ಮಂಗಳೂರು: ರಕ್ಷಿತ್ ಶೆಟ್ಟಿ ನಟಿಸಿರು ಚಾರ್ಲಿ 777 ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈ ಸಿನಿಮಾದ ಕೊನೆಯಲ್ಲಿ ನಾಯಿಯನ್ನು ದತ್ತು ಪಡೆದುಕೊಳ್ಳಿ ಎಂದು ಸಂದೇಶವಿದೆಯಂತೆ. ಹಾಗಾಗಿಯೇ ಸಿನಿಮಾ ನೋಡಿದ ಅನೇಕರು ತಮ್ಮ ತಮ್ಮ ಶ್ವಾನ ಪ್ರೀತಿ ತೋರುತ್ತಿದ್ದಾರೆ. ಕೇವಲ ಸಾಮಾನ್ಯ ಸಿನಿಮಾ ನೋಡುಗರು ಮಾತ್ರವಲ್ಲ, ಪೊಲೀಸ್ ಇಲಾಖೆ ಕೂಡ ತಮ್ಮ ಶ್ವಾನ ದಳದ ನಾಯಿಗೆ ವಿಭಿನ್ನ ರೀತಿಯಲ್ಲಿ ಗೌರವ ನೀಡುವ ಮೂಲಕ ಸಿನಿಮಾವನ್ನು ನೆನಪಿಸಿಕೊಂಡಿದೆ.
ನಗರ ಪೊಲೀಸ್ ಕಮಿಷನರ್ ಅವರ ಕಚೇರಿ ಬಳಿ ನಾಯಿಮರಿಗೆ ಹೆಸರಿಡಲು ಮಾಡಲು ಪುಟ್ಟ ಸಮಾರಂಭವನ್ನೂ ಆಯೋಜಿಸಲಾಗಿತ್ತು.ಮೂರು ತಿಂಗಳ ಅಂದರೆ ಕಳೆದ ಮಾರ್ಚ್ ನಲ್ಲಿ ಲ್ಯಾಬ್ರಡಾರ್ ರಿಟ್ರೀವರ್ ನಾಯಿ ಮರಿ ಇತ್ತೀಚೆಗಷ್ಟೇ ಪೊಲೀಸ್ ಶ್ವಾನದಳಕ್ಕೆ ಸೇರ್ಪಡೆಯಾಗಿತ್ತು. ಬಂಟ್ವಾಳದ ಮಾಲೀಕರೊಬ್ಬರಿಂದ ಈ ನಾಯಿಮರಿಯನ್ನು ಶ್ವಾನ ಪಡೆಗಾಗಿ ಖರೀದಿಸಲಾಗಿತ್ತು. ಮುಂದಿನ ನಾಲ್ಕು ತಿಂಗಳ ಬಳಿಕ ಬೆಂಗಳೂರಿನ ಸೌತ್ ಸಿ ಆರ್ ನಲ್ಲಿ 6ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲು ನಿರ್ಧರಿಸಲಾಗಿದೆ. . ಬಳಿಕ ಈ ಶ್ವಾನ ಬಾಂಬ್ ನಿಷ್ಕ್ರೀಯ ಹಾಗೂ ಪತ್ತೆ ಮಾಡಲು ಇಲಾಖೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
