ಬೆಂಗಳೂರು: ಕೆಂಗೇರಿ ಸಂಚಾರಿ ಠಾಣಾ ಸಿಬ್ಬಂದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರಿಯಾಂಕಾ ಮೃತರು. ಇವರು ಕೆಂಗೇರಿ ಸಂಚಾರಿ ಪೊಲೀಸ್ ಸಿಬ್ಬಂದಿಯಾಗಿದ್ದರು. ಹೃದಯಾಘಾತದಿಂದ ಕೊನೆಯುಸಿರೆಳದಿದ್ದಾರೆ.
ನಿನ್ನೆ ರಾತ್ರಿ 11.30ರ ಸುಮಾರಿಗೆ ಪ್ರಿಯಾಂಕಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 2018ರಲ್ಲಿ ಮದುವೆಯಾಗಿದ್ದ ಪ್ರಿಯಾಂಕಾ ಅವರು 2021ರ ಕರೊನಾ ವೇಳೆ ಪತಿಯನ್ನು ಕಳೆದುಕೊಂಡಿದ್ದರು.
ಪತಿ ಸಾವಿನ ವೇಳೆ ಪ್ರಿಯಾಂಕಾ ಒಂದು ತಿಂಗಳ ಗರ್ಭಿಣಿ ಇದ್ದರು. ನಂತರ ಮಗುವನ್ನು ನೋಡಿಕೊಳ್ಳತ್ತಾ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಇದೀಗ ಪ್ರಿಯಾಂಕಾ ಸಾವು ಹಿನ್ನೆಲೆ ಮಗು ಅನಾಥವಾಗಿದೆ.