ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ಹೊರಾಟ ಸಮಿತಿ ಅ.18ಕ್ಕೆ ಹಮ್ಮಿಕೊಂಡಿರುವ ಟೋಲ್ ಗೇಟ್ ತೆರವು ಕಾರ್ಯಾಚರಣೆ ಅಂಗವಾಗಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಟೋಲ್ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ.
ಸುರತ್ಕಲ್ ಟೋಲ್ ಗೇಟ್ ಬಳಿ 10 ಕೆಎಸ್ಆರ್ ಪಿ ತುಕಡಿಗಳು, 5 ಸಿಆರ್ ತುಕಡಿಗಳು ಸೇರಿದಂತೆ 450 ಪೊಲೀಸ್ ಕಾನ್ ಸ್ಟೇಬಲ್ ಗಳು ಹಾಗೂ 40 ಮಂದಿ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಸಂಘ ಸಂಸ್ಥೆಗಳು ಬೆಂಬಲವನ್ನು ಸೂಚಿಸಿದೆ. ಜೊತೆಗೆ ಹೋರಾಟ ಸಮಿತಿಯೂ ಪ್ರತಿಭಟನೆಗೆ ಅತ್ಯಧಿಕ ಸಂಖ್ಯೆಯಲ್ಲಿ ಜನವನ್ನು ಸೇರಿಸುವ ತಯಾರಿಯನ್ನೂ ಮಾಡಿಕೊಂಡಿದೆ.
ಅ.18ರಂದು ನಡೆಯುವ ಪ್ರತಿಭಟನೆಗೆ 5ಸಾವಿರ ಜನ ಸೇರುವ ಸಾಧ್ಯತೆ ಇದೆ ಎಂದು ಹೋರಾಟ ಸಮಿತಿಯ ಮೂಲಗಳು ತಿಳಿಸಿದೆ. ಆದ್ದರಿಂದ ಮುನ್ನೆಚ್ಚರಿಕಾ ದೃಷ್ಟಿಯಿಂದ ಅ.18ರಂದು ನಡೆಯುವ ಪ್ರತಿಭಟನೆಗೆ ಅಧಿಕ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.
