ಬೆಂಗಳೂರು : ಬಲಿಪಶುವನ್ನ ಅನುಚಿತವಾಗಿ ಸ್ಪರ್ಶಿಸಲಾಗಿದೆ ಎಂಬ ಆರೋಪವಿದ್ದರೆ, ಅದು ಪೋಕ್ಸೋ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ‘ಇತರ ಯಾವುದೇ ಕೃತ್ಯ’ಗಳ ಅಡಿಯಲ್ಲಿ ಬರುತ್ತದೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ಹೇಳಿದೆ.
ವಿನಾಕರಣ ಪೋಕ್ಸೊ ಕಾಯ್ದೆಯಡಿ ತನ್ನ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಆರೋಪಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯ ಇತ್ತೀಚಿನ ತೀರ್ಪಿನಲ್ಲಿ ತಿರಸ್ಕರಿಸಿದೆ.
