಸಮೀಪದ ತೋಟತ್ತಾಡಿಯ ಬಯಲು ಬಸ್ತಿ ಬಳಿ ಆನೆಯೊಂದು ರಸ್ತೆಯಲ್ಲಿ ಚಲಿಸುತಿದ್ದ ಕಾರಿಗೆ ಹಾನಿ ಮಾಡಿದ ಪರಿಣಾಮ ಓರ್ವ ಗಾಯಗೊಂಡ ಘಟನೆ ನಡೆದಿದೆ. ಆನೆ ರಸ್ತೆಯಲ್ಲಿ ನಡೆದು ಹೋಗುತ್ತಿರುವುದನ್ನ...

  ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್!

  ಬೆಂಗಳೂರು: ನಗರದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಹಸುಗೂಸುಗಳ ಮಾರಾಟ ದಂಧೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪುಟ್ಟ ಕಂದಮ್ಮಗಳನ್ನು ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈವರೆಗೆ ಸುಮಾರು 60ಕ್ಕೂ ಹೆಚ್ಚು...

  ಮಂಗಳೂರು: ಸಾಕು ನಾಯಿಗಳಿಗೆ ಪಾಲಿಕೆಯಿಂದ ಡಾಗ್ ಲೆಸೆನ್ಸ್ ಪಡೆಯಲು ಸೂಚನೆ

  ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‍ಗಳಲ್ಲಿ ಈಗಾಗಲೇ ಬೀದಿ ನಾಯಿಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ಆದ್ದರಿಂದ ನಗರದ ಸಾರ್ವಜನಿಕರ ಆರೋಗ್ಯಕ್ಕೆ ತುಂಬಾ ಗಾಢವಾದ...