Sunday, September 15, 2024
spot_img
More

    Latest Posts

    ಫೆಬ್ರವರಿ 24 ರಂದು ಕರಾವಳಿಯಾದ್ಯಂತ ಪಿಲಿ ತುಳು ಚಿತ್ರ ಅದ್ದೂರಿ ಬಿಡುಗಡೆ

    ಮಂಗಳೂರು: ತುಳು ಚಲನಚಿತ್ರ ” ಪಿಲಿ ” ಬಿಡುಗಡೆ ಸಂಬಂಧ ಇಂದು (ದಿನಾಂಕ 22-02-2023) ಬುಧವಾರ ಸಂಜೆ 4 ಗಂಟೆಗೆ ಮಂಗಳೂರು ನಗರದ ವುಡ್ ಲಾಂಡ್ಸ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

    ಕಾರಣಾಂತರಗಳಿಂದ ನವಂಬರ್ 10 ರಂದು ಅದ್ದೂರಿಯಾಗಿ ಕರಾವಳಿಯಾದ್ಯಂತ ತೆರೆ ಕಾಣಬೇಕಿದ್ದ ಎನ್. ಎನ್. ಎಂ.ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ಪಿಲಿ ತುಳು ಚಿತ್ರ ಬಿಡುಗಡೆಗೆ ತಡೆಯುಂಟಾಗಿದ್ದ ಕಾರಣ ಸಮಸ್ತ ಚಿತ್ರತಂಡಕ್ಕೆ ಅಪಾರ ನೋವು ಹಾಗೂ ಸಿನಿಪ್ರಿಯರಿಗೆ ಅಗಾಧ ನಿರಾಸೆಯಾಗಿತ್ತು… ಕಷ್ಟ ಪಟ್ಟು ತುಳು ಭಾಷೆಯ ಅಭಿಮಾನದಿಂದ ಚಿತ್ರವನ್ನು ತಯಾರಿಸಿ ಅದನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಿದಾಗ ಅದಕ್ಕೆ ಅಡ್ಡಿ ಪಡಿಸಿರುವುದು ಒಂದು ಬಹಳ ಬೇಸರದ ಸಂಗತಿಯಾಗಿದೆ . ಈ ಎಲ್ಲ ಅಡಚಣೆಗೆ ಸಮಸ್ತ ಪಿಲಿ ಚಿತ್ರತಂಡ ವಿಷಾದ ವ್ಯಕ್ತ ಪಡಿಸುತ್ತದೆ. ಪ್ರತಿ ಸಂದರ್ಭದಲ್ಲಿ ತುಳು ಚಲನಚಿತ್ರ ರಂಗಕ್ಕೆ ಬೆನ್ನೆಲುಬಾಗಿ ನಿಂತಿರುವ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು , ಸೇರಿದಂತೆ ಹಲವಾರು ತುಳುನಾಡಿನ ಗಣ್ಯರ ಬೆಂಬಲದೊಂದಿಗೆ ಪಿಲಿ ಚಿತ್ರ ಬಿಡುಗಡೆಗೆ ಎದುರಾಗಿದ್ದ ಆತಂಕ ಈಗ ನಿವಾರಣೆಯಾಗಿದ್ದು ನಿಮ್ಮೆಲ್ಲರ ನಿರೀಕ್ಷೆಯಂತೆ ಫೆಬ್ರವರಿ 24 ರಂದು ಈ ಹಿಂದಿನ ಸಿದ್ಧತೆಯಂತೆ, ಭರ್ಜರಿಯಾಗಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪಿಲಿ ಸಿನಿಮಾವನ್ನು ಮುಕ್ತ ಮನೋಭಾವದಿಂದ ವೀಕ್ಷಿಸಿ, ನಿಮ್ಮ ಅದೇ ಉತ್ಸಾಹ ಪ್ರೀತಿ ಹಾಗೂ ಪ್ರೋತ್ಸಾಹವನ್ನು ಚಿತ್ರ ತಂಡ ಅಪೇಕ್ಷಿಸುತ್ತದೆ.

    ದುಬೈನಲ್ಲಿ ಈಗಾಗಲೆ ಚಿತ್ರ ದ ಶೋ ನಡೆದಿದ್ದು, ಅಪಾರ ಜನ ಮೆಚ್ಚುಗೆ ಪಡೆದಿದೆ, ಆತ್ಮನಂದ ರೈ ನಿರ್ಮಾಪಕರಾಗಿದ್ದು, ಭರತ್ ರಾಮ್ ರೈ ಸಹ-ನಿರ್ಮಾಕರಾಗಿರುವ ಈ ಸಿನಿಮಾಕ್ಕೆ ಭರವಸೆಯ ಯುವ ನಟ ಭರತ್ ಭಂಡಾರಿಯವರು ಕಥೆ ಬರೆದು, ಮೊದಲ ಬಾರಿಗೆ ನಾಯಕ ನಟನಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ ಇದಾಗಿದ್ದು ಈ ಚಿತ್ರದ ಛಾಯಾಗ್ರಹಣ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿರುವವರು ‘ಮೈನೇಮ್ ಈಸ್ ಅಣ್ಣಪ್ಪ’ ಚಿತ್ರದ ನಿರ್ದೇಶಕ, ಮಯೂರ್.ಆರ್.ಶೆಟ್ಟಿ. ಇವರು ಎಕ್ಕಸಕ, ಪಿಲಿಬೈಲ್ ಯಮುನಕ್ಕ ಸೇರಿದಂತೆ ಹಲವಾರು ತುಳು ಕನ್ನಡ ಚಿತ್ರಗಳಿಗೆ ಸಹನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ, ಚಿತ್ರ ಸಾಹಿತಿಯಾಗಿ ಹೆಸರು ಮಾಡಿರುತ್ತಾರೆ.
    ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳಲ್ಲಿ ಒಂದಾಗಿರುವ ಹುಲಿ ಕುಣಿತದ ಕಥಾವಸ್ತುವನ್ನು ಹೊಂದಿರುವಂತಹ ಚಿತ್ರ ‘ಪಿಲಿ’. ತುಳುನಾಡಿನಲ್ಲಿ ಹುಲಿಕುಣಿತಕ್ಕೆ ಅದರದ್ದೇ ಆದ ಗೌರವ ಮತ್ತು ಇತಿಹಾಸ ಇದೆ. ಆ ಗೌರವಕ್ಕೆ ಧಕ್ಕೆ ಬಂದಾಗ, ಆಚರಣೆಯಲ್ಲಿ ಆಗುವಂತಹ ಲೋಪಗಳಿಗೆ ಏನೆಲ್ಲ ದೋಷ, ದುರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಚಿತ್ರದ ಮೂಲಕ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಇಂತಹ ಒಂದು ಗಟ್ಟಿತನವಿರುವ ಕಥೆಯ ಜೊತೆಗೆ, ಕೌಟುಂಬಿಕ ಮನರಂಜನೆ, ಹಾಸ್ಯ, ಪ್ರೀತಿ ಪ್ರೇಮ, ಸುಂದರ ಹಾಡುಗಳ ಜೊತೆಗೆ ಮೈ ನವಿರೇಳಿಸುವ ಸಾಹಸ ಮತ್ತು ಕತೆಯಲ್ಲಿ ಕೊನೆವರೆಗೂ ಸಾಗುವ ನಿಗೂಢತೆ ಇವೆಲ್ಲವೂ ಪ್ರೇಕ್ಷಕರಿಗೆ ಪರಿಪೂರ್ಣ ಮನರಂಜನೆಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

    ಈ ಚಿತ್ರದಲ್ಲಿ ಶ್ರೀ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್‌ರವರು ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ನಾಯಕನಾಗಿ ಭರತ್ ಭಂಡಾರಿ, ಜೊತೆಗೆ ಸ್ವಾತಿ ಶೆಟ್ಟಿ, ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪ ಡಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್‌ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಪ್ರಭುದ್ಧ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.
    ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಗಣೇಶ್ ನೀರ್ಚಾಲ್ ಅವರ ಸಂಕಲನ ಈ ಚಿತ್ರಕ್ಕಿದೆ. ಸುಂದರವಾದ ನಾಲ್ಕು ಹಾಡುಗಳಿಗೆ ಮಯೂರ್ ಆರ್. ಶೆಟ್ಟಿ, ಡಿ.ಬಿ.ಸಿ ಶೇಖರ್ ಮತ್ತು ಕೆ.ಕೆ. ಪೇಜಾವರ್ ಸಾಹಿತ್ಯ ಬರೆದಿದ್ದಾರೆ. ಹಾಡುಗಳು ಬಿಡುಗಡೆಗೊಂಡಿದ್ದು ಅಪಾರ ಜನ ಮಣ್ಣನೆಯನ್ನು ಪಡೆದಿದೆ ಈ ಚಿತ್ರಕ್ಕೆ ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ನಿರ್ದೇಶನ ತಂಡದಲ್ಲಿ ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಚಾರ ಕಲೆ ವಿನ್ಯಾಸ ದೇವಿ ರೈ ಮತ್ತು ಎಡಿಟಿ ವ್ ಕ್ರಿಯೇಷನ್ಸ್ ರವರದ್ದಾಗಿದೆ.ತುಳುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಮಂಗಳೂರಿನ ಸುತ್ತಮುತ್ತ ಇರುವಂತಹ ಹಲವಾರು ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಚಿತ್ರ ಬಹಳ ಸುಂದರವಾಗಿ ಮೂಡಿಬಂದಿದ್ದು ಚಿತ್ರ ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ. ಮಾತ್ರವಲ್ಲದೆ ಈ ಚಿತ್ರವು ತುಳು ಚಿತ್ರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ನಂಬಿಕೆ ಚಿತ್ರ ತಂಡದ್ದಾಗಿದೆ.

    ತುಳುನಾಡಿನ ಸಮಸ ಚಿತ್ರ ಪ್ರೇಮಿಗಳು ಚಿತ್ರಮಂದಿರಕ್ಕೆ ಬಂದು ಈ ಚಿತ್ರವನ್ನು ವೀಕ್ಷಿಸಿ, ಹರಸಿ ಹಾರೈಸಬೇಕಾಗಿ ‘ಪಿಲಿ’ ಚಿತ್ರತಂಡ ಕೋರಿದೆ.

    ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಟ ಭರತ್ ಭಂಡಾರಿ , ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಚಲನಚಿತ್ರ ತಂಡದ ಕಾನೂನು ಸಲಹೆಗಾರರಾದ ನ್ಯಾಯವಾದಿ ನವೀನ್ ,ಹಾಗೂ ಕುಮಾರ್ , ಚಲನಚಿತ್ರ ನಿರ್ದೇಶಕ ಮಯೂರ ಆರ್ . ಶೆಟ್ಟಿ , ಕಲಾವಿದರು ಸಂದೇಶ್ , ತಿಲಕ್ ,ತುರವೇ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮತ್ತಿತರರು ಉಪಸ್ಥಿತರಿದ್ದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss