Thursday, August 11, 2022

ಮಂಗಳೂರು:ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದಲ್ಲಿ ಜೈಲು ಶಿಕ್ಷೆ ಶತಸಿದ್ಧ

ಮಂಗಳೂರು: ರಾಷ್ಟ್ರಧ್ವಜವನ್ನು ಮನೆಗಳು, ಕಟ್ಟಡಗಳ ಮೇಲ್ಗಡೆ ಹಾರಾಟ ಮಾಡಲು ಯಾವುದೇ ತೊಂದರೆಯಿಲ್ಲ. ಆದರೆ ಧ್ವಜಸಂಹಿತೆಯನ್ನು ಪಾಲಿಸದಿದ್ದಲ್ಲಿ ಮಾತ್ರ ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಶತಸಿದ್ಧ ಎಂದು ದ.ಕ.ಜಿ.ಪಂ ಮುಖ್ಯ...
More

  Latest Posts

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ‘ಆಟಿಡೊಂಜಿ ದಿನ’

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಗಸ್ಟ್-14 ರಂದು ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಪ್ರತೀಕ್ಷಾ ರಿಧಮಿಕ್ ವಾಯ್ಸ್ ಆಫ್...

  ಕಾರ್ಕಳ: ಮಹಿಳೆಗೆ ಸಂಬಂಧಿಕರಿಂದ ಕೊಲೆ ಬೆದರಿಕೆ: ದೂರು ದಾಖಲು

  ಕಾರ್ಕಳ: ಕಾರ್ಕಳ ಗಾಂಧಿಮೈದಾನದ ಬಳಿಯ ನಿವಾಸಿ ನಜೀಮಾ ಅವರಿಗೆ ಎರಡು ತಿಂಗಳ ಹಿಂದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿದ ಕುರಿತು ಮೂರು ಮಂದಿಯ ಮೇಲೆ ಕಾರ್ಕಳ ನಗರ...

  ಕೇರಳದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾದ ತಾಯಿ-ಮಗ!

  ಕೇರಳ: ಕೇರಳದ ಮಲಪ್ಪುರಂನ ಮಹಿಳೆಯೊಬ್ಬರು ತನ್ನ ಮಗ 10 ನೇ ತರಗತಿಯಲ್ಲಿದ್ದಾಗ ಓದಲು ಪ್ರಾರಂಭಿಸಿದ್ದರು. ಆದರೆ, ಇದು ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು. ಇವರ ಕಲಿಕೆಯು ಇದೀಗ...

  ಮಂಗಳೂರು: ವಿವಿ ಕಾಲೇಜಿನಲ್ಲಿ ‘ಭಾರತ ಮಾತಾ ಪೂಜಾ ದಿನ’ಕ್ಕೆ CFI ವಿರೋಧ: ಜಿಲ್ಲಾಧಿಕಾರಿಗೆ ಮನವಿ

  ಮಂಗಳೂರು: ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಆ.11 ರಂದು ಆಯೋಜಿಸಿರುವ ‘ಭಾರತ ಮಾತಾ ಪೂಜಾ ದಿನ’ ಕಾರ್ಯಕ್ರಮವನ್ನು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ವಿರೋಧಿಸಿದೆ. ಈ...

  ಮಂಗಳೂರು: ಜುಲೈ 1ರಿಂದಲೇ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ

  ಮಂಗಳೂರು: ರಾಜ್ಯದಲ್ಲಿ ಈ ಹಿಂದಿನಿಂದಲೂ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದೆ. ಆದರೆ ಅದರ ಸಮರ್ಪಕ ಜಾರಿ ಸಾಧ್ಯವಾಗಿಲ್ಲ. ಇದೀಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

  ಅದರಂತೆ ಎಲ್ಲ ಅಂಗಡಿ ಮುಂಗಟ್ಟು, ಕೈಗಾರಿಕೆ, ಮಾಲ್ ಗಳಿಗೂ ಸೂಚನೆ ರವಾನಿಸಿದ್ದಾರೆ. ಜುಲೈ 1ರಿಂದಲೇ ಜಾರಿಗೆ ಬರುವಂತೆ ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದಲ್ಲಿ ₹20ಸಾವಿರ ದವರೆಗೂ ದಂಡ ಕಟ್ಟಿಸಿಕೊಳ್ಳುವ ಶಿಕ್ಷೆಯನ್ನು ಮಾಲಕರು ಎದುರಿಸಬೇಕಾದೀತು. ಹಾಗಿದ್ರೆ ಏಕಬಳಕೆಯ ಯಾವೆಲ್ಲ ಪ್ಲಾಸ್ಟಿಕ್ ಗಳು ನಿಷೇಧಿಸಲಾಗುತ್ತದೆ ಅನ್ನೋದರ ಡಿಟೇಲ್ಸ್ ಇಲ್ಲಿದೆ.

  ಏಕಬಳಕೆಯ ಪ್ಲಾಸ್ಟಿಕ್ ಎಂದರೇನು?
  ಸಾಮಾನ್ಯವಾಗಿ ಗ್ರಾಹಕರು ಅಂಗಡಿ, ಮುಂಗಟ್ಟುಗಳಿಗೆ ತೆರಳುವ ವೇಳೆ ನೇರವಾಗಿ ಕೈ ಬೀಸಿಕೊಂಡು ಹೋಗುತ್ತಾರೆ. ಅಲ್ಲಿ ದಿನಸಿ ಇನ್ನಿತರ ವಸ್ತುಗಳನ್ನು ಖರೀದಿಸುತ್ತಾರೆ. ಗ್ರಾಹಕನಲ್ಲಿ ಯಾವುದೇ ಕೈಚೀಲ ಇಲ್ಲದೇ ಹೋದಾಗ ಅಂಗಡಿ ಮಾಲಿಕರು ಸಾಮಾನುಗಳನ್ನು ಪ್ಲಾಸ್ಟಿಕ್ ಕವರ್​ಗಳಲ್ಲಿ ಹಾಕಿಕೊಡುತ್ತಾನೆ.

  ಆ ರೀತಿ ತರುವ ಕವರ್ ಸಾಮಾನ್ಯವಾಗಿ ಒಂದು ಬಾರಿ ಬಳಸಿ, ಬಳಿಕ ಅದನ್ನು ಕಸದ ಡಬ್ಬಿಗೆ ಎಸೆಯುವವರೇ ಜಾಸ್ತಿ. ಹಾಗಾಗಿ, ಇಂತಹದ್ದನ್ನು ಏಕಬಳಕೆಯ ಪ್ಲಾಸ್ಟಿಕ್ ಎನ್ನಲಾಗುತ್ತದೆ. ಹಾಗಂತ ಏಕ ಬಳಕೆಯ ಪ್ಲಾಸ್ಟಿಕ್ ಅಷ್ಟಕ್ಕೇ ಸೀಮಿತ ಎಂದುಕೊಂಡರೆ ತಪ್ಪು. ಎಲ್ಲೆಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯಾಗುತ್ತೆ ಅಂತಾ ಇಲ್ಲಿ ನೋಡಿ..

  ಇದೆಲ್ಲಕ್ಕೂ ನಿಷೇಧ

  1. ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್
  2. ಪ್ಲಾಸ್ಟಿಕ್ ಬ್ಯಾನರ್ಗಳು
  3. ಪ್ಲಾಸ್ಟಿಕ್ ಬಂಟಿಂಗ್ಸ್
  4. ಪ್ಲಾಸ್ಟಿಕ್ ಫ್ಲೆಕ್ಸ್
  5. ಪ್ಲಾಸ್ಟಿಕ್ ಪ್ಲೇಟ್​ಗಳು
  6. ಪ್ಲಾಸ್ಟಿಕ್ ಧ್ವಜಗಳು
  7. ಪ್ಲಾಸ್ಟಿಕ್ ಕಪ್​ಗಳು
  8. ಪ್ಲಾಸ್ಟಿಕ್ ಸ್ಪೂನ್​ಗಳು
  9. ಅಂಟಿಕೊಳ್ಳುವ ಫಿಲ್ಮ್​ಗಳು
  10. ಡೈನಿಂಗ್ ಟೇಬಲ್ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳನ್ನು ನಿಷೇಧಿಸಲಾಗಿದೆ.

  ಇದೂ ಬಳಸುವಂತಿಲ್ಲ
  1. ಪ್ಲಾಸ್ಟಿಕ್ ಇಯರ್ ಬಡ್ಗಳು
  2. ಬಲೂನ್ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್ಗಳು
  3. ಪ್ಲಾಸ್ಟಿಕ್ ಧ್ವಜಗಳು
  4. ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್ಗಳು
  5. ಪ್ಲಾಸ್ಟಿಕ್ ಐಸ್ಕ್ರೀಮ್ ಸ್ಟಿಕ್ಗಳು
  6. ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟೈರೀನ್ (ಥರ್ಮಾಕೋಲ್)
  7. ಸ್ವೀಟ್ ಬಾಕ್ಸ್ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮ್ಗಳು
  8. ಆಮಂತ್ರಣ ಪತ್ರಗಳು
  9. ಸಿಗರೇಟ್ ಪ್ಯಾಕೆಟ್ಗಳು
  10. 100 ಮೈಕ್ರಾನ್ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಬ್ಯಾನರ್ಗಳು

  ಯಾರಿಗೆಲ್ಲ ಎಫೆಕ್ಟ್?
  ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಪ್ರಕಾರ ಈ ಕೆಳಗಿನ ಪ್ರತಿಯೊಂದಕ್ಕೂ ನಿಯಮ ಅನ್ವಯಿಸುತ್ತದೆ.

  1. ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರುಗಳು
  2. ಇ-ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಮಾಲ್ಗಳು/ಮಾರುಕಟ್ಟೆ ಸ್ಥಳ
  3. ಶಾಪಿಂಗ್ ಕೇಂದ್ರಗಳು, ಸಿನಿಮಾ ಥಿಯೇಟರ್, ಪ್ರವಾಸೋದ್ಯಮ ಸ್ಥಳ, ಶಾಲಾ ಕಾಲೇಜುಗಳು, ಕಛೇರಿ ಸಂಕೀರ್ಣಗಳು, ಆಸ್ಪತ್ರೆ, ಇತರೆ ಸಂಸ್ಥೆಗಳು ಮತ್ತು ಸಾಮಾನ್ಯಸಾರ್ವಜನಿಕರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವಂತೆ ಸೂಚಿಸಲಾಗಿದೆ.

  ಯಾವಾಗಿನಿಂದ ನಿಯಮ ಜಾರಿ
  ಇದೇ ಜುಲೈ 1ರಿಂದ ಜಾರಿ ಬರುವಂತೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಹೇರಲಾಗಿದೆ.

  ಪ್ಲಾಸ್ಟಿಕ್ ದಾಸ್ತಾನು ಇರಿಸಬೇಡಿ
  ಜೂನ್ 30, 2022 ರೊಳಗೆ ಮೇಲೆ ತಿಳಿಸಲಾದ ಏಕಬಳಕೆಯ ಪ್ಲಾಸ್ಟಿಕ್ ಶೂನ್ಯ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಘಟಕಗಳಿಂದ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಪಾಲಿಕೆಯು ಸೂಚಿಸಿದೆ.

  ಅಲ್ಲದೇ, ಎಲ್ಲಾಇ-ಕಾಮರ್ಸ್ ಕಂಪನಿಗಳ ವೆಬ್​ಸೈಟ್​ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳ ಮಾರಾಟ ಮತ್ತು ಪ್ರದರ್ಶನ/ ಜಾಹೀರಾತುಗಳನ್ನು ಕೂಡಾ ಜುಲೈ 1, 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

  ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ದಂಡ
  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ SMW & Sanitisation ಉಪನಿಯಮಗಳಡಿ ₹200 ರಿಂದ ₹20ಸಾವಿರದವರೆಗೂ ದಂಡ ವಿಧಿಸಬಹುದಾಗಿದೆ. ಮಾತ್ರವಲ್ಲದೇ, ಉದ್ದಿಮೆ ಪರವಾನಗಿ ರದ್ದುಗೊಳಿಸುವುದು ಹಾಗೂ ಉದ್ದಿಮೆಯನ್ನೇ ಸ್ಥಗಿತಗೊಳಿಸುವುದಾಗಿ ಪಾಲಿಕೆ ಆಯುಕ್ತರು ಎಚ್ಚರಿಸಿದ್ಧಾರೆ.

  Latest Posts

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ‘ಆಟಿಡೊಂಜಿ ದಿನ’

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಗಸ್ಟ್-14 ರಂದು ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಪ್ರತೀಕ್ಷಾ ರಿಧಮಿಕ್ ವಾಯ್ಸ್ ಆಫ್...

  ಕಾರ್ಕಳ: ಮಹಿಳೆಗೆ ಸಂಬಂಧಿಕರಿಂದ ಕೊಲೆ ಬೆದರಿಕೆ: ದೂರು ದಾಖಲು

  ಕಾರ್ಕಳ: ಕಾರ್ಕಳ ಗಾಂಧಿಮೈದಾನದ ಬಳಿಯ ನಿವಾಸಿ ನಜೀಮಾ ಅವರಿಗೆ ಎರಡು ತಿಂಗಳ ಹಿಂದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿದ ಕುರಿತು ಮೂರು ಮಂದಿಯ ಮೇಲೆ ಕಾರ್ಕಳ ನಗರ...

  ಕೇರಳದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾದ ತಾಯಿ-ಮಗ!

  ಕೇರಳ: ಕೇರಳದ ಮಲಪ್ಪುರಂನ ಮಹಿಳೆಯೊಬ್ಬರು ತನ್ನ ಮಗ 10 ನೇ ತರಗತಿಯಲ್ಲಿದ್ದಾಗ ಓದಲು ಪ್ರಾರಂಭಿಸಿದ್ದರು. ಆದರೆ, ಇದು ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು. ಇವರ ಕಲಿಕೆಯು ಇದೀಗ...

  ಮಂಗಳೂರು: ವಿವಿ ಕಾಲೇಜಿನಲ್ಲಿ ‘ಭಾರತ ಮಾತಾ ಪೂಜಾ ದಿನ’ಕ್ಕೆ CFI ವಿರೋಧ: ಜಿಲ್ಲಾಧಿಕಾರಿಗೆ ಮನವಿ

  ಮಂಗಳೂರು: ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಆ.11 ರಂದು ಆಯೋಜಿಸಿರುವ ‘ಭಾರತ ಮಾತಾ ಪೂಜಾ ದಿನ’ ಕಾರ್ಯಕ್ರಮವನ್ನು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ವಿರೋಧಿಸಿದೆ. ಈ...

  Don't Miss

  ಇಸ್ರೋ ಐತಿಹಾಸಿಕ ಸಾಧನೆ: ವಿದ್ಯಾರ್ಥಿಗಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಇಸ್ರೋದಿಂದ ಉಡಾವಣೆ

  ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕ ಮಿಷನ್ (ಎಸ್‌ಎಸ್‌ಎಲ್‌ವಿ) ಅನ್ನು ಪ್ರಾರಂಭಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್...

  ಮಂಗಳೂರು: ಸಮುದ್ರ ಪ್ರಕ್ಷುಬ್ಧ-ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಆಗಸ್ಟ್ 8ರವರೆಗೆ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರಿಕೆ...

  ಕುಂದಾಪುರ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯ ನಗ-ನಗದು ಕಳವು

  ಕುಂದಾಪುರ: ಮನೆಮಂದಿ ಕುಟುಂಬ ಸಮೇತ ತೀರ್ಥಯಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ. ನಗ ಮತ್ತು ನಗದು ಕಳವುಗೈದ ಘಟನೆ ಕುಂಭಾಶಿ ಗ್ರಾಮದ ವಿನಾಯಕ ನಗರದಲ್ಲಿ...

  ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್ : ವಿದೇಶದ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ನೇಮಕಾತಿಗೆ ಇಂದು ಸಂದರ್ಶನ

  ಧಾರವಾಡ : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಉದಯೋನ್ಮುಖ ಯೋಜನೆಯಾದ ಅಂತರರಾಷ್ಟ್ರೀಯ ವಲಸೆ ಕೇಂದ್ರದ ಮುಖಾಂತರ ದುಬೈನಲ್ಲಿರುವ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯೊಂದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಕರ್ನಾಟಕ ಕೌಶಲ್ಯಾಭಿವೂದ್ಧಿ ನಿಗಮವು...

  ಉಡುಪಿ: ಚಾಕಲೇಟ್ ನುಂಗಿ ಬಾಲಕಿ ಸಾವನ್ನಪ್ಪಿದ ಪ್ರಕರಣ; ಬಾಲಕಿ ಸಾವಿಗೆ ವೈದ್ಯಕೀಯ ವರದಿಯಿಂದ ಸ್ಪಷ್ಟನೆ

  ಉಡುಪಿ: ಬೈಂದೂರಿನಲ್ಲಿ ಚಾಕಲೇಟ್ ನುಂಗಿ ಬಾಲಕಿ ಸಾವನ್ನಪ್ಪಿದ್ದಾಳೆನ್ನಲಾದ ಪ್ರಕರಣದ ವೈದ್ಯಕೀಯ ವರದಿ ಇದೀಗ ಬಂದಿದ್ದು, ಇದರಲ್ಲಿ ಆಕೆಯ ಸಾವಿಗೆ ಚಾಕಲೇಟ್‌ ನುಂಗಿರುವುದು ಕಾರಣವಲ್ಲ, ಬದಲಾಗಿ ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು...