ನವದೆಹಲಿ : ಬಾಲಸೋರ್ ನಲ್ಲಿ ಸಂಭವಿಸಿದ ರೈಲು ಅಪಘಾತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನಂತ್ರ ಕಟಕ್ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲಿದ್ದಾರೆ.
ಅಂದ್ಹಾಗೆ, ಪ್ರಧಾನಿ ಮೋದಿಯವರು ಕಳೆದ ರಾತ್ರಿ ಒಡಿಶಾದಲ್ಲಿ ನಡೆದ ರೈಲು ಅಪಘಾತದಲ್ಲಿ 261 ಜನರು ಸಾವನ್ನಪ್ಪಿದ ನಂತರ ಅವರು ರೈಲ್ವೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಬಾಲಸೋರ್ನಲ್ಲಿ ಸಂಜೆ 7 ಗಂಟೆಗೆ ರೈಲಿನ ಒಂದು ಬೋಗಿ ಹಳಿ ತಪ್ಪಿದ ನಂತರ ಮೂರು ರೈಲುಗಳು ಡಿಕ್ಕಿ ಹೊಡೆದಿದ್ದವು.
ಅನೇಕ ರೈಲುಗಳನ್ನ ಒಳಗೊಂಡ ಅಪಘಾತದ ಬಗ್ಗೆ ರಕ್ಷಣಾ, ಚಿಕಿತ್ಸೆ ಮತ್ತು ಇತರ ವಿಷಯಗಳ ಬಗ್ಗೆ ಪಿಎಂ ಮೋದಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.