ಮಂಗಳೂರು: ರಾಜ್ಯ ಸರಕಾರವು ಇನ್‌ಸ್ಪೆಕ್ಟರ್, ಸರ್ಕಲ್ ಇನ್‌ಸ್ಪೆಕ್ಟರ್ ಸಹಿತ 66 ಮಂದಿಯನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ. ಬಜ್ಪೆ ಇನ್‌ಸ್ಪೆಕ್ಟರ್ ನಿರಂಜನ್ ಕುಮಾರ್ ಸಕಲೇಶಪುರ ಗ್ರಾಮಾಂತರ ವೃತ್ತಕ್ಕೆ, ಐಎಸ್‌ಡಿಯಲ್ಲಿದ್ದ ಸಂದೇಶ್ ಪಿಜಿಗೆ ಮೂಡುಬಿದಿರೆ ಠಾಣೆಗೆ, ಡಿಸಿಆರ್‌ಇ ಯಲ್ಲಿದ್ದ ಅಜ್ಮತ್ ಅಲಿಗೆ ಬಜ್ಪೆ ಠಾಣೆಗೆ, ಸಿಟಿ ಎಸ್‌ಬಿಯಲ್ಲಿದ್ದ ಮುಹಮ್ಮದ್ ಶರೀಫ್‌ಗೆ ಮಂಗಳೂರು ಸಂಚಾರ ಉತ್ತರ, ಪಣಂಬೂರಿನ ಸೋಮಶೇಖರ್ ಗೆ ಕದ್ರಿ ಠಾಣೆಗೆ, ಕದ್ರಿಯ ಅನಂತ ಪದ್ಮನಾಭರಿಗೆ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.
©2021 Tulunada Surya | Developed by CuriousLabs